ಕಲ್ಲು ಇಟ್ಟಿಗೆಯಿಂದ ಕಟ್ಟಿದ ಮನೆ ಮನೆಯಲ್ಲ, ಗೃಹಿಣಿ ಮನಸ್ಸು ವಾಶಾಲವಾದ ಮನೆಯಂತಿರಬೇಕು
A house built of bricks and stones is not a house, a housewife's mind should be like a home where sh
ಬಂಕಾಪುರ 02: ನೂತನ ವಧು, ವರರು ಗೃಹಸ್ತಾಶ್ರಮದ ಸಾಮಾನ್ಯ ನಿಯಮಗಳನ್ನು ಪರಿಪಾಲನೆ ಮಾಡಿದರೆ ಸಾಕು, ನೀವು ದೇವರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ ದೇವರೇ ನಿಮ್ಮ ಬಳಿ ಬರುತ್ತಾನೆ ಎಂದು ಕಾಶಿ ಡಾ.ಚಂದ್ರಶೇಖರ ಭಗವತ್ಫಾದರು ನುಡಿದರು.
ಬಿಸನಳ್ಳಿ ಗ್ರಾಮದ ಕಾಶಿ ಶಾಖಾಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ರಾಷ್ಟ್ರ ವೀರಶೈವ ಸೇವಾ ಸನಾಜ ಬಲಕಂಪೇಟಹೈದ್ರಾಬಾದ ಇವರ ಆಶ್ರಯದಲ್ಲಿ ನಡೆದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ, ಶಿವದೀಕ್ಷಾ ಅಯ್ಯಾಚಾರ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಕಲ್ಲು ಇಟ್ಟಿಗೆಯಿಂದ ಕಟ್ಟಿದ ಮನೆ ಮನೆಯಲ್ಲ, ಮನಿಯೋಳಗಿರುವ ಗೃಹಿಣಿ ಮನಸ್ಸು ಪ್ರೀತಿ ವಿಶ್ವಾಸ, ಮಮತೆ ತುಂಬಿದ ಮನೆಯಂತಾಗಿರಬೇಕು. ಈ ಸುಕ್ಷೇತ್ರ ಕಾಶಿ ಶಾಖಾಮಠದಲ್ಲಿ ವಿವಾಹ ಬಂಧನಕ್ಕೋಳಗಾದ ನೂತನ ವಧು ವರರ ಮುಂದಿನ ದಾಂಪತ್ಯ ಜೀವನ ಸೂಖಕರವಾಗಿರಲಿ ಎಂದು ಹಾರೈಸಿದರು.
ಈ ಗಾಗಲೇ ನೂತನ ಕಲ್ಯಾಣಮಂಟಪ ಸರ್ಕಾರ ಹಾಗು ಭಕ್ತರ ಸಹಾಯದಿಂದ ಲೋಕಾರೆ್ಣ ಹಂತಕ್ಕೆ ತಲುಪಿದೆ. ಈ ಕ್ಷೇತ್ರದ ಶಾಸಕ ಯಾಸೀರಹಮ್ಮದ ಖಾನ ಪಠಾಣರವರು ಕಾಶಿ ವಿಶ್ವನಾಥನ ಬೃಹತ್ ಶಿಲಾಮಂದಿರ ನಿರ್ಮಾಣಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ ನೀಡಲು ಒಪ್ಪಿಕೊಂಡಿದ್ದು, ನೂತನ ವಿಶ್ವನಾಥನ ಶಿಲಾಮಂದಿರಕ್ಕೆ ಶಾಸಕರಿಂದಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹೈದರಾಬಾದ ಬಲಕಂಪೇಟೆ ಭಕ್ತರು ಪ್ರತಿಬವರ್ಷ ಇಲ್ಲಿಗೆ ಆಗಮಿಸಿ, ತಮ್ಮ ಮನೆಯ ಮಕ್ಕಳ ಮದುವೆ ಮಾಡುವಂತೆ ನೂತನ ವಧು ವರರಿಗೆ ವಸ್ತ್ರ ತಾಳಿ, ಪೇಟ, ಶಲ್ಯ ಯನ್ನು ನೀಡಿ ಕಲ್ಯಾಣ ಮಹೋತ್ಸವನ್ನು ಜರುಗಿಸುತ್ತಾ ಬಂದಿದ್ದಾರೆ. ವಿವಾಹ ವಾಗುವರು ಯಾವುದೇ ಒತ್ತಡ, ಹೊರೆಯಿಲ್ಲದೆ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಗೃಹಸ್ತಾಶ್ರಮಕ್ಕೆ ಪಾದಾರೆ್ಣ ಮಾಡಬಹುದು. ನಿಜವಾಗಲೂ ಬಲಕಂಪೇಟೆ ಭಕ್ತರ ಸೇವೆ ನಿಸ್ವಾರ್ಥಸೇವೆಯಾಗಿದೆ ಎಂದು ಹೇಳಿದರು.
25 ಜಂಗಮವಟುಗಳ ಶಿವದೀಕ್ಷಾ ಕಾರ್ಯಕ್ರಮ, 21 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹಗಳು ಜರುಗಿದವು. ಉಮಾದೇವಿ ಉಮಾಶಂಕರ ಕಾಶಿ ಪೀಠಕ್ಕೆ 5 ಲಕ್ಷ ರೂ ದೇಣಿಗೆ ನೀಡಿದರು.
ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮಿಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಡಿನಹರಗುರು ಚರಮೂರ್ತಿಗಳು ಹೈದ್ರಾಬಾದ ಬಲಕಂಪೇಟೆಯ ರಾಷ್ಟ್ರ ವೀರಶೈವ ಸೇವಾ ಸಮಾಜದ ಸದ್ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 