ಯಶಸ್ಸನ್ನು ಮಾತ್ರ ನೋಡಿ ಚಿತ್ರರಂಗದಲ್ಲಿ ಕಾಲಿಡಬೇಡಿ: ನಟಿ ಉಮಾಶ್ರೀ
Actress Umashree visits Nammura Banuli of Belgaum Women's Welfare Organization
ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿಗೆ ಹಿರಿಯ ನಟಿ ಉಮಾಶ್ರೀ ಭೇಟಿ
ಬೆಳಗಾವಿ 05: ಪ್ರಸಿದ್ಧ ಕನ್ನಡ ನಟಿ ಹಾಗೂ ಮಾಜಿ ಸಚಿವರಾದ ಉಮಾಶ್ರೀ ಅವರು ಮಹಾಂತೇಶ ನಗರದ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಹೃದಯದಿಂದ ಮೆಚ್ಚಿ, ನಮ್ಮೂರ ಬಾನುಲಿ ರೇಡಿಯೋದಲ್ಲಿ ವಿಶೇಷ ಸಂದರ್ಶನವೊಂದನ್ನು ನೀಡಿದರು.
ಸಂದರ್ಶನದಲ್ಲಿ ಉಮಾಶ್ರೀ ತಮ್ಮ ಜೀವನದ ಪ್ರೇರಣಾದಾಯಕ ಘಟನೆಗಳನ್ನು ಹಂಚಿಕೊಂಡರು. ರಂಗಭೂಮಿಯ ಮೂಲಕ ಜೀವನಕ್ಕೆ ದಿಕ್ಕು ಸಿಕ್ಕಿದ್ದು, ಶ್ರದ್ಧೆ ಹಾಗೂ ಶ್ರಮದಿಂದ ನಾಟಕಗಳಲ್ಲಿ ಪಾಲ್ಗೊಂಡು, ಬಳಿಕ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾಗಿ ವಿವರಿಸಿದರು. ನಿರೂಪಕ ಆರ್.ಜೆ ಚೇತನ ಅವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, "ಯಾವುದೇ ಪಾತ್ರವನ್ನು ಜೀವಂತವಾಗಿ ತಲುಪಿಸಲು ರಂಗಭೂಮಿ ನೀಡಿದ ತರಬೇತಿಯು ಬಹುಮುಖ್ಯ. ನಟನೆ ಮಾತ್ರವಲ್ಲ, ಜಗತ್ತಿನ ಅವಲೋಕನೆಯೂ ಕಲಾವಿದನಿಗೆ ಅಗತ್ಯ" ಎಂದು ಹೇಳಿದರು. ಅವರು ಹೊಸ ತಲೆಮಾರಿನ ಕಲಾವಿದರಿಗೆ ಸಂದೇಶ ನೀಡುತ್ತಾ, "ಯಶಸ್ಸನ್ನು ಮಾತ್ರ ನೋಡಿ ಚಿತ್ರರಂಗದಲ್ಲಿ ಕಾಲಿಡಬೇಡಿ. ಪೂರ್ಣ ತಯಾರಿ, ಪರಿಶ್ರಮ ಮತ್ತು ಕಷ್ಟ ಸಹಿಸುವ ಮನೋಭಾವ ಅಗತ್ಯ. ಆಗ ಮಾತ್ರ ನಿಜವಾದ ಸಾಧನೆ ಸಾಧ್ಯ" ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಹಾಗೂ ಸಂಯೋಜಕರಾದ ಎಂ.ಎಸ್. ಚೌಗಲಾ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ನಗರ ಘಟಕದ ಕಾರ್ಯದರ್ಶಿ ಸಿ.ಎಮ್. ಬೂದಿಹಾಳ, ಸಮುದಾಯ ರೇಡಿಯೋ ಕೇಂದ್ರದ ಆರ್.ಜೆ ಚೇತನ, ಹಾಗೂ ಆರ್.ಜೆ ಮೀರಾ, ಶಿವಂ ಚೌಗಲಾ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 