ಗಾಯಕಿ ಎಸ್‌. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಗಾಯಕಿ ಎಸ್‌. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ A heartfelt tribute to singer S. Janaki.

 ರಾಯಬಾಗ 13: ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ತಾಲೂಕು ಘಟಕ ರಾಯಬಾಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ರಾಯಬಾಗದ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಗಾಯಕಿ ಎಸ್‌. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸೋಮವಾರ ಶ್ರದ್ಧಾಂಜಲಿ ಅರ​‍್ಿಸಲಾಯಿತು.  

ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಎಸ್‌. ಜಾನಕಿ ಅವರು ತಮ್ಮ ಸುಮಧುರ ಕಂಠದ ಮೂಲಕ ದೇಶದ ಜನರ ಮನಗೆದ್ದಿದ್ದರು. ಅವರ ಕಲಾ ಸೇವೆಯನ್ನು ಸ್ಮರಿಸಿ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಲಾಯಿತು.  

ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಟಿ.ಎಸ್‌. ವಂಟಗೂಡಿ, ಕಲ್ಮೇಶ ಸತ್ತಿ, ಯಮನವ್ವ ಪೂಜೇರಿ, ಗೌರವ್ವ ವಂಟಗೂಡಿ, ಮೀನಾಕ್ಷಿ ವಂಟಗೂಡಿ, ಹಾಲಸಿದ್ದ ವಂಟಗೂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.