ಬೆಳಗಾವಿಯಲ್ಲಿ ‘ಕೊಲ್ಲಲು.ಕಾಮ್’ ನಾಟಕ ಪ್ರದರ್ಶನ

ಬೆಳಗಾವಿಯಲ್ಲಿ ‘ಕೊಲ್ಲಲು.ಕಾಮ್’ ನಾಟಕ ಪ್ರದರ್ಶನ A humorous musical play

ಲೋಕದರ್ಶನ ವರದಿ

ಬೆಳಗಾವಿ: ೨೪ ನಾಟಕಕಾರ ಯಶವಂತ ಸರದೇಶಪಾಂಡೆಯವರ ನೆನಪಿನಲ್ಲಿ ಬೆಂಗಳೂರಿನ ‘ಸಂಜೋಗ’ ತಂಡದ ‘ಕೊಲ್ಲಲು.ಕಾಮ್’ ಸಂಗೀತ-ಹಾಸ್ಯ ನಾಟಕ ಪ್ರದರ್ಶನವನ್ನು ಇದೇ ೩೦ರಂದು ಸಂಜೆ ೪.೩೦ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. 

ನಗರದ ರಂಗಸAಪದ ಹಾಗೂ ಕನ್ನಡ ಭವನ ಸಹಯೋಗದಲ್ಲಿ ನಡೆಯಲಿರುವ ನಾಟಕವನ್ನು ಪ್ರವೀಣ ಗೋಡಖಿಂಡಿಯವರು ರಚಿಸಿ ನಿರ್ದೇಶಿಸಿದ್ದಾರೆ. ಪ್ರವೀಣ ಗೋಡಖಿಂಡಿಯವರೊAದಿಗೆ ಖ್ಯಾತ ಕಲಾವಿದ ರವಿ ಕುಲಕರ್ಣಿ ನಟಿಸಲಿದ್ದು, ಕಿರಣ ಗೋಡಖಿಂಡಿ ಹಾಗೂ ಷಡ್ಜ ಗೋಡಖಿಂಡಿ ಸಂಗೀತ ನೀಡಲಿದ್ದಾರೆ. 

೯೦ ನಿಮಿಷಗಳ ಹಾಸ್ಯ ಸಂಗೀತ ನಾಟಕಕ್ಕೆ ರಂಗಸAಪದ ಬೆಳಗಾವಿಯ ಪ್ರೇಕ್ಷಕ ಸದಸ್ಯತ್ವ ಹೊಂದಿರುವವರಿಗೆ ಉಚಿತ ಪ್ರವೇಶವಿದೆ. ಇತರ ಪ್ರೇಕ್ಷಕರಿಗೆ ಪ್ರವೇಶ ಶುಲ್ಕ ?೨೦೦ ನಿಗದಿಪಡಿಸಲಾಗಿದೆ ಎಂದು ರಂಗಸAಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.