ವಿಶೇಷ ಲೋಕ ಅದಾಲತ್‌ನಲ್ಲಿ 166 ಪ್ರಕರಣಗಳ ಇತ್ಯರ್ಥ- ರೂ.3.04 ಕೋಟಿ ರಾಜಿ

ವಿಶೇಷ ಲೋಕ ಅದಾಲತ್‌ನಲ್ಲಿ 166 ಪ್ರಕರಣಗಳ ಇತ್ಯರ್ಥ- ರೂ.3.04 ಕೋಟಿ ರಾಜಿ 166 cases settled at special Lok Adalat – Rs 3.04 crore settlement.

ಲೋಕದರ್ಶನ ವರದಿ 

          ಹಾವೇರಿ ಜು.20 :   ಹಾವೇರಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ಜರುಗಿದ ವಿಶೇಷ ಲೋಕ ಅದಾಲತ್‌ನಲ್ಲಿ, ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಲಾದ ಒಟ್ಟು 1255 ಪ್ರಕರಣಗಳ ಪೈಕಿ 166 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ರೂ.3,04,78,030ಗಳ ಮೊತ್ತದ ರಾಜಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರಾ​‍್ಪ ಎನ್‌. ಅವರು ತಿಳಿಸಿದ್ದಾರೆ. 

  ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಲ್ಲಿ ಗುರುತಿಸಲಾದ ಒಟ್ಟು 937 ಪ್ರಕರಣಗಳಲ್ಲಿ 142 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 2,66,06,030/- ಮೊತ್ತದ ರಾಜಿಯಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ ಒಟ್ಟು 318 ಪ್ರಕರಣಗಳಲ್ಲಿ 24 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 38,72,000 /-ಗಳ ಮೊಟ್ಟದ ರಾಜಿಯಾಗಿದೆ. 

ಈ ವಿಶೇಷ ಲೋಕ ಅದಾಲತ್‌ನಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಎಲ್ಲಾ ಸದಸ್ಯರುಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಾ ನ್ಯಾಯವಾದಿಗಳ ಸಂಘದ ಎಲ್ಲಾ ಸದಸ್ಯರುಗಳು, ಹಾವೇರಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ಅಭಿಯೋಜನೆ ಇಲಾಖೆ, ಆರಕ್ಷಕ ಇಲಾಖೆಯವರು, ಇತರೇ ಇಲಾಖೆಯವರುಗಳ ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ವಿಶೇಷ ಲೋಕ ಅದಾಲತ್ ತುಂಬಾ ಯಶಸ್ವಿಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ  ಶ್ರೀಮತಿ ಶ್ರೀಶೈಲಜಾ ಹೆಚ್‌.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.