ಮೇ. 8 ರಂದು ರಾಜ್ಯ ಮಟ್ಟದ 4ನೇ ಬೃಹತ್ ರೈತ ಸಮಾವೇಶ : ದಯಾನಂದ ಕೋಳಿ

ಮೇ. 8 ರಂದು ರಾಜ್ಯ ಮಟ್ಟದ 4ನೇ ಬೃಹತ್ ರೈತ  ಸಮಾವೇಶ : ದಯಾನಂದ ಕೋಳಿ    4th state-level mega farmers' conference on May 8: Dayanand Koli

  ಚಡಚಣ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯ ಮಟ್ಟದ 4ನೇ ಬೃಹತ್  ರೈತ ಸಮಾವೇಶ ಮೇ 8 ರಂದು ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಎಲ್ಲ ರೈತರು ಸಮಾವೇಶಕ್ಕೆ ಬಂದು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಳಿ ಹೇಳಿದರು. ಬುಧವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು, ಬೃಹತ್ ರಾ​‍್ಯಲಿ ವಿಜಯಪುರ ನಗರದ  ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ದರಬಾರ ಮೈದಾನಕ್ಕೆ ತಲುಪಿ ಮೈದಾನದಲ್ಲಿ ಬೃಹತ್ ಸಮಾವೇಶವಾಗಿ ಏರ​‍್ಡಲಿದೆ.  

  ಸಮಾವೇಶದಲ್ಲಿ ಆಲಮಟ್ಟಿ ಜಲಾಶಯವನ್ನು 519ಮೀ.ನಿಂದ 524.256 ಮೀಟರಗೆ ಎತ್ತರಿಸಲು ಆಗ್ರಹಿಸಿ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಅದೇ ರೀತಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದ ಅವರು, ಸಮಾವೇಶದಲ್ಲಿ ಕೃಷಿಗೆ ಸಂಬಂಧಿಸಿದ ವಿಜ್ಞಾನಿಗಳು, ರೈತ ಪರ ಚಿಂತಕರು, ರೈತ ಮುಖಂಡರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿ ರೈತರ ಕುರಿತು ಹಲವಾರು ವಿಷಯಗಳ ಕುರಿತು ವಿಷಯ ಮಂಡನೆ ಮಾಡುವರು.    

  ಸಮಾವೇಶಕ್ಕೆ ಮುಗಳಖೋಡ ಜಿಡಗಾ ಮಠದ ಡಾ. ಮುರುಗೇಂದ್ರ ಸ್ವಾಮೀಜಿಗಳು ಸೇರಿದಂತೆ ಇನ್ನಿತರ ಮಠಾಧೀಶರು ಕೂಡ ಆಗಮಿಸುತ್ತಿದ್ದು, ರೈತ ಸಂಘದ ರಾಜ್ಯ ಅಧ್ಯಕ್ಷ ಚುನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.  

  ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಉಪಾಧ್ಯಕ್ಷ ಕಲ್ಲು ಸೊನ್ನ, ಶಾಂತಗೌಡ ಪಾಟೀಲ (ನಡಹಳ್ಳಿ),  ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ಚಡಚಣ ತಾಲೂಕಾಧ್ಯಕ್ಷ ವಸಂತ ಬೈರಾಮಡಿ, ತಾಲೂಕಾ ಉಪಾಧ್ಯಕ್ಷ ಘೇನಪ್ಪ ಬಿರಾದಾರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ, ತಾಲೂಕುಗಳಿಂದ ಹಾಗೂ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಿದ್ದು, ಚಡಚಣ ತಾಲೂಕಿನ ಎಲ್ಲ ರೈತರು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಲು ಅವರು ಮನವಿ ಮಾಡಿದರು.  

  ಸಮಾವೇಶದಲ್ಲಿ ಪ್ರಗತಿಪರ ರೈತರ ನೇಗಿಲು ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅವರು ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾದೇವ ಬನಸೋಡೆ, ಚಡಚಣ ತಾಲೂಕಾಧ್ಯಕ್ಷ ವಸಂತ ಬೈರಾಮಡಿ, ತಾಲೂಕಾ ಉಪಾಧ್ಯಕ್ಷ ಘೇನಪ್ಪ ಬಿರಾದಾರ, ಗ್ರಾಮ ಘಟಕ ಅಧ್ಯಕ್ಷ ಉಜ್ವಲ ಡೊಳ್ಳಿ, ಸೇರಿದಂತೆ ಮತ್ತಿತರ ರೈತರು ಇದ್ದರು.