ತಾಳಿಕೋಟೆಯಲ್ಲಿ ಅಮೃತ್ 2.0 ನೀರು ಯೋಜನೆಗೆ ಚಾಲನೆ

ತಾಳಿಕೋಟೆಯಲ್ಲಿ ಅಮೃತ್ 2.0 ನೀರು ಯೋಜನೆಗೆ ಚಾಲನೆ  AMRUT 2.0 water project launched in Talikote


 ತಾಳಿಕೋಟೆ 20  :  ಪಟ್ಟಣದ ಕೆಎಚ್‌ಬಿ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ **ಅಮೃತ್ 2.0 ಯೋಜನೆಯಡಿ ಪ್ರಾಯೋಗಿಕ ನೀರು ಸರಬರಾಜು ಕಾರ್ಯಕ್ರಮಕ್ಕೆ** ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಚಾಲನೆ ನೀಡಿದರು.  

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, **“ನೀರು ಅಮೂಲ್ಯ ಸಂಪತ್ತು. ಅದನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು”** ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಪಟ್ಟಣದ ಜನರಿಗೆ 24ಥ7 ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಇದೀಗ ಕೆಎಚ್‌ಬಿ ಕಾಲೋನಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದರು.  

 ಯೋಜನೆಯ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತಕ್ಕೆ ?14.55 ಕೋಟಿ ಹಾಗೂ ಎರಡನೇ ಹಂತಕ್ಕೆ ?17.20 ಕೋಟಿ ಅನುದಾನವಿದೆ. ಯೋಜನೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದರೂ ರಾಜ್ಯ ಸರ್ಕಾರವೂ ಸುಮಾರು ಶೇ.50ರಷ್ಟು ಪಾಲುದಾರಿಕೆ ಹೊಂದಿದೆ ಎಂದು ಶಾಸಕ ನಾಡಗೌಡ ತಿಳಿಸಿದರು.  

 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ತಾಳಿಕೋಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ತಂದು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.  

 ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಪುರಸಭೆ ಮುಖ್ಯಾಧಿಕಾರಿ ಸುನಿಲ್ ಪಾಟೀಲ್ ಸೇರಿದಂತೆ ಹಲವು ಮುಖಂಡರು, ಗುತ್ತಿಗೆದಾರರು, ಪುರಸಭೆ ಸಿಬ್ಬಂದಿ ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.