ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕೇತ- ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ
Akkamahadevi is a symbol of women's freedom and equality - Vice Chancellor Prof. Vijaya Korishetty b
ಲೋಕದರ್ಶನ ವರದಿ
ವಿಜಯಪುರ 02: ಅನುಭವ ಮಂಟಪವು ಶರಣ ಚಳವಳಿಯ ಹೃದಯವಾಗಿತ್ತು. ಇಲ್ಲಿ ಮಹಿಳೆಯರು ಮೌನ ಶ್ರೋತೃಗಳಾಗಿರಲಿಲ್ಲ. ಅವರು ತರ್ಕಕಾರ್ತಿಯರು, ಪ್ರಶ್ನಕರೂ ಮತ್ತು ವಚನ ರಚನಾಕಾರರೂ ಆಗಿದ್ದರು. ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಪುರುಷ ಶರಣರ ಮುಂದೆ ಧೈರ್ಯವಾಗಿ ಮಾತನಾಡಿದರು. ಹೀಗಾಗಿ ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕೇತವಾಗಿದ್ದಾರೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಕೌಶಿಕ ರಾಜನನ್ನು ಷರತ್ತುಬದ್ಧ ಮದುವೆಯಾಗಿ ಷರತ್ತು ಮುರಿದು ಬಿದ್ದ ಕಾರಣ ರಾಜನನ್ನು ಬಿಟ್ಟು ಒಂಟಿಯಾಗಿ ಶರಣ ಸಮುದಾಯವನ್ನು ಸೇರಿದ ದಿಟ್ಟ ಮಹಿಳೆ. ಕನ್ನಡದ ಪ್ರಥಮ ಕವಿಯಿತ್ರಿ ಮತ್ತು ಸ್ತ್ರೀವಾದಿ ಎಂದು ವಿವರಿಸಿದರು,
ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನ ಕಠಿಣ ಪ್ರಶ್ನೆಗಳಿಗೆ ಉತ್ತರಿಸಿ ಅನುಭವ ಮಂಟಪದಲ್ಲಿ ಪ್ರವೇಶ ಪಡೆಯುತ್ತಾಳೆ. ಆ ಕಾಲದಲ್ಲಿ ರಾಜ್ಯ ಪ್ರಭುತ್ವವನ್ನು ನಿರಾಕರಿಸಿದ ಪ್ರಥಮ ಮಹಿಳೆಯಾಗಿದ್ದಾಳೆ ಅಕ್ಕಮಹಾದೇವಿ. ಲೌಕಿಕ ಮತ್ತು ಅಲೌಕಿಕ ಎರಡು ಭಾವನೆಗಳನ್ನು ತನ್ನ ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ. ಎಂದು ಹೇಳಿದರು.
ಅಕ್ಕಮಹಾದೇವಿ ಲೌಕಿಕ ಆಸಕ್ತಿ, ಸಾಮಾಜಿಕ ಆಕರ್ಷಣೆಗಳನ್ನೆಲ್ಲ ತಿರಸ್ಕರಿಸಿ, ಆತ್ಮ ಮತ್ತು ಇಷ್ಟಲಿಂಗದ ಏಕಾತ್ಮತೆಯನ್ನು ಸಾರುತ್ತಾರೆ. ಇದು ವೈರಾಗ್ಯ ಮಾತ್ರವಲ್ಲ; ಮಹಿಳೆಯನ್ನು ವಸ್ತುವಾಗಿ ನೋಡುವ ಸಮಾಜದ ವಿರುದ್ಧದ ಧಿಕ್ಕಾರವೂ ಹೌದು. ಅಕ್ಕಮಹಾದೇವಿ 12ನೇ ಶತಮಾನದ ಶರಣ ಚಳವಳಿಯ ಅತ್ಯಂತ ಪ್ರಬಲ ಮಹಿಳಾ ಧ್ವನಿ. ಅವರು ಚನ್ನಮಲ್ಲಿಕಾರ್ಜುನನನ್ನೇ ತನ್ನ ಏಕೈಕ ಸ್ವಾಮಿ ಎಂದು ಒಪ್ಪಿಕೊಂಡು, ದೇಹಾಧಾರಿತ ಸಮಾಜ ವ್ಯವಸ್ಥೆಯನ್ನು ತಿರಸ್ಕರಿಸಿದರು.
ವೈವಾಹಿಕ ಬಂಧನ, ರಾಜಕೀಯ ಪ್ರಭಾವ, ಸಾಮಾಜಿಕ ನಿಯಮಗಳನ್ನು ಧಿಕ್ಕರಿಸಿ, ಆತ್ಮಸ್ವಾತಂತ್ರ್ಯ ಮತ್ತು ಪರಮಭಕ್ತಿಯನ್ನು ಆರಿಸಿಕೊಂಡರು. ಅಕ್ಕಮಹಾದೇವಿಯ ಜೀವನವೇ ಒಂದು ಘೋಷಣೆ ಹಿ ಸ್ತ್ರೀ ದೇಹವಲ್ಲ, ಆತ್ಮವೇ ಶ್ರೇಷ್ಠ ಎಂಬ ಸಂದೇಶ ಸಾರಿದ ದಿಟ್ಟ ಮಹಿಳೆ ಅಕ್ಕಮಹಾದೇವಿಯ ಜೀವನಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕುಲಪತಿ ವಿವರಿಸಿದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಜೀವನದಲ್ಲಿ ಬರುವ ಕಷ್ಟ- ಸುಖಗಳನ್ನು ಸಮಭಾವದಿಂದ ಸ್ವೀಕರಿಸಬೇಕೆಂಬ ತತ್ವವನ್ನು ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಅಕ್ಕಮಹಾದೇವಿ ಅವರ ವಚನಗಳನ್ನು ಉಲ್ಲೇಖಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಒನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಪ್ರೊ.ಮಹೇಶ ಚಿಂತಾಮಣಿ, ಪ್ರೊ.ಶಾಂತಾದೇವಿ ಟಿ, ಪ್ರೊ.ರಾಜು ಬಾಗಲಕೋಟೆ, ಪ್ರೊ.ಎಂ.ಪಿ.ಬಳಿಗಾರ, ಪ್ರೊ.ಎಂ.ನಾಗರಾಜ, ಡಾ.ಕಿರಣ, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಕ್ಕಮಹಾದೇವಿ ಅಧ್ಯಯನ ಪೀಠದ ಸಂಯೋಜಕ ಪ್ರೊ.ನಾರಾಯಣ ಬಿ ಪವಾರ ಸ್ವಾಗತಿಸಿದರು, ಸಂಶೋಧನಾ ವಿದ್ಯಾರ್ಥಿನಿ ಕರಿಷ್ಮಾ ಕಪೂರ ನಿರೂಪಿಸಿ ವಂದನಾರೆ್ಣ ಮಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 