ಶಹೀದ್ ರಾಮಪ್ರಸಾದ್ ಬಿಸ್ಮಿಲ್, ಅತ್ಪಾಕ್ ಉಲ್ಲಾ ಖಾನ್ ಮತ್ತು ರೋಶನ್ ಸಿಂಗ್ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಧ್ವಂಸಗೊಳಿಸಿರುವುದಕ್ಕೆ ಎಐಡಿವೈಒ ತೀವ್ರ ಖಂಡನೆ
AIDYO strongly condemns the Uttar Pradesh BJP government's vandalism of the statues of Shaheed Rampr
ಕೊಪ್ಪಳ 28: “ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ, 1925 ರ ’ಕಾಕೋರಿ ಘಟನೆ’ ಒಂದು ಐತಿಹಾಸಿಕ ಘಟನೆಯಾಗಿದ್ದು, ಇದು ಭಾರತದಾದ್ಯಂತ ಸ್ವಾತಂತ್ರ್ಯ ಪ್ರಿಯ ಬ್ರಿಟಿಷ್ ವಿರುದ್ಧದ ಹೋರಾಟಕ್ಕೆ ಜನರನ್ನು ಪ್ರೇರೇಪಿಸಿತು. ಈ ಹೋರಾಟದಲ್ಲಿ ರಾಮಪ್ರಸಾದ್ ಬಿಸ್ಮಿಲ್, ಅಲ್ಫಾಕ್ ಉಲ್ಲಾ ಖಾನ್, ರೋಶನ್ ಸಿಂಗ್ ಗಲ್ಲು ಶಿಕ್ಷೆಯನ್ನು ನಗುನಗುತ್ತಾ ಎದುರಿಸಿ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದರು.
ಉತ್ತರ ಪ್ರದೇಶದ ಶಾಜಹಾನ್ಪುರದ ಜನರು 1972ರಲ್ಲಿ ಈ ಹುತಾತ್ಮರಿಗೆ ಸೂಕ್ತ ಗೌರವ ಮತ್ತು ಶ್ರದ್ದೆಯೊಂದಿಗೆ ನಗರದ ಮಧ್ಯಭಾಗದಲ್ಲಿ ಈ ಹುತಾತ್ಮರ ಪ್ರತಿಮೆಯನ್ನು ಸ್ಥಾಪಿಸಿದ್ದರು. ನಗರದ ಸೌಂದರ್ಯೀಕರಣದ ಹೆಸರಿನಲ್ಲಿ ಶಾಜಹಾನ್ಪುರದ ನಗರಸಭಾ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಇದೇ ಮಾರ್ಚ್ 23ರಂದು ಮಹಾನ್ ಕ್ರಾಂತಿಕಾರಿಗಳಾದ ಭಗತ್ಸಿಂಗ್, ಸುಖ್ ದೇವ್, ರಾಜ್ಗುರು ಅವರ ಹುತಾತ್ಮದಿನದಂದೇ ರಾಮಪ್ರಸಾದ್ ಬಿಸ್ಮಿಲ್, ಅಲ್ಪಾಕ್ ಉಲ್ಲಾ ಖಾನ್, ರೋಶನ್ ಸಿಂಗ್ರ ಪ್ರತಿಮೆಗಳನ್ನು ಕೆಡವಿಸಿದೆ.
ಈ ಕೃತ್ಯವನ್ನು ಉತ್ತರ ಪ್ರದೇಶ ಬಿಜೆಪಿ ಸರ್ಕಾರವು ಪ್ರತ್ಯೇಕವಾಗಿ ಮಾಡಿರುವುದಲ್ಲ. ಬದಲಾಗಿ ಇಂದು ಎಲ್ಲಾ ಆಳ್ವಿಕ ಪಕ್ಷಗಳು ಮಹಾನ್ ಕ್ರಾಂತಿಕಾರಿಗಳ ನೆನಪನ್ನು ಜನ ಮಾನಸದಿಂದ ಅಳಿಸಿಹಾಕಲು ಪ್ರಯತ್ನಿಸುತ್ತಿರುವ ಪೀತೂರಿಯ ಭಾಗವೇ ಆಗಿದೆ. ಇದು ಪ್ರಸಕ್ತ ವ್ಯವಸ್ಥೆಯ ಕುಟಿಲ ನೀತಿಯ ಪ್ರತಿಬಿಂಬವಾಗಿದೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯಗಳನ್ನು ಇಂದಿನ ಪೀಳಿಗೆ ಅರಿತರೆ ಪ್ರಸಕ್ತ ವ್ಯವಸ್ಥೆಯ ಸಮಸ್ಯೆಗಳ ವಿರುದ್ಧ ಸಿಡಿದೇಳುತ್ತಾರೆಂಬ ಭಯ ಆಳ್ವಿಕರನ್ನು ಕಾಡುತ್ತಿದೆ.
ಆದ್ದರಿಂದ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಅಳಿಸಿಹಾಕಲು ಬಯಸುತ್ತಾರೆ.ಆದರೆ, ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು ದೇಶದ ಬಗ್ಗೆ, ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧರ ಬಗ್ಗೆ ನಿಜವಾದ ಗೌರವವುಳ್ಳ ಜನರಿಂದ ದೂರ ಮಾಡಲು ಸಾಧ್ಯವಿಲ್ಲ. ಆದ್ದರಿಂದಲೇ ಈ ಘಟನೆಗೆ ಶಾಜಹಾನ್ಪುರದಲ್ಲಿ ಮಾತ್ರವಲ್ಲದೇ ಉತ್ತರ ಪ್ರದೇಶದಾದ್ಯಂತ ಜನರಿಂದ ಭಾರಿ ವಿರೋಧ ವ್ಯಕ್ತಗವಾಗಿದೆ.
ಜನವಿರೋಧಕ್ಕೆ ಮಣಿದ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಅಲ್ಲಿನ ನಗರಸಭೆಯ ಇಂಜಿನಿಯರ್ ಮತ್ತು ಅಧಿಕಾರಿಯನ್ನು ಅಮಾನತ್ತುಗೊಳಿಸಿದೆ. ಆದರೆ ಇಷ್ಟು ಸಾಲದು. ಕೂಕ್ತ ಗೌರವದೊಂದಿಗೆ ಮರುಸ್ಥಾಪಿಸಬೇಕು. ಈ ಹೇಯ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಇಂತಹ ಹೀನ ಕೃತ್ಯಗಳು ಮರಕಳಿಸದಂತೆ ವಿರೋಧಿಸಲು ಭಾರತದ ಯುವಜನರು ಸಜ್ಜಾಗಬೇಕೆಂದು ನಾವು ಕರೆ ನೀಡುತ್ತೇವೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 