ವಸ್ತಿ ಆಂಜನೇಯಸ್ವಾಮಿ ಕಾಮಗಾರಿಗೆ 50 ಲಕ್ಷ ಅನುದಾನ : ಶಾಸಕ ಪಠಾಣ

ವಸ್ತಿ ಆಂಜನೇಯಸ್ವಾಮಿ ಕಾಮಗಾರಿಗೆ 50 ಲಕ್ಷ ಅನುದಾನ : ಶಾಸಕ ಪಠಾಣ 50 lakh grant for Vasti Anjaneyaswamy work: MLA Pathan


ಶಿಗ್ಗಾಂವಿ, ಸೆ.3: ಪಟ್ಟಣದ ವಸ್ತಿ ಆಂಜನೇಯಸ್ವಾಮಿ ದೇವಸ್ಥಾನದ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲು ?50 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಯಾಸಿರ್ಖಾನ್ ಪಠಾಣ್ ತಿಳಿಸಿದರು.  

ಪಟ್ಟಣದ ವಸ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೊಳ್ಳುವುದು ತಮ್ಮ ಕರ್ತವ್ಯವಾಗಿದೆ. ಶೀಘ್ರದಲ್ಲೇ ದೇವಸ್ಥಾನದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.  

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮನಗೌಡ ಬೇವಿನಮರದ ಮಾತನಾಡಿ, ಸ್ಥಳೀಯವಾಗಿ ಕೆಲ ವ್ಯಕ್ತಿಗಳ ಅಡ್ಡಿಯಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಅಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಳಿಸಲು ಶಾಸಕರಿಗೆ ಮನವಿ ಮಾಡಲಾಗಿದ್ದು, ಈಗಾಗಲೇ ?10 ಲಕ್ಷ ಅನುದಾನ ನೀಡಲಾಗಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಪಠಾಣ್ ಅವರು ?50 ಲಕ್ಷ ಅನುದಾನ ಘೋಷಿಸಿದ್ದಾರೆ ಎಂದು ತಿಳಿಸಿದರು.  

ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕು ಅಧ್ಯಕ್ಷ ಎಸ್‌.ಎಫ್‌. ಮಣಕಟ್ಟಿ, ಚಂದ್ರು ಕೊಡ್ಲಿವಾಡ, ಗದಿಗೆಪ್ಪ ಕೊಡ್ಲಿವಾಡ, ರಾಮು ಪೂಜಾರ, ಗೌಸ್ಖಾನ್ ಮುನಶಿ, ಶಂಭು ನೇತಾಡಿ, ಮುನ್ನಾ ಲಕ್ಷ್ಮೇಶ್ವರ, ಸಾಧಿಕ್ ಸವಣೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.