ಸದು್ಗುರು ಶರಣಾನಂದರ 32ನೇ ಪುಣ್ಯಾರಾಧನೆ: ಸನ್ಮಾರ್ಗದ ಬದುಕಿಗೆ ಸದು್ಗುರುಗಳ ಸಂದೇಶ ಪ್ರೇರಣೆ
32nd Punyaradhana of Sadguru Sharanananda: Sadguru's Message Inspires a Righteous Life
ಲೋಕದರ್ಶನ ವರದಿ
ಗದಗ, ಸೆ.3: ಆಧ್ಯಾತ್ಮಿಕ ಸಾಧನೆ, ಸಮಾಜಮುಖಿ ಸೇವೆ ಹಾಗೂ ಮಾನವೀಯ ಮೌಲ್ಯಗಳ ಬೋಧನೆಯ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಸದು್ಗುರು ಶರಣಾನಂದರು ಆದರ್ಶ ಸಂತರು ಎಂದು ಗದಗ-ಬೆಟಗೇರಿ ಮುಕ್ಕಣ್ಣೇಶ್ವರ ಮಠದ ಪೀಠಾಧಿಪತಿ ಶಂಕರಾನಂದ ಸ್ವಾಮೀಜಿ ಹೇಳಿದರು.
ಗದಗ-ಬೆಟಗೇರಿಯ ಮುಕ್ಕಣ್ಣೇಶ್ವರ ಮಠದಲ್ಲಿ ಮಂಗಳವಾರ ನಡೆದ ಸದು್ಗುರು ಶರಣಾನಂದ ಸ್ವಾಮೀಜಿಯವರ 32ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜದಲ್ಲಿ ಶಾಂತಿ, ಸಮಾನತೆ ಹಾಗೂ ಕಾಯಕನಿಷ್ಠೆಗೆ ಒತ್ತು ನೀಡಿದ ಶರಣಾನಂದರು ಮಹಾನ್ ತಪಸ್ವಿಗಳಾಗಿದ್ದರು. ಇಂದಿನ ಒತ್ತಡದ ಬದುಕಿನಲ್ಲಿ ನೈತಿಕತೆ ಮತ್ತು ಶಾಂತಿ ನೆಲೆಸಬೇಕಾದರೆ ಸದು್ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ತೋರಿದ ತ್ಯಾಗ ಮತ್ತು ಕರುಣೆಯ ಹಾದಿ ಸದಾ ಪ್ರಸ್ತುತವಾಗಿದ್ದು, ಯುವಪೀಳಿಗೆಗೆ ಅವರ ಬೋಧನೆಗಳು ದಾರೀದೀಪವಾಗಿವೆ ಎಂದು ಹೇಳಿದರು.
ಮುಳಗುಂದದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಮಾತನಾಡಿ, ಶ್ರಾವಣ ಮಾಸದಲ್ಲಿ ಕೇಳುವ ಉತ್ತಮ ವಿಚಾರಗಳನ್ನು ಮನನ ಮಾಡಿಕೊಂಡು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದು್ಗುರುಗಳು ನೀಡಿದ ‘ಒಂದು ದಾರಿ ಹಲವಾರು’ ಎಂಬ ಸಂದೇಶ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಮುಕ್ಕಣ್ಣಜ್ಜನವರು ಅಸಾಮಾನ್ಯ ಸಾಧಕರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಶಂಕರ ಹಾನಗಲ್ ಮಾತನಾಡಿ, ಗದಗದ ಕರಿಯಮ್ಮ ದೇವಿ ಬಡಾವಣೆಯಲ್ಲಿರುವ ಮುಕ್ಕಣ್ಣೇಶ್ವರ ಮಠ ಧಾರ್ಮಿಕ ಕ್ಷೇತ್ರವಾಗಿದ್ದು, ಅದರ ಜೀರ್ಣೋದ್ಧಾರದ ಕುರಿತು ವಿವರಿಸಿದರು. ಮಠದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮಹಾದ್ವಾರದ ನಿರ್ಮಾಣದ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಪುಣ್ಯಾರಾಧನೆ ಕಾರ್ಯಕ್ರಮವು ವಿವಿಧ ಉಪನ್ಯಾಸಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ಸಂತ ರಾಮಕೃಷ್ಣ ಕಲ್ಯಾಣಿ ಅವರ ನೇತೃತ್ವದಲ್ಲಿ ಜ್ಞಾನೇಶ್ವರಿ ಪಾರಾಯಣ ಭಕ್ತಿಭಾವದಿಂದ ಜರುಗಿತು.
ನಗರಸಭೆ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್, ರಾಮಕೃಷ್ಣ ಕಲ್ಯಾಣಿ, ನೀಲಕಂಠಪ್ಪ ಬುಟ್ಟಾ, ಮಲ್ಲೇಶಪ್ಪ ಅಣ್ಣಿಗೇರಿ, ವಿಜಯಕುಮಾರ ಚೋಳಿನ, ಐಶ್ವರ್ಯ ಹೂಲಿ, ಶಿವಶಂಕರ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 