ಎಲ್ಲರಿಗೂ ಕನೆಕ್ಟ್ ಆಗುವ ’45’ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭ
Advance bookings for the film '45' begun
ಡಿ. 24ರಂದು ಹಲವು ಕಡೆ ಪೇಯ್ಡ್ ಪ್ರಿಮಿಯರ್ ಶೋ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲಬಾರಿ ನಿರ್ದೇಶನ ಮಾಡಿರುವ ಬಹು ನೀರೀಕ್ಷಿತ ’45’ ಬಿಡುಗಡೆಗೆ ದಿನ ಗಣನೆ ಆರಂಭವಾಗಿದ್ದು, ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲಿ ತಯಾರಾಗಿರುವ 45 ಕ್ರಿಸ್ಮಸ್ ದಿನದಂದು ಕನ್ನಡ ವರ್ಶನ್ ಮಾತ್ರ ಬಿಡುಗಡೆ ಆಗುತ್ತಿದೆ. ಉಳಿದ ಭಾಷೆಯಲ್ಲಿ ಜನವರಿ 1ರಂದು ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್ ಹಾಡುಗಳಿಂದ ದೇಶ ವಿದೇಶಗಳಲ್ಲೂ 45ನ ಕ್ರೇಜ್ ಹೆಚ್ಚಾಗಿದೆ.
ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಲ್ಲಿದ್ದಾರೆ. ಹಾಗಾಗಿ ಚಿತ್ರತಂಡ ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಹಲವಾರು ಕಡೆ ಚಿತ್ರಮಂದಿರಗಳಲ್ಲಿ ಡಿ. 24ರಂದೆ ಪೇಯ್ಡ್ ಪ್ರಿಮಿಯರ್ ಶೋಗಳನ್ನು ನಡೆಸಲು ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದರು ಕೆವಿಎನ್ ವಿತರಣಾ ಸಂಸ್ಥೆಯ ಸುಪ್ರಿತ್ ಮಾತನಾಡಿ, ’ರಾಜ್ಯಾದ್ಯಂತ ಸುಮಾರು 30-40 ಥಿಯೇಟರ್ ಗಳಲ್ಲಿ ಡಿ.24ರ ಸಂಜೆಯಿಂದ ಪ್ರಿಮಿಯರ್ ಶೋಗಳನ್ನು ನಡೆಸಲು ಯೋಜನೆ ಮಾಡಲಾಗಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಶುರು ಆಗಿದೆ. ಈ ಚಿತ್ರದ ಮೇಲೆ ನಿರ್ದೇಶಕರಿಗಿಂತ ನಿರ್ಮಾಪಕರಿಗೆ ಹೆಚ್ಚು ನಂಬಿಕೆ ಇದೆ. ಹಾಗಾಗಿ ಪ್ರಾರಂಭದಲ್ಲಿ ಇದ್ದ ಬಜೆಟ್ ಕಿಂತ ಮೂರು ಪಟ್ಟು ಹೆಚ್ಚಾದರೂ ಧೈರ್ಯವಾಗಿದ್ದಾರೆ. ಈ ಚಿತ್ರವನ್ನು ನಾವು 170-180 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರೀಲೀಸ್ ಮಾಡುತ್ತಿದ್ದೇವೆ’ ಎಂದು ಹೇಳಿದರು. ಪ್ರೇಕ್ಷಕರು ಟ್ರೇಲರ್ ಗೆ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದ ಹೇಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕರಾದ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಕಲಾವಿದ ಪ್ರಮೋದ್ ಶೆಟ್ಟಿ, ಛಾಯಾಗ್ರಾಹಕ ಸತ್ಯ ಹೆಗಡೆ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ, ’ನಾನು ಇಂದು ಮುಂಜಾನೆ ಸಿನಿಮಾ ನೋಡಿದೆ. ತುಂಬಾ ಖುಷಿ ಆಯ್ತು. ಶಿವಣ್ಣ ಅವರ ಅಭಿನಯ ಮರೆಯಲಾಗದು ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ನೋಡುತ್ತಿದ್ದರೆ ಹೆಮ್ಮೆ ಅನಿಸಿತು. ಹಾಗೂ ಸಿನಿಮಾ ಮೇಲಿನ ವಿಶ್ವಾಸ ಹೆಚ್ಚಾಯ್ತು ಎನ್ನುತ್ತಾ ಎಲ್ಲರ ಅಭಿನಯದ ಬಗ್ಗೆ ಮಾತನಾಡಿ, ಫ್ಯಾಮಿಲಿ ಕುಳಿತು ನೋಡುವ ಚಿತ್ರ. ಇಲ್ಲಿಯವರೆಗೆ ಯಾರೂ ಮಾಡಿರದ ಪ್ರಯತ್ನ ನಾವು ಮಾಡಿದ್ದೇವೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 