ನಟ ದರ್ಶನ್ ಗನ್ ಪರವಾನಗಿ ತಾತ್ಕಾಲಿಕ ಅಮಾನತ್ತು
Actor Darshan Gunn's license temporarily suspended
ಬೆಂಗಳೂರು 21: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಬಳಿಯಿರುವ ಗನ್ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.
ಈ ಹಿಂದೆಯೇ ಪೊಲೀಸರು ದರ್ಶನ್‌ರ ರದ್ದು ಗನ್ ಪರವಾನಗಿ ಮಾಡುವುದಾಗಿ ಹೇಳಿ, ಈ ಸಂಬಂಧ ನೋಟಿಸ್ ನೀಡಿದ್ದರು. ಆದರೆ ದರ್ಶನ್, ನಾನೊಬ್ಬ ಸೆಲೆಬ್ರಿಟಿ ಆಗಿದ್ದೇನೆ. ಭದ್ರತೆಯ ದೃಷ್ಟಿಯಿಂದ ನನಗೆ ಗನ್ ಅವಶ್ಯಕತೆ ಇದೆ. ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆಗೆ ಗನ್ ಬೇಕು ಎಂದು ಪೊಲೀಸರಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ದರ್ಶನ್ ಅವರ ಗನ್ ಲೈಸೆನ್ಸ್‌ನ್ನು ತಾತ್ಕಾಲಿಕ ಮಾನತ್ತಿನಲ್ಲಿಡಲು ನಿರ್ಧರಿಸಿ ದರ್ಶನ್ ಅವರು ತನ್ನ ಬಳಿಯಿರುವ ಎರಡು ಗನ್ ಆರ್ ಆರ್ ನಗರ ಪೊಲೀಸರಿಗೆ ಸರಂಡರ್ ಮಾಡಬೇಕು, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಗನ್ ಇಟ್ಟುಕೊಳ್ಳುವಂತಿಲ್ಲ ಎಂದು ಪೊಲೀಸರು ಸೂಚನೆ ನೀಡಿದ್ದಾರೆ
ಪೊಲೀಸರ ಸೂಚನೆ ಮೇರೆಗೆ ತಮ್ಮ ಸಹಾಯಕನ ಮೂಲಕ ದರ್ಶನ್ ಲೈಸೆನ್ಸ್ ಗನ್ ಆರ್ ಆರ್ ನಗರ ಠಾಣೆಗೆ ಸರಂಡರ್ ಮಾಡಿದ್ದಾರೆ.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 