ಪಾರ್ಥನಹಳ್ಳಿ ಉರ್ದು ಸರಕಾರಿ ಹೈಸ್ಕೂಲನ ಶಿಕ್ಷಕರ ಕೊರತೆ ಸರಿಪಡಿಸಿ

ಪಾರ್ಥನಹಳ್ಳಿ ಉರ್ದು ಸರಕಾರಿ ಹೈಸ್ಕೂಲನ ಶಿಕ್ಷಕರ ಕೊರತೆ ಸರಿಪಡಿಸಿ  Address the shortage of teachers in Parthanahalli Urdu Government High School

ಅಥಣಿ 24 : ಪಾರ್ಥನಹಳ್ಳಿ ಉರ್ದು ಸರಕಾರಿ ಹೈಸ್ಕೂಲ ನಲ್ಲಿ ಶಿಕ್ಷಕರ ಕೊರತೆ ಖಂಡಿಸಿ ನೂರಾರು ಗ್ರಾಮಸ್ಥರು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಕಾಂಗ್ರೆಸ್ ಮುಖಂಡ ರಫಿಕ್ ಪಟೇಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಫಿಕ್ ಪಟೇಲ್, ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳು ಕಳೆದು ಕಳೆಯುತ್ತಿದ್ದರು ಕೂಡ ಇವತ್ತಿನವರೆಗೂ ಪ್ರೌಢ ಶಾಲೆಯಲ್ಲಿ ಶಿಕ್ಷಕರ ಇಲ್ಲದಂತಾಗಿದೆ ಹೀಗಾಗಿ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದ ಅವರು ಸರ್ಕಾರಿ ಹಿರಿಯ ಉರ್ದು ಪ್ರೌಢಶಾಲೆಗೆ ಶಿಕ್ಷಕರನ್ನು ನೇಮಕ ಮಾಡುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದರು.

ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಜೊತೆಗೆ ಕೊಠಡಿಗಳು, ಶೌಚಾಲಯಗಳು ಕೂಡ ಇಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಕಲಿಯಲು ತೊಂದರೆ ಉಂಟಾಗುತ್ತಿದೆ. ಈ ಸಂಬಂಧದಲ್ಲಿಯೂ ಕೂಡ ಸಾಕಷ್ಟು ಬಾರಿ ತಮ್ಮ ಗಮನಕ್ಕೆ ಕಂದರೂ ಕೂಡ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರಫಿಕ್ ಪಟೇಲ್ ದೂರಿದರು.  ಎರಡು ಗಂಟೆಗಳು ಕಾಲ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾರ್ಥನ ಹಳ್ಳಿ  ಗ್ರಾಮದ ಮುಸ್ಲಿಂ ಸಮಾಜದ ಮುಖಂಡರು, ಪಾಲಕರು ಮತ್ತು ಅಥಣಿ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು. ಪ್ರತಿಭಟನೆಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ, ಸ್ವಲ್ಪ ದಿನ ಸಮಯಾವಕಾಶ ಕೊಡಿ ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ಸಮಸ್ಯೆಯನ್ನು ಕೂಡ ನಾನು ಬಗೆಹರಿಸುವೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಆದರೆ ಅಧಿಕಾರಿಯ ಈ ಭರವಸೆಗೆ ಒಪ್ಪದ ಪ್ರತಿಭಟನಾಕಾರರು ನಮಗೆ ಲಿಖಿತವಾಗಿ ಕೊಡಿ ಇಲ್ಲದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದರು ಆಗ ಕಾಂಗ್ರೆಸ್ ಮುಖಂಡ ರಫೀಕ್ ಪಟೇಲ್ ಕಾಗವಾಡ ಶಾಸಕ ರಾಜು ಕಾಗೆಯವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಸಮಸ್ಯೆಯನ್ನು ಹೇಳಿಕೊಂಡಾಗ ಸೋಮವಾರದವರೆಗೆ ಸಮಯ ಕೊಡಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವೆ ಎಂದು ಶಾಸಕರು ಆಶ್ವಾಸನೆ ನೀಡಿದ ಪರಿಣಾಮ ಪ್ರತಿಭಟನೆ ಪಡೆದುಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಶರೀಫ್ ಮುಲ್ಲಾ, ರಮೇಶ್ ಕಾಂಬಳೆ, ಇಬ್ರಾಹಿಂ ಮೊಳೆ, ಕಾಡಪ್ಪಾ ಸಿಂಗಾಡಿ, ಇಲಾಹಿ ಮೋಳೆ, ಐನುದ್ದಿನ್ ಬಿರಾದರ್, ಸಿಕಂದರ್ ಬಿರಾದಾರ್, ಇಸ್ಮೈಲ್ ಪಟೇಲ್, ಅಲಿಸಾಬ್ ಮುಜಾವರ್, ಅಸ್ಲಂ ನಾಲಬಂದ್, ಸಯ್ಯದ್ ಅಮೀನ್ ಗದ್ಯಾಳ, ಅಬ್ದುಲ್ ಅಜಿಜ ಮುಲ್ಲಾ, ಶಬ್ಬೀರ್ ಸಾತಬಚ್ಚೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಾರ್ಥನ ಹಳ್ಳಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.