ನಟ ಪ್ರಥಮ್ ರೀಲೀಸ್ ಮಾಡಿದರು 'ಲೂಪ್' ಟ್ರೇಲರ್
Actor Pratham releases 'Loop' trailer
ಡ್ರಗ್ಸ್ ಬೆಟ್ಟಿಂಗ್ ಕುರಿತಾದ ಸಿನಿಮಾ ಸದ್ಯದಲ್ಲೇ ತೆರೆಗೆ
ಹೆಚ್.ಎಂ ಫಿಲ್ಮಸ್ ಬ್ಯಾನರ್‌ನಲ್ಲಿ ಯಲ್ಲಪ್ಪ ಎಸ್.ಕೆ ನಿರ್ಮಿಸಿರುವ, ಯುವ ಪ್ರತಿಭೆ ಯಶವಂತ ಮೊದಲಬಾರಿ ನಿರ್ದೇಶನ ಮಾಡಿರುವ 'ಲೂಪ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ಪ್ರಥಮ ಅಥಿತಿಯಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, 'ಜಾಲತಾಣದಲ್ಲಿ ಬರುವ ರಮ್ಮಿ ಜಾಹೀರಾತುಗೆ ಧ್ವನಿ ಕೇಳಿದಾಗ ಕೊಡಲ್ಲ ಎಂದೆ. ಹೇರ್ ಜಾಹೀರಾತುಗೆ ಕರೆದಾಗ, ಒಂದಿಷ್ಟು ಜನರ ಹೆಸರು ಹೇಳಿ ಅವರಿಗೆ ಕೂದಲು ತರಿಸಿ ಉಚಿತವಾಗಿ ಮಾಡುತ್ತೇನೆ ಎಂದಿದ್ದೆ. ಡೇಟಿಂಗ್ ಆಪ್ ಪ್ರಮೋಷನ್‌ಗೆ ಧ್ವನಿ ಕೇಳಿದಾಗಲೂ ನಾನು ಮಾಡಲಿಲ್ಲ. ಈ ವಿಷಯ ಹೇಳಲು ಕಾರಣ 'ಲೂಪ್' ಟ್ರೇಲರ್. ಹೌದು ಟ್ರೇಲರ್ ನೋಡಿದಾಗ ಇದೊಂದು ಡ್ರಗ್ಸ್ ಹಾಗೂ ಬೆಟ್ಟಿಂಗ್‌ಗೆ ಸಂಬಂಧಿಸಿದ ಸಿನಿಮಾ ಎನಿಸುತ್ತಿದೆ. ಗೆಳೆಯ ಉಮೇಶ್‌ಗಾಗಿ ಈ ಕಾರ್ಯಕ್ರಮಕ್ಕೆ ಬಂದೆ. ಇಂದಿನ ಜನರೇಷನ್‌ಗೆ ಸಂಬಂದಿಸಿದ ಚಿತ್ರ ಇದಾಗಿದೆ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇಡಿ ತಂಡಕ್ಕೆ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದರು.
'ನಾನು ಕಂಡಿರುವ ಕನಸಲ್ಲಿ 'ಲೂಪ್' ಮೊದಲ ಹೆಜ್ಜೆ. ಹಲವಾರು ಕಷ್ಟಗಳನ್ನು ದಾಟಿ ಇಲ್ಲಿಗೆ ಬಂದಿದ್ದೇನೆ. ಕನಸು ನನಸು ಮಾಡಿಕೊಳ್ಳುವವರೆಗೆ ನನ್ನ ಈ ಓಟ ನಿಲ್ಲಲ್ಲ. ಸರ್ಕಾರ ಡ್ರಗ್ಸ್, ಬೆಟ್ಟಿಂಗ್‌ಗೆ ಸಪೋರ್ಟ್ ಮಾಡದಿದ್ದರೂ ಇಂದು ಜಾಲತಾಣದಲ್ಲಿ ದೊಡ್ಡ ದಂದೆ ಆಗಿದೆ. ಆ ಅಂಶವನ್ನು ಇಟ್ಟುಕೊಂಡು 'ಲೂಪ್' ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮೆಸೇಜ್ ಕೂಡ ಕೊಟ್ಟಿದ್ದೇವೆ. ಕೆಟ್ಟ ಆಟಗಳು ಜೀವನದ ಮೇಲೆ ಹೇಗೆ ಪರಿಣಾಮ ಬಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ' ಎಂದು ನಿರ್ದೇಶಕ ಯಶವಂತ ತಿಳಿಸಿದರು. ನಂತರ ಚಿತ್ರದ ನಾಯಕ ಶಶಿಕಿರಣ್, 'ಇಂದು ಹೊಸಬರು ಸಿನಿಮಾ ಮಾಡೋದೆ ಕಷ್ಟ. ಈಗ ನಾವು ಚಿತ್ರವನ್ನು ತೆರೆಗೆ ತರುವ ಹಂತಕ್ಕೆ ತಂದಿರೋದು ಖುಷಿ. ಕಷ್ಟ ಪಟ್ಟು ಸಿನಿಮಾ ಮಾಡಿದ್ದು ಕಂಟೆಂಟ್ ಇದೆ. ನಮ್ಮ ಈ ಚಿತ್ರ ಇಷ್ಟ ಆದ್ರೆ ನೋಡಿ ಇಲ್ಲಾಂದ್ರೆ ತಪ್ಪು ಏನು ಎಂಬುದನ್ನು ತಿಳಿಸಿ. ನನ್ನ ಈ ಸಿನಿಮಾ ಜರ್ನಿಗೆ ತಂದೆ-ತಾಯಿ ತುಂಬಾ ಸಪೋರ್ಟ್ ಆಗಿದ್ದಾರೆ' ಎಂದರು. ಇನ್ನು ನಾಯಕಿ ಶೋಭಿತಾ, 'ಇಂದಿನ ಯುವಕರಿಗೆ ಗೇಮ್ ಅಭ್ಯಾಸ ಆಗಿ ಅದರ ನಿಯಂತ್ರಣಕ್ಕೆ ಬಂದು, 'ಲೂಪ್'ನಲ್ಲಿ ಸಿಲುಕಿ ಬಿಡುತ್ತಿದ್ದಾರೆ. ನಾನು ಹೀರೋ ಕಷ್ಟ ಪಡುವ ಟೈಮ್‌ನಲ್ಲೂ ಸಾಥ್ ನೀಡುವ ಪಾತ್ರ ಮಾಡಿದ್ದೇನೆ' ಎನ್ನುವರು.
ವೇದಿಕೆಯಲ್ಲಿ ನಿರ್ಮಾಪಕ ಯಲ್ಲಪ್ಪ ಮಾತನಾಡಿ, 'ಸಿನಿಮಾ ಚನ್ನಾಗಿ ಬಂದಿದ್ದು, ತಂಡದ ಶ್ರಮ ತುಂಬಾ ಇದೆ. ನನ್ನ ಮಗ ಡ್ಯಾನ್ಸರ್ ಆಗಿ ಹೆಸರು ಮಾಡಿದ್ದ. ಅವನಿಗಾಗಿ ಈ ಸಿನಿಮಾ ಮಾಡಿದ್ದೇನೆ' ಎಂದರು. ಉಳಿದಂತೆ ಕಲಾವಿದರಾದ ಅಪ್ಪು ರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್ ತಮ್ಮ ಅನುಭವ ಹಂಚಿಕೊಂಡರು. ಉಮೇಶ್ ಕೆ.ಎನ್ ಸಹ ನಿರ್ಮಾಣ ಈ ಚಿತ್ರಕ್ಕಿದೆ. ಇಂದಿನ ಜನರೇಷನ್‌ಗೆ ಸೂಕ್ತವಾದ ಸಿನಿಮಾ ಇದಾಗಿದ್ದು, ಬೆಟ್ಟಿಂಗ್ ಹಾಗೂ ಡ್ರಗ್ಸ್ ಮೇಲೆ ಕಥೆ ಸಾಗುತ್ತದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 