ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಂಘದ 26 ಮುನಿಗಳಿಗೆ ಶಿರಗುಪ್ಪಿಯಲ್ಲಿ ಭವ್ಯ ಸ್ವಾಗತ..!

 ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಂಘದ 26 ಮುನಿಗಳಿಗೆ ಶಿರಗುಪ್ಪಿಯಲ್ಲಿ ಭವ್ಯ ಸ್ವಾಗತ..! A grand welcome to the 26 sages of Acharya Vardhamana Sagarji Muni Maharaj's Sangha in Shiraguppi..!

ಲೋಕದರ್ಶನ ವರದಿ 

ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಂಘದ 26 ಮುನಿಗಳಿಗೆ ಶಿರಗುಪ್ಪಿಯಲ್ಲಿ ಭವ್ಯ ಸ್ವಾಗತ..! 


ಕಾಗವಾಡ 27: ವಿಶ್ವದಲ್ಲಿ ಅಹಿಂಸಾ ತತ್ವಗಳನ್ನು ಸಾರುತ್ತಾ, ಜೈನ ದಿಗಂಬರ ಮುನಿಗಳ ಸಂಘದ ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಾನಿಧ್ಯದಲ್ಲಿ 26 ದಿಗಂಬರ ಮುನಿಗಳು ಶ್ರವಣಬೆಳಗೊಳದಿಂದ ಶಿರಗುಪ್ಪಿವರೆಗೆ ಸುಮಾರು 700 ಕಿ.ಮೀ.  ಪಾದಯಾತ್ರೆ ಮುಖಾಂತರ ಶುಕ್ರವಾರ ದಿ. 25 ರಂದು ಗ್ರಾಮಕ್ಕೆ ಆಗಮಿಸಿದಾಗ ಜೈನ ಸಮಾಜ ವತಿಯಿಂದ ಅದ್ದೂರಿಯಾಗಿ ಸ್ವಾಗತ ನೀಡಿ, ಬರಮಾಡಿಕೊಳ್ಳಲಾಯಿತು. ನಂತರ ಗ್ರಾಮದ ಪಾರ್ಶ್ವನಾಥ ಜೈನ ಭವನದಲ್ಲಿ 26 ದಿಗಂಬರ ಮುನಿಗಳ ವಿಶೇಷ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಈ ವೇಳೆ ಸಿದ್ಧಾಂತಸಾಗರ ಮುನಿ ಮಹಾರಾಜರು ಮಾತನಾಡಿ, ಆಚಾರ್ಯ ವರ್ಧಮಾನ ಸಾಗರಜೀ ಮುನಿ ಮಹಾರಾಜರಗೆ ಇರುವ ಆಚಾರ್ಯ ಪದವಿವನ್ನು ಮುನಿ ಸಂಘದ ಯುವ ದಿಗಂಬರ ಮುನಿಗಳಾದ ವಿದ್ಯಾಸಾಗರ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ನೀಡುವ ಪವಿತ್ರ ಕಾರ್ಯಕ್ರಮ ಫೆ.19 ಹಾಗೂ ಫೆ. 20 ರಂದು ಜರುಗಲಿದೆ. ಕಾರ್ಯಕ್ರಮದ ಸ್ಥಳ ಇನ್ನೆರಡು ದಿನಗಳಲ್ಲಿ ನಿಶ್ಚಿತಗೊಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ದೇಶದ ಅನೇಕ ಮುನಿಗಳುಮ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಉದ್ದಿಮೆಗಳು ಪಾಲ್ಗೊಳ್ಳಲಿದ್ದಾರೆ ಎಂದರು. 

ಗ್ರಾಮದ ಹಿರಿಯ ನ್ಯಾಯವಾದಿ ಅಭಯ ಅಕಿವಾಟೆ ಮಾತನಾಡಿ, ವಿದ್ಯಾಸಾಗರಜಿ ಮುನಿ ಮಹಾರಾಜರ ಆಚಾರ್ಯ ಪದವಿ ನೀಡುವ ಕಾರ್ಯಕ್ರಮ ಶಿರುಗುಪ್ಪಿ ಗ್ರಾಮದಲ್ಲಿ ನೆರವೇರಲಿ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸುತ್ತೇವೆ ಎಂದು ಭರವಸೆ ನೀಡಿದರು. ಇದೇ ವೇಳೆ ಕರ್ನಾಟಕ-ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಬೆಳಗಾವಿ, ವಿಜಯಪೂರ ಜಿಲ್ಲೆಯಿಂದ ಅನೇಕ ಶ್ರಾವಕ-ಶ್ರಾವಿಕೆಯರು ಆಗಮಿಸಿ, ಈ ಕಾರ್ಯಕ್ರಮವನ್ನು ನಮ್ಮ ಗ್ರಾಮದಲ್ಲಿ ನೆರವೇರಲಿ ಎಂಬ ಭಾವನೆಯಿಂದ ಮುನಿಗಳಿಗೆ ವಿನಂತಿಸಿದರು.  

ಈ ವೇಳೆ ಸಾಂಗಲಿಯ ಸಮಾಜದ ಮುಖಂಡ ರಾಜು ಪಾಟೀಲ, ಭಿಲವಡಿಯ ಎಸ್‌.ಆರ್‌. ಮಗದುಮ್ಮ, ಕೊಲ್ಲಾಪೂರದ ರವಿ ಪಾಟೀಲ, ಶಿರಗುಪ್ಪಿ ಜೈನ್ ಸಮಾಜದ ಅಧ್ಯಕ್ಷ ಮಹಾವೀರ ಕಾತ್ರಳೆ, ವಿಜಯ ಅಕಿವಾಟೆ, ಭಮ್ಮಣ್ಣಾ ಚೌಗುಲೆ, ಭೀಮು ಭೋಲೆ, ಬಾಬು ಕಾರದಗೆ, ಸುನಂದಾ ಕಾತ್ರಾಳ, ಸೇರಿದಂತೆ ಜೈನ ಸಮಾಜದ ಶ್ರಾವಕ-ಶ್ರಾವಿಕೆಯರು ಉಪಸ್ಥಿತರಿದ್ದರು.