ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿ ಹಣ ದುರ್ಬಳಕೆ; ಅಂಬಿಕಾ ಜಾಲಗಾರ ಆರೋಪ
Ambika's network accuses Chowdaiah of misusing development funds for his post
ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿ ಹಣ ದುರ್ಬಳಕೆ; ಅಂಬಿಕಾ ಜಾಲಗಾರ ಆರೋಪ
ರಾಣಿಬೆನ್ನೂರು 06: ತಾಲೂಕಿನ ಸುಕ್ಷೇತ್ರ ಚೌಡಯ್ಯದಾನಪುರ ಗ್ರಾಮದ 12 ಶತಮಾನದ ಬಸವಣ್ಣನವರ ಸಮಕಾಲಿನವರಾದ ಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ (ಮೂಲಗದ್ದುಗೆ)ಯು ತುಂಗಭದ್ರ ನದಿ ತಟದಲ್ಲಿದ್ದು ಅತಿವೃಷ್ಠಿಯಿಂದ ಪ್ರತಿವರ್ಷವು ಮುಳುಗಡೆಯಾಗುತ್ತಿದೆ. ಗದ್ದುಗೆ ಅಭಿವೃದ್ಧಿಗೆ ಕರ್ನಾಟಕ ನೀರಾವರಿ ನಿಗಮದಿಂದ ಆರ್,ಆರ್ ಪ್ಯಾಕೇಜ್ ಯೋಜನೆಯಡಿಯಲ್ಲಿ ಅಭಿವೃದ್ಧಿಗೆ ರಾಜ್ಯ ಸರ್ಕಾರವು 32 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿತ್ತು. ಆದರೆ ಕೆಲವು ಅಧಿಕಾರಿಗಳು ಆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತಕ್ಷಣ ರಾಜ್ಯಪಾಲರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ ಆರೋಪಿಸಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಅಂಬಿಗ, ಬೆಸ್ತ, ಗಂಗಾಮತ, ಕೋಲಿ, ಕಬ್ಬಲಿಗ ಮುಂತಾದ ಸಮನಾರ್ಥಕ ಉಪಜಾತಿ- ಸಮುದಾಯದ ಜನರ ಮುಗ್ದತೆಗೆ ದ್ರೋಹ ಮಾಡಿದ ಇವರು ಗುತ್ತಿಗೆದಾರರು ಯೋಜನೆಯ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, 18 ತಿಂಗಳ ಅವಧಿಯಲ್ಲಿ ಮುಗಿಯಬೇಕಿದ್ದ ಕಾಮಗಾರಿಯೂ ಏಳು ವರ್ಷ ಕಳೆದರೂ ಮುಗಿಯದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ ಎಂದು ಅವರು ದೂರಿದರು.
ಜುಲೈ 27 -2017 ರಂದು ಜರುಗಿದ ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕ ಮಂಡಳಿ ಸಭೆಯ ನಡವಳಿಗಳು ನಾಡವಳಿ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಲೆಕ್ಕ ಶೀರ್ಷಿಕೆ 4701-390 ರ ಎಸ್‌ಎಲ್‌ಐಎಸ್ ಅಡಿಯ ಕಾಮಗಾರಿ ಇದಾಗಿದ್ದು, ಭಾರತೀಯ ಪುರಾತತ್ವ ಇಲಾಖೆ ಅನುಮತಿ ಪಡೆಯಲು ವಿಳಂಬ ಮಾಡುವುದಲ್ಲದೆ ಖಾಸಗಿ ಜಮೀನಿನಲ್ಲಿ ಅವ್ಶೆಜ್ಞಾನಿಕ ಮತ್ತು ಕಳಪೆ ಕಾಮಗಾರಿಯನ್ನು ನಡೆಸಿ ಸರ್ಕಾರ ಹಾಗೂ ಜನರ ದಿಕ್ಕುತಪ್ಪಿಸಿದರ ವಿರುದ್ಧ ತಕ್ಷಣ ಸುಮೋಟೋ ಕೇಸ್ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಎಚ್ಚರಿಸಿದರು.
ಜಯ ಸಿ ಕೋಟ್ಯಾನ್ ಎಂಬುವವರ ಖಾಸಗಿ ಹೆಸರಿನಲ್ಲಿರುವ ಜಮೀನಿನಲ್ಲಿ 32 ಕೋಟಿ ಕಾಮಗಾರಿ ಪ್ರಾರಂಭವಾಗಿರುವುದನ್ನು ಸರ್ಕಾರದ ಗಮನಕ್ಕೆ ತಂದಿತ್ತು. ತದನಂತರದಲ್ಲಿ ನೀರಾವರಿ ಇಲಾಖೆಯವರು ಆತನಿಂದ ಅನಿವಾರ್ಯವಾಗಿ ಸದರಿ ಜಮೀನನ್ನು ಸರ್ಕಾರಕ್ಕೆ ನೋಂದಾಯಿಸಿಕೊಂಡಿದ್ದು, ಅಷ್ಟರಲ್ಲಿ ಕಟ್ಟಡ ಮುಳುಗಿ ಹೋಗುವ ಸ್ಥಳದಲ್ಲಿ ಕಾಮಗಾರಿ ನಡೆಸಲಾಗಿದೆ. 32 ಕೋಟಿ ಹಣ ಹಗಲು ದರೋಡೆಕೋರರ ಪಾಲಾಗಿದೆ. ಐತಿಹಾಸಿಕ ಸ್ಥಳವಾಗಿದ್ದು ಮಂಟಪ ನೋಡಲು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಅಸಂಖ್ಯಾತ ಶಾಲಾ ಮಕ್ಕಳು ಅಲ್ಲದೇ ಪ್ರವಾಸಿಗರು ಇಲ್ಲಿಗೆ ದಾವಿಸಿರುತ್ತಾರೆ. ಅವರಿಗೆ ಸೂಕ್ತ ಸೌಲಭ್ಯಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮು ಕೌದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 