ಬೇಸಿಗೆ ರಜಾ ಅವಧಿಯ ಮಕ್ಕಳ ಕಲಿಕಾ ಸಾಹಿತ್ಯಕ್ಕೆ ಅಪರ ಆಯುಕ್ತರ ಶ್ಲಾಘನೆ

ಬೇಸಿಗೆ ರಜಾ ಅವಧಿಯ ಮಕ್ಕಳ ಕಲಿಕಾ ಸಾಹಿತ್ಯಕ್ಕೆ ಅಪರ ಆಯುಕ್ತರ ಶ್ಲಾಘನೆ Additional Commissioner praises children's learning literature during summer vacation

ಸವದತ್ತಿ 31: ಮಕ್ಕಳ ಬೇಸಿಗೆ ರಜೆಯ ಅವಧಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸವದತ್ತಿ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ "ಮನೆಗೆಲಸ ಸಾಹಿತ್ಯ" ಅತ್ಯಂತ ಶ್ಲಾಘನೀಯ ಎಂದು ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಮಂಗಳವಾರ ಸವದತ್ತಿ ತಾಲೂಕಿನ ವಿವಿಧ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅಪರ ಆಯುಕ್ತರು, ಅಲ್ಲಿನ ವ್ಯವಸ್ಥೆ ಹಾಗೂ ಪರೀಕ್ಷಾ ಪ್ರಕ್ರಿಯೆಗಳನ್ನು ಕೂಲಂಕಷವಾಗಿ ಅವಲೋಕಿಸಿದರು. ಪರೀಕ್ಷಾ ಕೇಂದ್ರಗಳಲ್ಲಿನ ಶಿಸ್ತು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ತೃಪ್ತಿ ಎಂದರು. ನಂತರ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ 6 ಮತ್ತು 7ನೇ ತರಗತಿಯ ಮಕ್ಕಳಿಗಾಗಿ ಸಿದ್ಧಪಡಿಸಲಾದ ವಿಶೇಷ ಬೇಸಿಗೆ ರಜಾ ಅವಧಿಯ ಸಾಹಿತ್ಯವನ್ನು ವೀಕ್ಷಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು:"ರಜಾ ಅವಧಿಯಲ್ಲಿ ಮಕ್ಕಳು ಕಲಿಕೆಯಿಂದ ದೂರ ಉಳಿಯದಂತೆ, ಆಟದೊಂದಿಗೆ ಪಾಠವನ್ನು ಮೇಳೈಸುವ ಇಂತಹ ಸಾಹಿತ್ಯ ಮಕ್ಕಳ ಜ್ಞಾನಾರ್ಜನೆಗೆ ಉತ್ತಮ ಮಾರ್ಗದರ್ಶಿಯಾಗಲಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಗೀರೀಶ್ ಪದಕಿ, ಅಶೋಕ್ ಕುಂಬಾರ, ನಗರಸಭೆ ಪೌರಾಯುಕ್ತ ಬಸಯ್ಯ ಗದುಗಿನಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ,ಬಿ. ಎನ್‌.ಬ್ಯಾಳಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.