ಬಿಜೆಪಿ ಬೆಂಬಲಿಗರ ತಂಡಕ್ಕೆ ಗೆಲುವು, ಕಾಂಗ್ರೆಸ್ ಗೆ ಮುಖ ಭಂಗ ಒಂದು ಸ್ಥಾನ ಗೆಲ್ಲದ ಕಾಂಗ್ರೆಸ್.

ಬಿಜೆಪಿ ಬೆಂಬಲಿಗರ ತಂಡಕ್ಕೆ ಗೆಲುವು, ಕಾಂಗ್ರೆಸ್ ಗೆ ಮುಖ ಭಂಗ    ಒಂದು ಸ್ಥಾನ ಗೆಲ್ಲದ ಕಾಂಗ್ರೆಸ್. A victory for the BJP supporters' team, a blow to the Congress. The Congress did not win a single se

ಬಿಜೆಪಿ ಬೆಂಬಲಿಗರ ತಂಡಕ್ಕೆ ಗೆಲುವು, ಕಾಂಗ್ರೆಸ್ ಗೆ ಮುಖ ಭಂಗ    ಒಂದು ಸ್ಥಾನ ಗೆಲ್ಲದ ಕಾಂಗ್ರೆಸ್.   ಬಿಜೆಪಿ ಆಡಳಿತ ಚುಕ್ಕಾಣಿ

ಲೋಕದರ್ಶನ ವರದಿ  

ಹೂವಿನಹಡಗಲಿ   13 : ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 13ಕ್ಕೆ 13 ಸ್ಥಾನಗಳನ್ನು ಬಿಜೆಪಿ ಭರ್ಜರಿ ಜಯ ಸಾಧಿಸಿ ಮೊದಲ ಬಾರಿಗೆ ಬಿಜೆಪಿ ಆಡಳಿತ ಪಾಲಾಗಿದೆ.ಕಾಂಗ್ರೆಸ್ ಬೆಂಬಲಿಗರು ಒಂದು ಸ್ಥಾನ ವನ್ನು ಗೆಲ್ಲದೇ ಹೀನಾಯವಾಗಿ ಸೋತು ಮುಖ ಭಂಗ ವಾಗಿದೆ. ಸಾಮಾನ್ಯ ಕ್ಷೇತ್ರದಿಂದ ನಾಗಭೂಷಣ, ಜಿ.ಮಲ್ಲಪ್ಪ, ಮಹಿಳಾ ಕ್ಷೇತ್ರದಿಂದ ಹಣ್ಣಿ ಸುಮ,ಎಂ.ಸಂಧ್ಯಾ, ,ಹಿಂದುಳಿದ  ವರ್ಗ ’ಎ’ ಸ್ಥಾನಕ್ಕೆ ಎ.ಜೆ.ವೀರೇಶ, ಹಿಂದುಳಿದ ವರ್ಗ ’ಬಿ’ ಸ್ಥಾನಕ್ಕೆ ಹಕ್ಕಂಡಿ ಮಹಾದೇವ, ಪರಿಶಿಷ್ಠ ಜಾತಿ ಸ್ಥಾನಕ್ಕೆ ಎಲ್‌.ಚಂದ್ರನಾಯ್ಕ ಆಯ್ಕೆಯಾಗಿದ್ದು, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಟಿ.ಮಹಾಂತೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.” ಎ.ವರ್ಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ದಾಸನಹಳ್ಳಿ ಕುರಿಯಲ್ಲಪ್ಪನರ ಮಂಜುನಾಥ, ಇಟ್ಟಿಗಿ ಕೆ.ಎನ್‌. ರಾಜಶೇಖರಗೌಡ, ಹೊಳಗುಂದಿಯ ಎಂ.ನೆಪೋಲಿಯನ್, ಹಿರೇಹಡಗಲಿಯ ಬಿ.ಎಂ.ವೀರಯ್ಯ, ಹಗರನೂರಿನ ನಿಂಗಪ್ಪ ಬೆನ್ನೂರು ಆಯ್ಕೆಯಾಗಿದ್ದಾರೆ.ಸಹಕಾರ ಸಂಘದ  ಮಳಿಗೆಯಲ್ಲಿ ಮತಗಟ್ಟಿ ತೆರೆಯಲಾಗಿತ್ತು. 1186 ಮತದಾರ ಪೈಕಿ 1001 ಮತದಾರರು (ಶೇ 91.98) ಹಕ್ಕು ಚಲಾಯಿಸಿದರು. ತಹಶಿಲ್ದಾರರ ಜಿ.ಸಂತೋಷ ಕುಮಾರ ಚುನಾವಣಾಧಿಕಾರಿಯಾಗಿದ್ದರು.ಪೊಲೀಸ್ ಬಿಗಿ ಬಂದೋಬಸ್ತನಲ್ಲಿ ಶಾಂತಿ ಯುತ ಚುನಾವಣೆ ನಡೆಯಿತು. ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಬಿಜೆಪಿ ಮುಖಂಡರು, ಕಾರ್ಯ ಕರ್ತರು ನಗೆ ಬೀರಿ ಪಟ್ಟಣದಲ್ಲಿ ಶಾಸಕ ಕೃಷ್ಣನಾಯಕ ಸಮ್ಮುಖದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಗೆಲುವು ಸ್ಥಳೀಯ ರಾಜಕೀಯ ದಲ್ಲಿ ಬಿಜೆಪಿ ಗೆ ಮತ್ತೊಮ್ಮೆ ಬಲ ತುಂಬಿದೆ.