ಕನಡ ಚಿತ್ರರಂಗಕ್ಕೆ ನಟ ವಿಷ್ಣುವರ್ಧನರ ಸೇವೆ ಅನನ್ಯ: ಗುಂಡೇನಟ್ಟಿ ಮಧುಕರ

ಕನಡ ಚಿತ್ರರಂಗಕ್ಕೆ ನಟ ವಿಷ್ಣುವರ್ಧನರ ಸೇವೆ ಅನನ್ಯ: ಗುಂಡೇನಟ್ಟಿ ಮಧುಕರ  Actor Vishnuvardhan's service to the Kannada cinema industry is unique: Gundenatti Madhukar

ಸ್ವರಾಂಜಲಿ ಕರೋಕೆ ಶಾಲೆಯವರಿಂದ ನಟ ವಿಷ್ಣುವರ್ಧನರ 75 ನೇ ಹುಟ್ಟುಹಬ್ಬ ಆಚರಣೆ  

ಬೆಳಗಾವಿ 18 ಹಿ ಕನಡ ಚಿತ್ರರಂಗಕ್ಕೆ ಕರ್ನಾಟಕ ರತ್ನ ನಟ ವಿಷ್ಣುವರ್ಧನರ ಸೇವೆ ಅನನ್ಯವಾದುದು. ನಾನೊಮ್ಮೆ ಪತ್ರಿಕೆಗಾಗಿ ನಟ ವಿಷ್ಣವರ್ಧನರ ಸಂದರ್ಶನ ಮಾಡಿದ್ದೆ. ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೂ ‘ದೇವರ ಇಚ್ಛೆ, ಆಕಾಶದೆಡೆ ಕೈ ಮಾಡಿ ಅವನು ಮಾಡಿಸಿದರೆ ಮಾಡಿಸಬಹುದು. ಭಗವಂತನ ಮುಂದೆ ಯಾರ ಆಟವೂ ನಡೆಯುವದಿಲ್ಲ’ ಹೀಗೆ ಉತ್ತರಿಸಿದ್ದರು. ಅವರು ಲೌಕಿಕ ಬಿಟ್ಟು ಸಂಪೂರ್ಣ ಆಧ್ಯಾತ್ಮಿಕದತ್ತ ವಾಲಿದ್ದು ಅವರ ಮಾತಿನಿಂದ ಗೊತ್ತಾಗುತ್ತಿತ್ತು ಎಂದು ಪತ್ರಕರ್ತ, ಲೇಖಕ ಗುಂಡೇನಟ್ಟಿ ಮಧುಕರ ವಿಷ್ಣುವರ್ಧನರನ್ನು ಭೇಟೆಯಾದ ಸಂದರ್ಭವನ್ನು ನೆನಪಿಸಿಕೊಳ್ಳುತ್ತ ಹೇಳಿದರು.   

ಹಿಂದವಾಡಿಯಲ್ಲಿರುವ ಸ್ವರಾಂಜಲಿ ಕರೋಕೆ ಸಂಗೀತ ಶಾಲೆಯವರು ನಟ ವಿಷ್ಣುವರ್ಧನ ಅವರ 75 ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಮಾಲೆಯನ್ನು ಹಾಕಿ, ಅವರ ಚಲನಚಿತ್ರಗಳಲ್ಲಿಯ ಹಾಡುಗಳನ್ನು ಹಾಡುವುದರೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಅವರೊಂದಿಗಿನ ಕ್ಷಣಗಳನ್ನು ನೆನಪಿಸಿಕೊಂಡ ಗುಂಡೇನಟ್ಟಿ ಅವರು ‘ಭೂತಯ್ನಯ ಮಗ ಅಯ್ಯು’ ಚಿತ್ರದ ‘ವಿರಸವೆಂಬ ವಿಷಕ್ಕೆ ಬಲಿಯಾದೆ ಏತಕೆ’ ಹಾಡನ್ನು ಹಾಡಿದರು.  

ಚೆಂದ್ರಶೇಖರ ಹಿರೇಮಠ, ಮಂಜುನಾಥ ಹಿರೇಮಠ, ಪ್ರಭಾಕರ ಕೊಲ್ಹಾರ, ಸುಧಾಕರ ಚೊಳಚದ, ಚಂದ್ರಕಾಂತ ಅಪ್ಪಣ್ಣವರ, ಪ್ರೇಮಾ ಸರ್ವಗೋಳ, ಇವರು ವಿಷ್ಣುವರ್ಧನ ನಟಿಸಿದ ಚಲನಚಿತ್ರಗಳಲ್ಲಿಯ ‘ಕರ್ನಾಟಕದ ಇತಿಹಾಸದಲಿ..” ‘ಮಾಮರವೆಲ್ಲೋ.. ಕೋಗಿಲೆಯೆಲ್ಲೋ..’ ‘ಆಲಾರೇ ಆಲಾರೇ..’ ‘ ಮುಂತಾದ ಗೀತೆಗಳನ್ನು ಹಾಡಿ ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಿಸಿದರು. ಸ್ವರಾಂಜಲಿ ಸಂಸ್ಥಾಪಕ ಚೆಂದ್ರಶೇಖರ ಹಿರೇಮಠ ನಿರೂಪಿಸಿದರು.