ಕಾಂಗ್ರೆಸ್‌ನ ಜನಸಂಪರ್ಕ ಕಚೇರಿಯಲ್ಲಿ 2026 ಕ್ಯಾಲೆಂಡರ್ ಬಿಡುಗಡೆ
2026 calendar released at Congress's public relations office
ಲೋಕದರ್ಶನ ವರದಿ
ಕಾಂಗ್ರೆಸ್‌ನ ಜನಸಂಪರ್ಕ ಕಚೇರಿಯಲ್ಲಿ 2026 ಕ್ಯಾಲೆಂಡರ್ ಬಿಡುಗಡೆ
ಹಾನಗಲ್ 11 :ಶಾಸಕ ಶ್ರೀನಿವಾಸ ಮಾನೆ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ 2026 ರ ಹೊಸ ವರ್ಷದ ವರ್ಣರಂಜಿತ ಕ್ಯಾಲೆಂಡರ್‌ನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆಗೊಳಿಸಿದರು.
ಕ್ಯಾಲೆಂಡರ್ ಎಂದರೆ ದಿನಾಂಕಗಳ ಪಟ್ಟಿ ಮಾತ್ರವಲ್ಲ, ಒಂದು ವರ್ಷದ ಸಂಕಲ್ಪ, ಸಂಸ್ಕೃತಿ ಮತ್ತು ಸಮುದಾಯದ ಮೌಲ್ಯಗಳ ಪ್ರತಿಬಿಂಬವೂ ಹೌದು. ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ, ಪಂಚಾಂಗವನ್ನೊಳಗೊಂಡ ಈ ಕ್ಯಾಲೆಂಡರ್ ಎಲ್ಲರಿಗೂ ಮಾರ್ಗದರ್ಶಕವಾಗಲಿ. ಹೊಸ ವರ್ಷ ಹರ್ಷ ತರಲಿ ಎಂದು ಶುಭ ಹಾರೈಸಿದ ಶಾಸಕ ಮಾನೆ, ಈ ಬಾರಿ ಕ್ಯಾಲೆಂಡರ್‌ನಲ್ಲಿ ಸ್ಥಳೀಯ ಹಬ್ಬ, ಹರಿದಿನಗಳು, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಮಾಹಿತಿ, ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳ ಚಿತ್ರಣ ಹಾಗೂ ಸಾರ್ವಜನಿಕ ಸೇವಾ ಚಟುವಟಿಕೆಗಳ ಸಂಪೂರ್ಣ ವಿವರಣೆ ನೀಡಲಾಗಿದೆ. ತಾಲೂಕಿನ 65 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಕ್ಯಾಲೆಂಡರ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಕೆಎಂಎಫ್ ನಿರ್ದೇಶಕ ಚಂದ್ರ್ಪ ಜಾಲಗಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಭರಮಣ್ಣ ಶಿವೂರ, ಆದರ್ಶ ಶೆಟ್ಟಿ, ಅಶೋಕ ಹಲಸೂರ, ಯಲ್ಲಪ್ಪ ಕಲ್ಲೇರ, ಉಮೇಶ ಮಾಳಗಿ, ಸುರೇಶ ನಾಗಣ್ಣನವರ, ಸಂತೋಷ ಹೋತನಹಳ್ಳಿ, ಇನಾಯತ್ ಪಠಾಣ, ಪ್ರಕಾಶ ಬಾಗಣ್ಣನವರ, ಮಂಗಳಾ ಬೆಣ್ಣಿ, ಪುಟ್ಟಕ್ಕ ತಳವಾರ, ಪ್ರೇಮಾ ಹರಿಜನ, ಅನಂತಗೌಡ ಪಾಟೀಲ, ಸುರೇಶ ಕರೆಪ್ಪನವರ, ಷಣ್ಮುಖಪ್ಪ ಭೈರಕ್ಕನವರ ಸೇರಿದಂತೆ ಇನ್ನಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 