ನಿರೋಗಿ ಮಾನಸಿಕ ಆರೋಗ್ಯಕ್ಕೆ ವ್ಯಸಮುಕ್ತ ಜೀವನವೇ ಕಾರಣ: ಡಾ. ಚಂದ್ರಶೇಖರ್ ಹಳಿಂಗಳೆ
A busy life is the key to a patient's mental health: Dr. Chandrashekhar Halingale
ಕಾಗವಾಡ, 27 ; ವ್ಯಸನ ಮತ್ತು ಮಾನಸಿಕ ಆರೋಗ್ಯದ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಕನಸಿನೊಂದಿಗೆ, ನಿರ್ಮಲ ಆಸ್ಪತ್ರೆಯನ್ನು 2009 ರಲ್ಲಿ ಸಾಂಗಲಿ ಜಿಲ್ಲೆಯ ಮಿರಜ್ ಪಟ್ಟಣದಲ್ಲಿ ಸ್ಥಾಪಿಸಿ, ಅದು ಈಗ ಲಕ್ಷಾಂತರ ಜನರಿಗೆ ನೆಮ್ಮದಿಯ ಕೇಂದ್ರವಾಗಿ ಹೊರಹೊಮ್ಮಿದೆ. ಇಂದು ಅನೇಕ ಜನರು ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳಲು ಮತ್ತು ನೆಮ್ಮದಿಯ ಜೀವನಕ್ಕೆ ಮರಳಲು ಸಹಾಯ ಮಾಡಿದ ಮನೋವೈದ್ಯ ಡಾ. ಚಂದ್ರಶೇಖರ ಹಲಿಂಗಳೆೆ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ.
ಡಾ. ಚಂದ್ರಶೇಖರ ಹಳಿಂಗಳೆ ಕೊಲ್ಹಾಪೂರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿನಗರ ಗ್ರಾಮದಿಂದ ಶಿಕ್ಷಣವನ್ನು ಪ್ರಾರಂಭಿಸಿ, ಫೆಬ್ರವರಿ 2002 ರಲ್ಲಿ ಕರಾಡನ ಕೃಷ್ಣಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕೊಲ್ಹಾಪೂರದ ಶಿವಾಜಿ ವಿಶ್ವವಿದ್ಯಾಲಯದ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಅಕೋಲಾದ ಕೇಳಕರ ಆಸ್ಪತ್ರೆಯಲ್ಲಿ ಸಹಾಯಕ ಮನೋವೈದ್ಯರಾಗಿ ಸೇವೆ ಪ್ರಾರಂಭಿಸಿದ ಅವರು, ಸಂಬಂಧಿಕರಿಲ್ಲದೆ ರೋಗಿಗಳನ್ನು ದಾಖಲಿಸುವ ಪರಿಕಲ್ಪನೆಯನ್ನು ಪರಿಚಯಿಸಿದರು. ಮಿರಜನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮನೋವೈದ್ಯಶಾಸ್ತ್ರ ವಿಭಾಗದಲ್ಲಿ ವೈದ್ಯಕೀಯ ಅಧಿಕಾರಿಯಾಗಿಯೂ ಕೆಲವು ದಿನ ಅವರು ಸೇವೆ ಸಲ್ಲಿಸಿದರು.
ವ್ಯಸನಮುಕ್ತಿ ಮತ್ತು ಆರೋಗ್ಯ ಅಮೂಲ್ಯವಾಗಿದ್ದು, ಉತ್ತಮ ಆರೋಗ್ಯಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಮುಖವಾಗಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗೆ ಸಹಾಯ ಮಾಡಲು ಸೇವೆಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ನಿರ್ಮಲ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರವನ್ನು ಪ್ರಾರಂಬಿಸಿದರು. ತಾಯಿ ನಿರ್ಮಲಾ, ತಂದೆ ಅಪ್ಪಾಸಾಹೇಬ, ಪತ್ನಿ ಸ್ತ್ರೀರೋಗ ತಜ್ಞೆ ಡಾ. ನಿಶಾ ಹಲಿಂಗೆಳೆೆ ಮತ್ತು ಇಬ್ಬರು ಹೆಣ್ಣುಮಕ್ಕಳು ಸಹಕಾರದೊಂದಿಗೆ 4 ಹಾಸಿಗೆಗಳೊಂದಿಗೆ ಪ್ರಾರಂಭಿಸಿದ ನಿರ್ಮಲ ಆಸ್ಪತ್ರೆ ಇಂದು ಸುಮಾರು 200 ಹಾಸಿಗೆಗಳ ಆಸ್ಪತ್ರೆಯಾಗಿ ಹೊರಹೊಮ್ಮಿದೆ.
ನಿರ್ಮಲ ಆಸ್ಪತ್ರೆಯ ಸುಮಾರು 90 ಉದ್ಯೋಗಿಗಳು ಮತ್ತು ವೈದ್ಯರು ತಂಡ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ವ್ಯಸನಮುಕ್ತಿ ಮತ್ತು ಮಾನಸಿಕ ಅಸ್ವಸ್ಥತೆಗಾಗಿ ಹೆಸರುವಾಸಿಯಾಗಿದೆ. ವ್ಯಸನ ಮತ್ತು ಮಾನಸಿಕ ಅಸ್ವಸ್ಥತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಡಾ. ಚಂದ್ರಶೇಖರ ಹಳಿಂಗಳೆ ಮರಾಠಿ ಮತ್ತು ಕನ್ನಡ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ರೇಡಿಯೋ, ಆಲ್‌ಇಂಡಿಯಾ ರೇಡಿಯೋ, ಎಫ್‌ಎಂ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡುತ್ತಿದ್ದಾರೆ. ಎಲ್ಲಾ ವಯಸ್ಸಿನವರಲ್ಲಿ ಬೆಳೆಯುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಒತ್ತಡ ನಿರ್ವಹಣೆ, ವ್ಯಸನಮುಕ್ತಿ ಮತ್ತು ಮಾನಸಿಕ ಅಸ್ವಸ್ಥತೆಯ ಕುರಿತು ಸಾವಿರಾರು ಉಪನ್ಯಾಸಗಳನ್ನು ನೀಡಿದ್ದಾರೆ. ಇದನ್ನು ಗುರುತಿಸಿ, 2014 ರಲ್ಲಿ ಮಹಾರಾಷ್ಟ್ರ ಸರ್ಕಾರದ ರಾಜ್ಯ ಸಚಿವ ಸಂಜಯ ಸಾವಕರೆ ಮತ್ತು ಚಲನಚಿತ್ರ ನಟ ಸಿದ್ಧಾರ್ಥ್ ಜಾಧವ ಅವರ ಸಮ್ಮುಖದಲ್ಲಿ ಮಹಾತ್ಮ ಗಾಂಧಿ ವ್ಯಸನಮುಕ್ತಿ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಅನೇಕ ಸಮ್ಮೇಳನಗಳು, ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಮೊಬೈಲ್ ಮತ್ತು ಇಂಟರನೆಟ್‌ನ ಅತಿಯಾದ ಬಳಕೆಯಿಂದಾಗಿ, ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದಾರೆ.
ಡಾ. ಚಂದ್ರಶೇಖರ ಹಳಿಂಗಳೆ ಅವರು ವೃದ್ಧರಿಗಾಗಿ ನಿರ್ಮಲ ವೃದ್ಧ ವಿಹಾರ ಮತ್ತು ಸ್ಮುತಿ ಆಧಾರ್ ಕೇಂದ್ರವನ್ನು ಪ್ರಾರಂಭಿಸಿ, ಅನೇಕ ನಿರ್ಗತಿಕ ವೃದ್ಧರಿಗೆ ಆಸರೆಯಾಗಿದ್ದಾರೆ. ಚಿಕ್ಕಮಕ್ಕಳಲ್ಲಿ ಬೆಳೆಯುತ್ತಿರುವ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಆಟಿಸಂ ಕಲಿಕಾ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ನಿರ್ಮಲ ನರ ಮನೋವೈದ್ಯಶಾಸ್ತ್ರ ಕೇಂದ್ರ, ನಿರ್ಮಲ ಫೌಂಡೇಶನ್ ಮತ್ತು ಡಾ. ಹಳಿಂಗಳೆ ಫೌಂಡೇಶನ್ ಸ್ಥಾಪಿಸಿ, ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ, ಪ್ರತಿ ಕುಟುಂಬ ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಸಾರ್ವಜನಿಕರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಮಾನಸಿಕ ಆರೋಗ್ಯ ಮತ್ತು ವ್ಯಸನಮುಕ್ತಿಯ ಕುರಿತು ಅವರಿಂದ ಮಾಹಿತಿ ಪಡೆಯಬಹುದು ಮತ್ತು ಪರಿಹಾರ ಪಡೆಯಬಹುದಾಗಿದೆ. ಮಾನಸಿಕ ಅಸ್ವಸ್ಥತೆ ಮತ್ತು ವ್ಯಸನದ ಮೂಲವನ್ನು ಕಂಡು ಹಿಡಿಯಲು ಮತ್ತು ರೋಗಿಯ ಜೀವನವನ್ನು ಆರೋಗ್ಯಕರವಾಗಿಸಲು ಸಮರ್ಿತರಾಗಿರುವ ಡಾ. ಚಂದ್ರಶೇಖರ್ ಹಳಿಂಗಳೆ ಅವರಿಗೆ ಜನ್ಮದಿನದ ಶುಭಾಶಯಗಳು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 