ವೈದ್ಯರ ಜ್ಞಾನ ಭಂಡಾರ, ವೃತ್ತಿ ನೈಪುಣ್ಯತೆ ಜೊತೆಗೆ ಸಂವಹನ ಕೌಶಲ್ಯತೆಯೂ ಪ್ರಾಮುಖ್ಯತೆ ಹೊಂದಿದೆ : ಬಿ. ಎಂ. ಪಾಟೀಲ

ವೈದ್ಯರ ಜ್ಞಾನ ಭಂಡಾರ, ವೃತ್ತಿ ನೈಪುಣ್ಯತೆ ಜೊತೆಗೆ ಸಂವಹನ ಕೌಶಲ್ಯತೆಯೂ ಪ್ರಾಮುಖ್ಯತೆ ಹೊಂದಿದೆ : ಬಿ. ಎಂ. ಪಾಟೀಲ Along with a doctor's knowledge base and professional skills, communication skills are also importan

ವಿಜಯಪುರ 03 : ಸಕ್ರೀಯ ಆಲಿಕೆ, ಸ್ಪಷ್ಟ ಮಾತು, ಕರುಣೆ, ಸಹಾನುಭೂತಿ, ಸರಿಯಾದ ಆಂಗಿಕ ಭಾಷೆಯಿಂದ ರೋಗಿ ಮತ್ತು ಸಂಬಂಧಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು ಎಂದು ಮಹಾರಾಷ್ಟ್ರದ ಓರಂಗಾಬಾದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥೆ ಡಾ. ಸರೋಜಿನಿ ಜಾಧವ ಹೇಳಿದ್ದಾರೆ. ಶನಿವಾರ ನಗರದ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಅಧ್ಯಯನ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು. ಸರಿಯಾದ ಸಂವಹನ ಕೌಶಲ್ಯದಿಂದ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬಹುದು.  ರೋಗಿಗಳ ಪರಿಣಾಮಕಾರಿ ಚಿಕಿತ್ಸೆಯಲ್ಲಿ ವೈದ್ಯರ ಜ್ಞಾನ ಭಂಡಾರ, ವೃತ್ತಿ  ನೈಪುಣ್ಯತೆ ಜೊತೆಗೆ ಸಂವಹನ ಕೌಶಲ್ಯತೆಯೂ ಪ್ರಾಮುಖ್ಯತೆ ಹೊಂದಿದೆ ಎಂದು ಅವರು ಹೇಳಿದರು.  ಅಲ್ಲದೇ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯೊಂದಿಗೆ, ಉದಾಹರಣೆಗಳೊಂದಿಗೆ ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡಿದರು.

ಪ್ರಾಧ್ಯಾಪಕಿ ಡಾ. ವಿಜಯಾ.ಪಾಟೀಲ ಮಾತನಾಡಿ, ಅನುಭವದಿಂದ ಬರುವ ಸಂವಹನ ಕೌಶಲ್ಯವನ್ನು ಪ್ರಾಯೋಗಿಕ ತರಬೇತಿ ಮೂಲಕ ಹೆಚ್ಚು ಮನಮುಟ್ಟುವಂತೆ ಮಾಡಬಹುದು ಎಂದು ಹೇಳಿದರು.ಬೆಳಗಾವಿಯ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ರೀಶೈಲ.ಮೆಟಗುಡ್ಡ ಆನ್ ಲೈನ್ ಮುಖಾಂತರ ಭಾಗವಹಿಸಿ ಮಾತನಾಡಿ, ಪಠ್ಯಕ್ರಮವು ಕಾಲಕಾಲಕ್ಕೆ ತಕ್ಕಂತೆ ಬದಲಾಗಬೇಕು.  ಹೊಸ ಜೀವನಶೈಲಿಯ ರೋಗಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು.  ಸಂವಹನ ಕೌಶಲ್ಯತೆಯು ವೈದ್ಯಕೀಯ ಶಿಕ್ಷಣದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.ಈ ಸಭೆಯಲ್ಲಿ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ, ಪರೀಕ್ಷಾ ಕ್ರಮ ಮತ್ತು ಪರೀಕ್ಷಕರ ಪಟ್ಟಿ, ನೂತನ ಬೋಧನೆ ಕ್ರಮಗಳು, ಸಂಶೋಧನೆ ಮತ್ತು ಪ್ರಬಂಧ ಪ್ರಕಟಣೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ತೇಜಸ್ವಿನಿ.ವಲ್ಲಭ, ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ, ಪ್ರಾಧ್ಯಾಪಕರಾದ ಡಾ. ಎಂ. ಬಿ. ಪಾಟೀಲ, ಡಾ. ಗೀರೀಶ ಕುಲ್ಲೊಳ್ಳಿ, ಡಾ. ರಮಾಕಾಂತ ಬಳೂರಕರ, ಡಾ. ವಿಕ್ರಂ ಸಿಂದಗಿಕರ, ಡಾ. ದೀಪಕ ಚವ್ಹಾಣ, ಡಾ. ದಯಾನಂದ.ಬಿರಾದಾರ, ಡಾ. ಶೃತಿ ಶೀಳೀನ, ಡಾ. ಆನಂದ ಸುಂತನ, ಡಾ. ವೀಣಾ ಘಂಟೆಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.