ರೀಟೇಲ್ ಮಳಿಗೆ ಮುಚ್ಚಿದ ಅಮೆರಿಕಾದ ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್ಸ್

ನ್ಯೂಯಾರ್ಕ್, ಜ ೧೭,  ಅಮೆರಿಕಾ  ಮೂಲದ ಎಲೆಕ್ಟ್ರಾನಿಕ್ಸ್   ದೈತ್ಯ   ಬೋಸ್   ರಿಟೇಲ್  ಸ್ಟೋರ್ಸ್   ಪ್ರಮುಖ ನಿರ್ಧಾರ ಕೈಗೊಂಡಿವೆ. ಉತ್ತರ ಅಮೆರಿಕಾ, ಯುರೋಪ್, ಜಪಾನ್ ಮತ್ತು ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿನ   ೧೧೯ ತನ್ನ ಚಿಲ್ಲರೆ ವ್ಯಾಪಾರ  ಮಳಿಗೆಗಳನ್ನು  ಮುಚ್ಚುವುದಾಗಿ ಪ್ರಕಟಿಸಿದೆ.  ಜನರು ಆನ್‌ಲೈನ್ ಶಾಪಿಂಗ್‌ಗೆ  ಹೆಚ್ಚಿನ ಆದ್ಯತೆ ನೀಡುತ್ತಿರುವ  ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು  ಸಂಸ್ಥೆ  ತಿಳಿಸಿದೆ.  ಬೋಸ್ ಚಿಲ್ಲರೆ  ವ್ಯಾಪಾರ ಮಳಿಗೆಗಳಲ್ಲಿ  ಆಡಿಯೋ, ಸ್ಪೀಕರ್ , ಹೆಡ್‌ಫೋನ್  ಮತ್ತಿತರ ಎಲೆಕ್ಟ್ರಾನಿಕ್ಸ್  ಉತ್ಪನ್ನಗಳಿಗೆ  ಈ  ಮಳಿಗೆಗಳು  ಜಗತ್ತಿನೆಲ್ಲೆಡೆ  ತಮ್ಮದೇ ಆದ  ಬ್ರಾಂಡ್   ಹೊಂದಿವೆ.ತನ್ನ ಉತ್ಪನ್ನಗಳನ್ನು ಪ್ರಮುಖ  ಆನ್ ಲೈನ್  ವ್ಯಾಪಾರ ಸಂಸ್ಥೆಗಳಾದ  ಬೆಸ್ಟ್ ಬೈ.  ಅಮೆಜಾನ್  ಹೆಚ್ಚಿನ ಪ್ರಮಾಣದಲ್ಲಿ  ಖರೀದಿಸುತ್ತಿವೆ  ಎಂದು ಹೇಳಿದೆ. ಜನರು ಈಗ ಆನ್‌ಲೈನ್ ಶಾಪಿಂಗ್‌ಗೆ ಒಲವು ತೋರುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕ್ರಮದಿಂದ ಎಷ್ಟು ಮಂದಿ ಉದ್ಯೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಕಂಪನಿ ಮೂಲಗಳು ಬಹಿರಂಗಪಡಿಸಿಲ್ಲ. ಬೋಸ್   ಉಪಾಧ್ಯಕ್ಷ, ಕೋಲೆಟ್ ಬ್ರೂಕ್,  ತನ್ನ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಕಂಪನಿ  ನಿರ್ಧಾರ  ಕೈಗೊಂಡಿದೆ ಎಂದು ಹೇಳಿದ್ದಾರೆ. ಕಂಪನಿಯ  ನಿರ್ಧಾರಕ್ಕೆ   ಬೆಂಬಲ ನೀಡಿರುವ ತಮ್ಮ ಉದ್ಯೋಗಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಕಂಪನಿ ಗ್ರಾಹಕರ ಅಗತ್ಯತೆಗಳನ್ನು ಕೇಂದ್ರೀಕರಿಸಿ, ಸಿಡಿಗಳು, ಡಿವಿಡಿಗಳು ಹಾಗೂ ಮನರಂಜನಾ  ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು  ಹೇಳಿದ್ದಾರೆ.ವಾಣಿಜ್ಯ  ಸುದ್ದಿಗಳ  ಪ್ರಕಾರ   ಅಮೆರಿಕಾ ಚಿಲ್ಲರೆ ವ್ಯಾಪಾರಿಗಳು ೨೦೧೯ ರಲ್ಲಿ ೯,೩೦೨ ರೀಟೇಲ್ ಮಳಿಗೆಗಳನ್ನು ಮುಚ್ಚಿದ್ದಾರೆ. ಕೋರ್ ಸೈಟ್   ರಿಸರ್ಚ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಶೇಕಡಾ ೫೯ ರಷ್ಟು ಚಿಲ್ಲರೆ ಮಳಿಗೆಗಳು ೨೦೧೮ ರಲ್ಲಿ ಮುಚ್ಚಿವೆ. ಪ್ರಸ್ತುತ  ಶೇ ೧೬ ರಷ್ಟಿರುವ  ಆನ್‌ಲೈನ್ ಮಾರಾಟ  ೨೦೨೬ ರ ವೇಳೆಗೆ ಶೇ  ೨೫ಕ್ಕೆ ಹೆಚ್ಚಾಗಲಿದೆ  ಎಂದು ಯುಬಿಎಸ್ ವಿಶ್ಲೇಷಕರು  ತಮ್ಮ  ಅಧ್ಯಯನದಲ್ಲಿ ಅಂದಾಜಿಸಿದ್ದಾರೆ.