ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆ ಕಳ್ಳತನ ಆರೋಪಿತರ ಬಂಧನ

 ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆ ಕಳ್ಳತನ ಆರೋಪಿತರ ಬಂಧನ Additional District Judge's rented house burglary suspects arrested

ಲೋಕದರ್ಶನ ವರದಿ 

   

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆ ಕಳ್ಳತನ ಆರೋಪಿತರ ಬಂಧನ 

ಮುದ್ದೇಬಿಹಾಳ 10: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ  ಮುದ್ದೇಬಿಹಾಳ ಪಟ್ಟಣದ  ಹುಡ್ಕೋ ಬಡಾವಣೆಯ ನ್ಯಾಯಾಧೀಶರೋಬ್ಬರ ಬಾಡಿಗೆ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಖಾಕಿ ಪಡೆ ಬಹುತೇಕ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣವನ್ನು ವಶಕ್ಕೆ ಪಡೆದು ಸಾರ್ವಜನಿಕರಿಂದ ಶ್ಲಾಘನಿಯ ಮಾತುಗಳು ವ್ಯಕ್ತವಾಗುತ್ತಿವೆ. 

ಕಳೆದ ಸೆ.24 ಹಾಗೂ 25 ರಂದು  ಮುಂಜಾನೆ 8.15ರಿಂದ 11.45 ಗಂಟೆ ಸುಮಾರಿಗೆ ಪಟ್ಟಣದ ಹುಡ್ಕೋ ಬಡಾವಣೆಯ  ಮುದ್ದೇಬಿಹಾಳ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರ ಬಾಡಿಗೆ ಮನೆಗೆ ನುಗ್ಗಿದ ಮೂವರು ಬೀಗ ಮುರಿದು ಸುಮಾರು 30,14,500 ಲಕ್ಷ ರೂ.ಗಳ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.  

 ಈ ಪ್ರಕರಣದಲ್ಲಿ  ಬೆಳಗಾಂವಿ ಗಾಮದುರ್ಗದ ರಾಮಾಪುರ ತಾಂಡಾದ  ಸುನೀಲ ಮಲ್ಲೇಶಿ,  ಬೆಳಗಾಂವಿ ಜಿಲ್ಲೆಯ  ನಾಗನೂರ ತಾಂಡಾದ ಚೇತನ ಪಾಂಡು ಲಮಾಣಿ,  ಬೆಳಗಾಂವಿ ಜಿಲ್ಲೆಯ ಕಾರ್ಲಕಟ್ಟಿ ಗ್ರಾಮದ ರಾಹುಲ್ ಪರುಶುರಾಮ ಲಮಾಣಿ ಎಂಬ ಮೂವರನ್ನೂ ಬಂಧಿಸಿ ಒಟ್ಟು 250ಗ್ರಾಮ ಬಂಗಾರದ ಆಭರಣಗಳು,50ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ಕದರೋಡೆಗೆ ಬಳಸಿದ  2 ಸ್ವಪ್ಟ್‌ ಕಾರು, ಹಾಗೂ 2 ಮೋಟಾರು ಸೈಕಲ್, ಜತೆಗೆ 4 ಮೋಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.  

ಈ ಪ್ರಕರಣೆವೇ ಒಂದು ಹೊಸ ಆಯಾವನ್ನೇ ಸೃಷ್ಠಿಸಿತ್ತು. ಈ ಕುರಿತು ವಿಜಯಪುರ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಧರೋಡೆ ನಡೆದ ಸ್ಥಳಕ್ಕೆ ಬೇಟಿ ನೀಡಿ ಬ. ಬಾಗೇವಾಡಿಯ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಹಮ್ಮಫಸಿಯುದ್ಧಿನ, ಪಿಎಸೈ ಸಂಜಯಕುಮಾರ ತಿಪ್ಪಾರಡ್ಡಿ, ಕ್ರೈ ಪಿಎಸೈ ಆರ್ ಎಲ್ ಮನ್ನಾಬಾಯಿ, ನೇತೃತ್ವದ  ವಿಶೇಷ ಪೋಲಿಸ್ ತನಿಖಾ ತಂಡ ರಚಿಸುವ ಮೂಲಕ ಪ್ರಕರಣ ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂದಿಸಿ ಕಳ್ಳತನಗೊಂಡಿದ್ದ ಬಂಗಾರದ ಆಭರಣಗಳನ್ನು, ಬೆಳ್ಳಿ ಆಭರಣಗಳನ್ನು 5ನೇ  ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಿಗೆ ಹಸ್ಥಾಂತರಿಸಲಾಗಿದೆ.  ಈ ವೇಳೆ  ಪೋಲಿಸ್ ಸಿಬ್ಬಂದಿಗಳಾದ ಆರ್ ಎಸ್ ಪಾಟೀಲ, ಬಾಬು ಗುಡಿಮನಿ,ಸಲೀಂ ಹತ್ತರಕಿಹಾಳ,ರಮೇಶ ಮಾದರ, ವಿರೇಶ ಹಾಲಗಂಗಾಧರಮಠ, ಶಶಿಧರ ರಡ್ಡಿ, ವಸಂತ ಮೈತ್ರಿ, ಇದ್ದರು ಎಂದು ಪೋಲಿಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.