ಗುರುವಿಗಾಗಿ ಶಿಷ್ಯನ ಬದುಕು ಸದಾಕಾಲ ಮೀಸಲಾಗಬೇಕು- ಡಾ. ಚೆನ್ನಮಲ್ಲಿಕಾರ್ಜುನ

ಗುರುವಿಗಾಗಿ ಶಿಷ್ಯನ ಬದುಕು ಸದಾಕಾಲ ಮೀಸಲಾಗಬೇಕು- ಡಾ. ಚೆನ್ನಮಲ್ಲಿಕಾರ್ಜುನ  A disciple's life should always be dedicated to the Guru - Dr. Chennamallikarjuna

ಗುರುವಿಗಾಗಿ ಶಿಷ್ಯನ ಬದುಕು ಸದಾಕಾಲ ಮೀಸಲಾಗಬೇಕು- ಡಾ. ಚೆನ್ನಮಲ್ಲಿಕಾರ್ಜುನ  

 ರಾಣೇಬೆನ್ನೂರ 14 : ಗುರುಗಳು ಜ್ಞಾನ ಕಲಿಸುವ ಗಣಿ. ಗುರು ಜ್ಞಾನ ಸ್ವರೂಪಿ. ಗುರು ಸ್ಮರಣೆ ದೇಶ ಕಾಲಾತೀತವಾಗಿದೆ. ಗುರುವಿಗಾಗಿ ಶಿಷ್ಯನ ಬದುಕು ಸದಾವಕಾಲ  ಮೀಸಲಾಗಬೇಕು ಅಂದಾಗ ಮಾತ್ರ ಗುರು ತನ್ನ ಸಂಪೂರ್ಣ ಜ್ಞಾನಾಶೀರ್ವಾದವನ್ನು ಕರುಣಿಸುತ್ತಾನೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ, ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಅವರು, ಮೃತ್ಯುಂಜಯ ನಗರದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ಸಭಾಭವನದಲ್ಲಿ ಆಯೋಜಿಸಿದ್ದ, ಆಶಾಡ ಮಾಸದ  295 ಜ್ಞಾನವಾಹಿನಿ  ಮಾಸಿಕ ಧರ್ಮಸಭೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  
ಗುರು ಎಲ್ಲವನ್ನು  ದಯಪಾಲಿಸುವ  ಕಾಮಧೇನು, ಕಲ್ಪವೃಕ್ಷವಿದ್ದಂತೆ.ಗುರುವಿನಿಂದ ಕಲಿತ ಜ್ಞಾನತ್ವದಿಂದ ಗುರುತ್ವ ಉಂಟಾಗಬೇಕು. ಜನಸಾಮಾನ್ಯರ ಸೇವೆಯಲ್ಲಿ ರೋಟರಿಯಂತಹ  ಸಂಸ್ಥೆಗಳು ಇನ್ನೂ ಹೆಚ್ಚು ಕಾರ್ಯತತ್ಪರವಾದಾಗ ಮಾತ್ರ ಸಮಾಜದಲ್ಲಿ ಸಮಾನತೆ, ಪ್ರೀತಿ ವಿಶ್ವಾಸ ಮತ್ತು ಬ್ರಾತತ್ವ  ಸಾಧಿಸಲು ಸಾಧ್ಯವಾಗುವುದು ಎಂದರು. ನಿವೃತ್ತ ಪ್ರಾಚಾರ್ಯ, ಸಾಹಿತಿ  ಪ್ರೊ. ಹೆಚ್ ಎ ಭಿಕ್ಷಾವರ್ತಿಮಠ ಅವರು ವಿಶೇಷ ಉಪನ್ಯಾಸ ನೀಡಿ, ಎಷ್ಟೇ ಆಧುನಿಕತೆಗೆ ಮನುಷ್ಯ ಒಗ್ಗಿಕೊಂಡರೂ ಸಹ  ಗುರುವಿನಂತಹದನ್ನು ನಿರ್ಮಾಣ ಮಾಡಲಾರ.  
ಇಂದಿನ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಯುಗದಲ್ಲಿಯೂ ಕೂಡ ಗುರುಗಳು ತಮ್ಮದೇ ಆದ ಮಹತ್ವವನ್ನು ಹೊಂದಿದ್ದಾರೆ. ಕೈಹಿಡಿದು ನಡೆಸಲು ಕಲಿತ ಗುರುವು ಬದುಕಿನ ಅವಶ್ಯಕತೆ ನೀಡುತ್ತಾನೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಇಂದು ಆಧುನಿಕ ಜಗತ್ತು ವಿಶ್ವ ಶಾಂತಿಗಾಗಿ ವಿಶ್ವಗುರು ಭಾರತದತ್ತ ನೋಡುತ್ತಿದೆ ಅದು ಭಾರತದ ಹೆಮ್ಮೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾ ಅಧಿಕಾರಿ ವಿ. ಎಸ್‌. ಹಿರೇಮಠ, ಕಾಂತೇಬೆನ್ನೂರಿನ ಮಂಜುನಾಥ್ ಕಡತಿ ಮೊದಲಾದವರನ್ನು ಶ್ರೀಗಳು ಗುರು ರಕ್ಷಣೆ ಗೌರವಿಸಿದರು.  ಶ್ರೀಮಠದ ಕಾರ್ಯದರ್ಶಿ, ನೂತನ ಅಧ್ಯಕ್ಷ ರೊ, ಕ್ಯಾಪ್ಟನ್ ಬಿ. ಜೆ. ಹಿರೇಮಠ, ಕಾರ್ಯದರ್ಶಿ ನಾರಾಯಣ ಪವಾರ, ಸುರೇಶ ಹೊನಕೇರಿ, ನಾಗರಾಜ ಕತ್ತಗಿ, ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ ,ಡಾ.ದೀಪಾಲಿ ಪುನೀತ್, ಅಮೃತ ಗೌಡ ಹಿರೇಮಠ,  ತಾ. ಕ. ಸಾ. ಪ. ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ  ಬಿದ್ದಾಡೆಪ್ಪ ಚಕ್ರಸಾಲಿ ಮತ್ತಿತರರು  ಉಪಸ್ಥಿತರಿದ್ದರು.ಪ್ರಸಾದ ವಿತರಣಾ ಸೇವೆಯನ್ನು ಪ್ರಸಾದ ವಿತರಣೆ ಸೇವೆಯನ್ನು ಲಿಂ? ಶ್ರೀಮತಿ ನೀಲಮ್ಮ ಮತ್ತು ಲಿಂ. ಭರ ಮಶೆಟ್ಟೆಪ್ಪ ಅಂಗಡಿ ಶ್ರೀಮತಿ ಶಕುಂತಲಾ ವೀರಣ್ಣ ಅಂಗಡಿ ಸ್ಮರಣೆಯಲ್ಲಿ ಕುಟುಂಬದವರು ಪ್ರಸಾದ ಸೇವೆ ಆಯೋಜಿಸಿದ್ದರು.   ಲಿಂ.  ವೇ ಮೃತ್ಯುಂಜಯ ಸ್ವಾಮಿ ಮಾಗನೂರು ಮಠ, ಲಿಂ, ಗದಿಗಯ್ಯ ನೀರಲಗಿಮಠ ಸ್ಮರಣೆಯ ಲ್ಲಿ, ಸುವರ್ಣಮ್ಮ ಮಾಗನೂರುಮಠ, ವನಿತಾ  ವೀರಲಗಿಮಠ  ಮತ್ತು ಮಕ್ಕಳು ಭಕ್ತಿ ಸೇವೆ ಸಲ್ಲಿಸಿದರು. ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ವೇದಿಕೆಯಲ್ಲಿ ವೀರಣ್ಣ  ತೊಗರ್ಸಿಮಳಿಮಠ, ಎಸ್‌. ವಿ.ಉಜ್ಜನಿಮಠ, ಉಮೇಶ್ ಗುಂಡಗಟ್ಟಿ, ಕಾರ್ಯದರ್ಶಿ ಅಮೃತ ಗೌಡ ಪಾಟೀಲ್, ಸೋಮನಾಥ ಹಿರೇಮಠ, ಮುತ್ತಣ್ಣ ಪಾಟೀಲ್, ಗಾಯಿತ್ರಮ್ಮ ಕುರುವತ್ತಿ, ಭಾಗ್ಯಮ್ಮ, ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ವಿ. ವ್ಹಿ. ಹರಪನಹಳ್ಳಿ ಸ್ವಾಗತಿಸಿ,ಕಸ್ತೂರಮ್ಮ ಪಾಟೀಲ ನಿರೂಪಿಸಿ ಹಾಲ ಸಿದ್ದಯ್ಯ ಶಾಸ್ತ್ರಿಗಳು ವಂದಿಸಿದರು.