ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ: ದಮ್ಮೂರಮಠ
Ambedkar's contribution to the country is immense: Dammura Math
ತಾಳಿಕೋಟಿ 15: ಅಂಬೇಡ್ಕರ್ ವಿಶ್ವಕಂಡ ಮಹಾನ್ ನಾಯಕ ಭಾರತದ ಏಕತೆ ವೈವಿಧ್ಯತೆ ಸಮಗ್ರತೆ ಮತ್ತು ಸಮಾನತೆಗೆ ಅವರ ಕೊಡುಗೆ ಅಪಾರ ಅವರನ್ನು ಕೇವಲ ಪೂಜೆಗೆ ಸೀಮಿತಗೊಳಿಸದೆ ಅವರ ಬದುಕಿನ ಆದರ್ಶಗಳನ್ನು ಅನುಸರಿಸುವ ಅಗತ್ಯ ಇದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರಿ್ಬ.ದಮ್ಮೂರಮಠ ಹೇಳಿದರು. ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು ಶಿಕ್ಷಣದಿಂದಲೇ ಸಮುದಾಯದ ಸಮಗ್ರ ಪ್ರಗತಿ ಸಾಧ್ಯವೆಂದು ಅಚಲವಾಗಿ ನಂಬಿದ್ದರು ಎಂದರು.
ದಲಿತ ಮುಖಂಡರಾದ ಡಿ.ಬಿ. ಹಾದಿಮನಿ ಹಾಗೂ ಜೈಭೀಮ್ ಮುತ್ತಗಿ ಮಾತನಾಡಿ ದೇಶಕ್ಕೆ ವಿಶ್ವ ಶ್ರೇಷ್ಠ ಸಂವಿಧಾನವನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟು ಹೋಗಿದ್ದಾರೆ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಬಾಬಾ ಸಾಹೇಬ್ ಅವರು ಕೇವಲ ದಲಿತರ, ಹಿಂದುಳಿದ ವರ್ಗದವರಿಗೆ ಮಾತ್ರವಲ್ಲ ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕರಾಗಿದ್ದಾರೆ ಅವರು ಸರ್ವ ಜನಾಂಗದ ಆಶಾಕಿರಣ. ಅವರಂಥ ಪಾಂಡಿತ್ಯ ಹೊಂದಿದ ವ್ಯಕ್ತಿ ದೇಶದಲ್ಲಿ ಇನ್ನೊಬ್ಬನಿಲ್ಲ, ಬಾಬಾ ಸಾಹೇಬರು ತಮಗಾಗಿ ಬದುಕಲಿಲ್ಲ ದೇಶದ ಸರ್ವ ಜನರ ಹಿತಕ್ಕಾಗಿ ಬದುಕಿದರು. ಅವರ ಜೀವನದ ಆದರ್ಶಗಳನ್ನು ಪ್ರಾಂಜಲ ಮನಸ್ಸಿನಿಂದ ಅಧ್ಯಯನ ಮಾಡುವ ಅಗತ್ಯ ಇದೆ ಎಂದರು.
ತಾಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಸೂಯಾ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ಕಾರ್ಯಕ್ರಮ ಮುನ್ನ ಪಟ್ಟಣದ ಅಂಬೇಡ್ಕರ್ ಸರ್ಕಲ್ ದಲ್ಲಿರುವ ಡಾ.ಬಿ. ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ತಹಶೀಲ್ದಾರ ಡಾ.ವಿನಯಾ ಹೂಗಾರ ಅವರ ನೇತೃತ್ವದಲ್ಲಿ ತಾಲೂಕ ಆಡಳಿತ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
ತಾಪಂ ಇಓ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಪಿಎಸ್‌ಐ ಜ್ಯೋತಿ ಖೋತ, ವ್ಯವಸ್ಥಾಪಕ ಶಿವಲಿಂಗಪ್ಪ ಹಚಡದ, ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಎಸ್ ಬಿ ಕಟ್ಟಿಮನಿ, ಮುಖಂಡರಾದ ಮುತ್ತಪ್ಪ ಚಮಲಾಪೂರ, ಬಸವರಾಜ ಕಟ್ಟಿಮನಿ, ಎಂ ಎಸ್ ಸರಶಟ್ಟಿ, ಮಲ್ಲಿಕಾರ್ಜುನ ಪಟ್ಟಣಶಟ್ಟಿ, ಹುಸೇನ ಜಮಾದಾರ, ಅಮಿತ್ ಮನಗೂಳಿ, ಅಬೂಬಕರ ಲಾಹೋರಿ,ಶಫೀಕ ಇನಾಮದಾರ, ಹಣಮಂತ ಕೊಡಗಾನೂರ, ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ರವಿ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಸಿದ್ದು ಬಾರಿಗಿಡದ, ರಾಮಣ್ಣ ಕಟ್ಟಿಮನಿ,ಸಂಜೀವಪ್ಪ ಬರದೇನಾಳ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ, ಆಸೀಫ ಕೆಂಭಾವಿ, ಜುಮಣ್ಣ ನಾಲತವಾಡ, ಲತೀಫ ಬೀಳಗಿ, ಬಡೇಸಾ ಬೀಳಗಿ ಹಾಗೂ ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 