‘ದೇಶದ ಪರಂಪರೆ ಉಳಿಸಲು ಶ್ರಮಿಸಿರಿ’
Abhinava Shantalinga's greetings at the Guru Vandana ceremony held at Amminabavi
ಅಮ್ಮಿನಬಾವಿಯಲ್ಲಿ ಜರುಗಿದ ಗುರುವಂದನಾ ಸಮಾರಂಭದಲ್ಲಿ ಅಭಿನವ ಶಾಂತಲಿಂಗ ಶ್ರೀಗಳ ಸದಾಶಯ ನುಡಿ
ಧಾರವಾಡ 16: ಭಾರತವು ಆಧ್ಯಾತ್ಮಿಕ, ಧಾರ್ಮಿಕ, ಚಾರಿತ್ರಿಕ, ಸಾಂಸ್ಕೃತಿಕ ಶ್ರೇಷ್ಠ ಪರಂಪರೆಯನ್ನು ಹೊಂದಿದ್ದು, ದೇಶದ ಈ ಉತ್ಕೃಷ್ಟ ಪರಂಪರೆಯನ್ನು ಉಳಿಸಲು ಎಲ್ಲರೂ ಶ್ರಮಿಸಬೇಕೆಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಗ್ರಾಮದ ಎಲ್ಲ ಶಾಲೆಗಳ 1994-95ನೆಯ ವರ್ಷದ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಆಡಳಿತ ಮಂಡಳಿಯ ಮಾಳಪ್ಪ ಅಮರಶೆಟ್ಟಿ, ಬಿ.ಎನ್. ನವಲಗುಂದ, ಎಂ.ಸಿ. ಹುಲ್ಲೂರ, ಸದಾನಂದ ಮುಂದಿನಮನಿ, ಎಸ್.ಎಲ್.ಗುಡಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗುರುವಂದನೆ : ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾ ಗುರುಗಳಾದ ಎಸ್.ಎಲ್. ಎಮ್ಮಿ, ಆರ್.ಎಸ್. ಗುಲಗಂಜಿಕೊಪ್ಪ, ಎನ್.ಬಿ. ಪವಾರ, ಪುಷ್ಪಾ ಬಾಗಲವಾಡಿ, ವ್ಹಿ.ಬಿ. ಕೆಂಚನಗೌಡರ, ಎಸ್.ವೈ.ಪೂಜಾರ, ಎನ್.ಸಿ. ಪಾಟೀಲ, ಎಸ್.ಎಸ್. ಅಂಗಡಿ, ಚೆನ್ನಮ್ಮ ಬೈಲೂರ, ದಾಕ್ಷಾಯಣಿ ಅಂಗಡಿ, ಜೀಜಾಬಾಯಿ ಜಾಧವ, ಗುರುಮೂರ್ತಿ ಯರಗಂಬಳಿಮಠ, ಚೆನ್ನಮ್ಮ ನೀರಲಕಟ್ಟಿ, ಸುಮನ ಬೋಂಗಾಳೆ ಅವರನ್ನು ಗೌರವಿಸಿ ಗುರುವಂದನೆ ಸಲ್ಲಿಸಿದರು.
ಹಳೆಯ ವಿದ್ಯಾರ್ಥಿಗಳ ಪರವಾಗಿ ಸುನೀಲ ಗುಡಿ, ಶಶಿಕಲಾ ಸರೂರ, ನಾಗಪ್ಪ ಗೆದ್ದಿಕೇರಿ, ಮಹಾದೇವಿ ಲಿಗಾಡೆ, ರಮೇಶ ಉಳ್ಳಿಗೇರಿ, ಮಂಜುಳಾ ಸೂರ್ಯವಂಶಿ ಮಾತನಾಡಿದರು. ಇದೇ ಸಂದರ್ಭದಲ್ಲಿ 8, 9 ಮತ್ತು 10 ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾವ್ಯಗಾಯನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಮೊದ 3 ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂತೋಷ ರಜಪೂತ ಸ್ವಾಗತಿಸಿದರು. ಗೂಳಪ್ಪ ಕೋಳಿ ಮತ್ತು ವಿಶಾಲಾ ಅಣ್ಣಿಗೇರಿ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.
ಶಾಂತಿನಾಥ ಲೋಕೂರ, ರಮೇಶ ವಿಠ್ಠೋಜಿ, ಅರ್ಜುನ ತುಕ್ಕಪ್ಪನವರ, ವೀರೇಶ ಅಮರಗೋಳ, ಸದಾನಂದ ಪಾಟೀಲ, ಅರ್ಜುನ ಪಟದಾರಿ, ವಿಶ್ವನಾಥ ಆರಾಧ್ಯಮಠ, ಚಂದ್ರು ಧನಶೆಟ್ಟಿ, ಲಕ್ಷ್ಮಣ ತುಕ್ಕಪ್ಪನವರ, ಬಸವರಾಜ ಪತ್ತಾರ, ಕಲ್ಮೇಶ ಹಿರೇಮಠ, ಉಮೇಶ ಕಾಶಿ, ಹನುಮಂತ ಭಜಂತ್ರಿ, ಬಸವರಾಜ ಸಾತನ್ನವರ, ಮುತ್ತಕ್ಕ ಕುಂದಗೋಳ, ಸುಜಾತಾ ಕಾಳಗಿ, ಬಸವಣ್ಣೆವ್ವ ಧನಶೆಟ್ಟಿ, ಬಿಸ್ಟಮ್ಮ ಶಿಕ್ಕಲಿಗೇರ ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 