ಹುನಗುಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತಾತ್ಮಕ ಗೊಂದಲ; ರೋಗಿಗಳಿಗೆ ತೊಂದರೆ ಆತಂಕ
Administrative confusion at Hunagunda Public Hospital; patients worried about problems
ಲೋಕದರ್ಶನ ವರದಿ
ಹುನಗುಂದ 11 : ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಹುನಗುಂದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಮತ್ತು ವೈದ್ಯಾಧಿಕಾರಿಗಳ ತಿಕ್ಕಾಟದ ಪರಿಣಾಮ ಇಲ್ಲಿಗೆ ಬರುವ ರೋಗಿಗಳ ಮೇಲೆ ಬಿರಲಾರಂಬಿಸಿದೆ. ಹುನಗುಂದ ಪಟ್ಟಣದಲ್ಲಿ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಿಲ್ಲದ ಕಾರಣ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನ ಈ ಸಾರ್ವಜನಿಕ ಆಸ್ಪತ್ರೆಯ ಮೇಲೆಯೆ ಅವಲಂಬಿತರಾಗಿದ್ದಾರೆ. 12 ವೈದ್ಯ ಹುದ್ದೆಗಳು ಮಂಜೂರಿದ್ದರೂ, 9 ಜನ ವ್ಯದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯನಿರ್ವಹಿಸುತ್ತಿರುವವರಲ್ಲಿ ಬಹುತೇಕರು ತಜ್ಞ ವೈದ್ಯರೇ ಆಗಿರುವುದರಿಂದ ಎಲ್ಲ ಬಗೆಯ ರೋಗಿಗಳಿಗೂ ಒಳ ಮತ್ತು ಹೊರ ಚಿಕಿತ್ಸೆ ಉತ್ತಮವಾಗಿಯೆ ಸಿಗುತ್ತಿರುವುದು ಸಾರ್ವಜನಿಕರ ಪ್ರಶಂಶೆಗೂ ಕಾರಣವಾಗಿದೆ. ಆದರೆ, ಆಸ್ಪತ್ರೆಯ ಆರೋಗ್ಯ ರಕ್ಷಣಾ ಸಮಿತಿ ಸದಸ್ಯರ ಕೆಲವು ನಡುವಳಿಕೆಗಳು ಬಹುತೇಕ ವೈದ್ಯರುಗಳ ಬೆಸರಕ್ಕೆ ಕಾರಣವಾಗಿ ಅದರಲ್ಲಿ ಕೆಲವರು ಹುದ್ದೆಗೆ ರಾಜೀನಾಮೆ ಇನ್ನು ಕೆಲವರು ವರ್ಗಾವನೆಗೆ ಯತ್ನ ನಡೆಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ಆಸ್ಪತ್ರೆ ಅಂಗಳದಿಂದ ಕೇಳಿಬರುತ್ತಿದೆ.
ಜಿಲ್ಲೆಯಲ್ಲಿಯೆ ದಾಖಲೆ ಹೆರಿಗೆ:
ಹೆರಿಗೆ ತಜ್ಞರಾಗಿರುವ ಆಸ್ಪತ್ರೆ ಮುಖ್ಯ ವ್ಯದ್ಯಾಧಿಕಾರಿ ಡಾ. ಮಂಜುನಾಥ ಅಂಕೋಲೆಕರ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಹೊಲಿಸಿದರೆ ಹೆಚ್ಚು ಹೆರಿಗೆ ಮಾಡಿಸಿದ ದಾಲೆಗಳು ಇದೆ. ಆದರೆ, ಓಷಧಿ ಸಾಮಗ್ರಿ ಮತ್ತು ಪಿಠೋಪಕರಣ ಖರಿದಿ ಹೆಸರಿನಲ್ಲಿ ಹಣ ದುರ್ಭಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದಡಿ ಅವರ ವಿರುದ್ದ ಹುನಗುಂದ ಪೊಲೀಸ್ ಠಾಣೆಯಲ್ಲಿ ಕ್ರೀಮಿನಲ್ ಪ್ರಕರಣ ದಾಖಲಿಸುವುದರ ಜೋತೆಗೆ ಮುಖ್ಯ ವೈದ್ಯಾಧಿಕಾರಿ ಅಧಿಕಾರವನ್ನು ತಾಲೂಕು ಆರೋಗ್ಯಾಧಿಕಾರಿ ಸಂಗಮೇಶ ಅಂಗಡಿ ಅವರಿಗೆ ವಹಿಸಿಕೊಡಲಾಗಿದೆ. ಈ ಎಲ್ಲ ಬೆಳವಣಿಗೆ ಹಿಂದೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಕೈವಾಡ ಇದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇದರಿಂದ ಬೆಸರಗೊಂಡಿರುವ ಡಾ. ಅಂಕೋಲೆಕರ ಸೇವೆಯಲ್ಲಿ ಮೊದಲಿನ ಆಸಕ್ತಿ ತೋರುತ್ತಿಲ್ಲ, ತಿಂಗಳಿಗೆ 120 ರಿಂದ 150 ಹೆರಿಗೆ ಮಾಡಿಸುತ್ತಿದ್ದ ಅವರು ಈಗ 40-50ರಷ್ಟು ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ದಾಖಲೆಗಳೂ ಇದನ್ನು ದೃಡಪಡಿಸುತ್ತಿದೆ. ಇನ್ನು ವರ್ಗಾವನೆ ಕೊರಿ ಅರ್ಜಿಯನ್ನೂ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
35 ಕಡತಗಳು ಡಿಎಚ್‌ಓ. ಕಚೇರಿಯಲ್ಲಿ?
ಓಷಧಿ ಸಾಮಗ್ರಿ ಮತ್ತು ಪಿಠೋಪಕರಣ ಖರಿದಿ ಹೆಸರಿನಲ್ಲಿ ಹಣ ದುರ್ಭಳಕೆಯಾಗಿದೆ ಎಂಬ ಆರೋಪದಡಿ ಮಾರ್ಚ ತಿಂಗಳಲ್ಲಿ ಕೈಗೊಂಡ ತನಿಖಾ ವರದಿ ಇನ್ನೂ ಅಚಿತಿಮಗೊಂಡಿಲ್ಲ ಆಗಾಗ ತನಿಖಾ ತಂಡ ಬಂದು ಕಡತಗಳನ್ನು ಪರಿಶಿಲಿಸುವ ಕಾರ್ಯ ಮುಂದುವರೆದಿದೆ. ತನಿಖೆಯ ಹೆಸರಿನಲ್ಲಿ ಕೆಲವು ರಜಿಷ್ಟರಗಳು ಸೇರಿ ಸುಮಾರು 35 ಕಡತಗಳು ಇನ್ನು ಜಿಲ್ಲಾ ಆರೋಗ್ಯಾಧಿಕಾರಿಯ ಕಚೇರಿಯಲ್ಲಿಯೆ ಇವೆ ಎನ್ನಲಾಗುತ್ತಿದ್ದು, ಇದು ಆಸ್ಪತ್ರೆಯ ಆಡಳಿತಕ್ಕೆ ತೊಂದರೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶಾಸಕರ ಗಮಣಕ್ಕಿಲ್ಲವೇ?
ನಡೆದಿರುವ ಈ ಬೆಳವಣಿಗೆಯಿಂದ ಕಾರ್ಯನಿರ್ವಹಿಸುತ್ತಿರುವ 9 ತಜ್ಞ ವದ್ಯರಲ್ಲಿ ಒರ್ವ ವೈದ್ಯ ರಾಜೀನಾಮೆ ನೀಡಿದ್ದರೆ, ಇನ್ನು 6 ವೈದರು ವರ್ಗಾವಣೆಗೆ ಅರ್ಜಿ ಹಾಕಿದ್ದಾರೆ. ಈಗಾದಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗಿ ಇದರ ಪರಿನಾಮವನ್ನು ರೋಗಿಗಳು ಎದುರಿಸಬೇಕಿದೆ. ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರು ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ. ಈ ಎಲ್ಲ ಬೆಳವಣಿಗೆಗಳ ಅವರ ಗಮಣಕ್ಕೆ ಇದಯೋ ಇಲ್ಲವೋ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು 