ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
Ambigara Chowdary's 906th birth anniversary and felicitation of talented students
ಶಿಗ್ಗಾವಿ 24: ಗಂಗಾಮತ ಸಮಾಜದಂತ ಸಣ್ಣ ಸಮಾಜಗಳನ್ನು ಯಾವುದೇ ರಾಜಕೀಯ ಪಕ್ಷಗಳು ಕೈಹಿಡಿಯುವುದಿಲ್ಲ, ಮತ್ತು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದಿಲ್ಲ. ಸ್ವಾವಲಂಭಿಗಳಾಗಿ ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆದು ಸಂಘಟಿಕರಾದರೆ ಮಾತ್ರ ನಮ್ಮ ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಸುರಾಮ ಸೊನ್ನದ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ ಮತ್ತು ಜಾತ್ರಾ ಕಾರ್ಯಕ್ರಮದ ಸಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಂಗಾಮತ ಸಮಾಜಕ್ಕೆ ಗುರುವಿಲ್ಲ, ನೆಲೆಯಿಲ್ಲ ಎಂದು ಹೇಳಲಾಗುತ್ತಿತ್ತು, ಗುರುವಿಗೆ ಗುರವಾಗಿರುವ ವೇದವ್ಯಾಸ ಮಹರ್ಷಿಗಳು ನಮ್ಮ ಕುಲುಗುರುಗಳಾಗಿದ್ದು, ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಮಾಹಾ ಸ್ವಾಮಿಗಳು ಕೇವಲ 10 ವರ್ಷಗಳಲ್ಲಿ ನಮ್ಮೆಲ್ಲರನೂ ಒಗ್ಗೂಡಿಸಿದ್ದಾರೆ. ಎಸ್.ಟಿ. ಮೀಸಲಾತಿ ಸೌಲಭ್ಯ ಪಡೆಯಲು ಎಲ್ಲರೂ ಗಟ್ಟಿಯಾಗಿ ಹೋರಾಡಬೇಕಾಗಿದೆ ಎಂದರು.
ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮಾತನಾಡಿ, ಹಳೆಯ ಅಖಂಡ ಧಾರವಡ ಜಿಲ್ಲೆಯಲ್ಲಿಯೇ ಸುಮಾರು 50 ವರ್ಷಗಳ ಹಿಂದೆಯೇ ಕುನ್ನೂರ ಗ್ರಾಮಸ್ಥರು ಪ್ರಥಮವಾಗಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಗ್ರಾಮದಲ್ಲಿ ಪ್ರತಿಷ್ಠಾಪಿಸಿ ಸಮಾಜ ಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಗ್ರಾಮದ ಚೌಡಯ್ಯನವರ ಮೂರ್ತಿ ಇಷ್ಠಲಿಂಗ ಪೂಜೆ ಮಾಡುತ್ತಿರುವ ಭಂಗಿಯಲ್ಲಿ ಇರುವುದು ವಿಶೇಷ ವಾಗಿದೆ. ಇಲ್ಲಿನ ಬಜನಾಪದಗಳಲ್ಲಿ ಅಂಬಿಗರ ಚೌಡಯ್ಯನವರ ಹೆಸರುಗಳು ಕೇಳಿ ಬರುತ್ತಿರುವುದು ಅವರು ಇಲ್ಲಿ ನಡೆದಾಡಿರುವ ಕುರುಹುಗಳನ್ನು ಸಾಕ್ಷೀಕರಿಸುತ್ತವೆ. 12ನೇ ಶತಮಾನದ ಶರಣರು ಅಪ್ಪಟ ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ ಭಾಷೆಯನ್ನು ದೇವರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇ.ಮೂ. ಸೋಮಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು, ಶಾಸಕ ಯಾಸೀರಖಾನ ಪಠಾಣ, ಭರತ ಸೇವಾಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣನವರ, ಮುದುಕಣ್ಣ ಮತ್ತಿಗಟ್ಟಿ, ಬಿ.ಎಸ್.ಹಿರೇಮಠ, ದೇವರಾಜ ಸುಣಗಾರ, ನಿಂಗಣ್ಣ ಹೊಸಪೇಟಿ, ಪರಮೇಶ ಬಾರ್ಕಿ, ನಾಗರಾಜ ನಡಗೇರಿ, ಚೌಡೇಶ ಬೀರವಳ್ಳಿ, ವಸಂತ ಮತ್ತಿಗಟ್ಟಿ, ಮೈಲಾರ್ಪ ಇಂದೂರ, ಕಲ್ಲಪ್ಪ ಬೀರವಳ್ಳಿ, ಸೋಮಣ್ಣ ಮುದಕಪ್ಪನವರ, ಬಸವರಾಜ ಕಣಕಣ್ಣನವರ, ಹನುಮಂತಪ್ಪ ಶ್ಯಾಡಂಬಿ, ಸಹದೇವಪ್ಪ ಬೀರವಳ್ಳಿ, ತಿಪ್ಪಣ್ಣ ಸುಣಗಾರ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 