45 ನೇ ರೈತ ಹುತಾತ್ಮ ದಿನಾಚರಣೆ
45th Farmers' Martyrs' Day- Yaragatti news
ಯರಗಟ್ಟಿ 21: 45 ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ಪಟ್ಟಣದ ರೈತ ಹುತಾತ್ಮ ಭಾವಚಿತ್ರಕ್ಕೆ ಶಾಸಕ ವಿಶ್ವಾಸ ವೈದ್ಯ, ರೈತ ಮುಖಂಡರು ಪರಿಸರವಾದಿಗಳು ಸೇರಿದಂತೆ ವಿವಿಧ ರೈತ ಮುಖಂಡರು ಗೌರವ ನಮನ ಸಲ್ಲಿಸಿದರು.ಪ್ರವಾಸಿ ಮಂದಿರದಿಂದ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ರೈತರ ಮೆರವಣಿಗೆ ನಡೆಯಿತು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು ಲಿಪ್ಟ್ ಇರಗೇಶನ್ ಪಂಪ್ಸೆಟ್ ಗಳನ್ನು ನವಿಕರಿಸಲು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದೆನೆ ಹಾಗೂ ಬರುವ ದಿನಗಳಲ್ಲಿ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಮತ್ತು ಶೀಘ್ರದಲ್ಲೇ ಯರಗಟ್ಟಿಗೆ ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಕೆಎ???ಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ಮುನವಳ್ಳಿ ಪುರಸಭೆ ಅಧ್ಯಕ್ಷ ಸಿ. ಬಿ. ಬಾಳಿ, ಶಿವಾನಂದ ಕರಿಗೋಣ್ಣವರ, ಬಾಸ್ಕರ ಹಿರೇಮೆತ್ರಿ, ವಿಠ್ಠಲಗೌಡ ದೇವರಡ್ಡಿ,ಚಾಯಪ್ಪ ಹುಂಡೇಕಾರ ರೈತ ಸಂಘದ ಅಧ್ಯಕ್ಷ ಸೋಮು ರೈನಾಪೂರ, ಯಕ್ಕೇರೆಪ್ಪ ತಳವಾರ,ರಂಗಪ್ಪ ಗಂಗರಡ್ಡಿ, ದಲಿತ ಮುಖಂಡರಾದ ಚಿದಂಬರ ಕಟ್ಟಿಮನಿ, ಯಮನಪ್ಪ ಮಾಳಗಿ, ರೈತರಾದ ಶೇಖರ ಕಿಲಾರಿ, ಯಕ್ಕೇರೆಪ್ಪ ಮಾಳಗಿ, ಕಾಶೀಮಸಾಬ ಜಮಾದಾರ, ಮುಂತಾದವರು ಪಾಲ್ಗೊಂಡಿದ್ದರು21 ಯರಗಟ್ಟಿ
ಪೋಟೋ ಶೀರ್ಷಿಕೆ:ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು ಈ ವೇಳೆ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 