ಗುರುಗಳ ಮಾರ್ಗದರ್ಶನವೇ ಯಶಸ್ಸಿನ ಭದ್ರ ಬುನಾದಿ- ಡಾ. ಎಸ್‌. ಕೆ. ಹಿರೇಮಠ

ಗುರುಗಳ ಮಾರ್ಗದರ್ಶನವೇ ಯಶಸ್ಸಿನ ಭದ್ರ ಬುನಾದಿ- ಡಾ. ಎಸ್‌. ಕೆ. ಹಿರೇಮಠ A Guru's guidance is the solid foundation for success – Dr. S. K. Hiremath

ಲೋಕದರ್ಶನ ವರದಿ 

 ಚಿಕ್ಕೋಡಿ 29: ಗುರುಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಅವರ ಮಾರ್ಗದರ್ಶನವೇ ಜೀವನದ ಯಶಸ್ಸಿನ ಭದ್ರ ಬುನಾದಿಯಾಗಿದೆ ಎಂದು ಗದಗದ ಡಿಜಿಎಂ ಆಯುರ್ವೇದ ವೈದ್ಯಕೀಯ ಕಾಲೇಜು,  ನಿವೃತ್ತ ಪ್ರಾಧ್ಯಾಪಕರಾದ ಡಾ. ಎಸ್‌. ಕೆ. ಹಿರೇಮಠ ಹೇಳಿದರು. 

ನಗರದ ಕೆ.ಎಲ್‌.ಇ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಗುರುಗಳ ಮಾರ್ಗದರ್ಶನವು ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿ ಗುರು-ಶಿಷ್ಯ ಪರಂಪರೆಗೆ ವಿಶೇಷ ಮಹತ್ವವಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. 

ಅಧ್ಯಕ್ಷೀಯ ಭಾಷಣವನ್ನು ಕೆ.ಎಲ್‌.ಇ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಕಿರಣಕುಮಾರ ಮುತ್ನಾಳಿ ಮಾತನಾಡುತ್ತಾ  ಗುರುಗಳ ಮಹತ್ವ, ಶಿಕ್ಷಣದಲ್ಲಿ ಮೌಲ್ಯಗಳ ಅಳವಡಿಕೆ ಹಾಗೂ ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಮಾರ್ಗದರ್ಶನದ ಅಗತ್ಯತೆಯ ಕುರಿತು ಸ್ಫೂರ್ತಿದಾಯಕ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಗುರುಗಳಿಗೆ ಪುಷ್ಪಾರ್ಚನೆ ಹಾಗೂ ಗೌರವ ಸಮರೆ​‍್ಣ, ಗುರುಪಾದ ಪೂಜೆ ಮುಖ್ಯ ಅತಿಥಿಗಳ ಸನ್ಮಾನ, ಹಾಗೂ ವಂದನಾರೆ​‍್ಣಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 

ಕಾರ್ಯಕ್ರಮವನ್ನು ವಿದ್ಯಾರ್ಥಿ ಪ್ರೇರಣಾ ಮತ್ತು ಭಾವನಾ ನಿರೂಪಿಸಿದರು, ಪ್ರಾರ್ಥನೆಯನ್ನು ಚೈತ್ರಾ ಹಾಗೂ ಮುಖ್ಯ ಅತಿಥಿಗಳ ಪರಿಚಯವನ್ನು ವಿಶಾಲ ಮತ್ತು  ಶಶಿವಾನಿ ವಂದನಾರೆ​‍್ಣಯನ್ನು  ಮಾಡಿದರು. ಕಾರ್ಯಕ್ರಮದಲ್ಲಿ ಆಯುರ್ವೇದ ಉಪನ್ಯಾಸಕರಾದ ಡಾ. ಬಿ ಬಿ ದೇಸಾಯಿ, ಡಾ. ರೀನಾ ಹೊನವಾಡ, ಡಾ.ರವಿ ಮಡಿವಾಳರ, ಡಾ.ಸಂತೋಷ ಶಿವಣ್ಣನವರ್, ಡಾ. ಶ್ರೀಧರ ಲಕ್ಕುಂಡಿ, ಡಾ. ಸುಜಾತಾ ಮತ್ತು ಉಪನ್ಯಾಸಕರು, ವೈದ್ಯರು, ಆಡಳಿತಾಧಿಕಾರಿ, ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.