ಗ್ರಾಮ ದೇವತೆ ಉಡಿತುಂಬುವ ಕಾರ್ಯಕ್ರಮದಲ್ಲಿ ಶಕ್ತಿಪ್ರದರ್ಶನ
A show of strength at the village deity's Uditumna event
ಲೋಕದರ್ಶನ ವರದಿ
ಉಗರಗೋಳ 01: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶುಕ್ರವಾರ ರಂದು ಕಾರಹುಣ್ಣಮೆ ಅಂಗವಾಗಿ ಗ್ರಾಮ ದೇವತೆಯಾದ ಧ್ಯಾಮವ್ವ ದುರ್ಗವ್ವ ದೇವಿಯರ ಉಡಿ ತುಂಬುವ ಕಾರ್ಯಕ್ರಮದ ಪ್ರಯುಕ್ತ ಶಕ್ತಿಪ್ರದರ್ಶನ ಉಗರಗೋಳ ಗ್ರಾಮದ ಯುವಕರಿಂದ ಜರುಗಿತು.
20 ವರ್ಷದ ಕುಮಾರ-ಪ್ರವೀಣ ದುಂಡಿ(ಗೋಸಲ್) 20 ವರ್ಷದ ಕುಮಾರ-ವಿಜಯ ಪಡಸುಣಗಿ, 20 ವರ್ಷದ ಕುಮಾರ-ಕಾರ್ತಿಕ ಕುದರಿ ಹಾಗೂ ಎರಡು ಜೋಡು ಎತ್ತುಗಳು ಸಹ ಇವರೊಂದಿಗೆ ಸಾತ ನೀಡಿದವು. 1 ಕ್ವಿಂಟಲ್ ತೂಕದ ಜೋಳದ ಚೀಲವನ್ನು ಹೊತ್ತು ಯಾರ ಸಹಾಯವಿಲ್ಲದೆಯೇ ದಿಡ ನಮಸ್ಕಾರವನ್ನು ಹಾಕುವ ಜೊತೆಗೆ ಎತ್ತುಗಳು ಸಹ ಅವರು ಹಾಕಿದ ಹಾಗೆ ದೀಡ ನಮಸ್ಕಾರಗಳನ್ನು ಹಾಕಿದವು.
ಉಗರಗೋಳದ ರಾಯಣ್ಣ ಸರ್ಕಲ್‌ನಿಂದ ಶ್ರೀಬಸವೇಶ್ವರ ಸರ್ಕಲ್ ವರೆಗೆ ಸುಮಾರು ಅರ್ದ ಕಿ ಮೀ ವರೆಗೆ ಸಾಗಿ ಜಾತ್ರೆಗೆ ಮೆರಗು ತಂದು, ನೋಡುಗರನ್ನು ಹುಬ್ಬೆರಿಸುವಂತೆ ಮಾಡಿದರು. ಉಗರಗೋಳ ನಿರ್ವಾಣೇಶ್ವರಮಠದ ಗುರು ಮಹಾಂತ ಸ್ವಾಮಿಗಳು, ಹಿರೇಕುಂಬಿ ಅಮೋಘಿಮಠದ ಪ.ಪೂ ಮುನಯೈ ಸ್ವಾಮಿಗಳು, ಮಲ್ಲಪ್ಪ ಶಿದ್ದಕ್ಕನವರ, ವಿಠಲ ಶಿದ್ದಕ್ಕನವರ, ಹನಮಂತ ಶಿದ್ದಕ್ಕನವರ, ಮಂಜುನಾಥ ಗುಡೆನ್ನವರ, ಯಲ್ಲಪ್ಪ ದುಂಡಿ, ಮಾರುತಿ ಪಡಸುಣಗಿ, ಬಸಪ್ಪ ಅಳಗವಾಡಿ, ರಾಜನಗೌಡ ಟೊಪಣ್ಣವರ, ನಿಲಪ್ಪ ಶಿದ್ದಕ್ಕನವರ, ಭಿಮಶಿ ಕೂಮಟೊಜಿ, ನಿಂಗಪ್ಪ ಗೋವಪ್ಪನವರ ಹಾಗೂ ಗ್ರಾಮಸ್ಥರು ಇದ್ದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 