ಲೋಕದರ್ಶನ ವರದಿ
ಬೈಲಹೊಂಗಲ 27: ರೈತರು ತಮ್ಮ ಕುಟುಂಬವನ್ನು ಆಥರ್ಿಕವಾಗಿ ಅಭಿವೃದ್ಧಿ ಮಾಡಿಕೊಳ್ಳಲು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ತಮ್ಮ ಉಪಕಸುಬನ್ನಾಗಿಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿದರ್ೇಶಕ ಬಿ.ಬಿ.ಕಟ್ಟಿ ಹೇಳಿದರು.
ಅವರು ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಸಹಕಾರ ಇಲಾಖೆ, ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಬೈಲಹೊಂಗಲ ಉಪವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿವರ್ಾಹಕರುಗಳಿಗೆ ನಡೆದ ಒಂದು ದಿನದ ವಿಶೇಷ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಕರ್ಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಹೈನುಗಾರಿಕೆಯಲ್ಲಿನ ವೈಜ್ಞಾನಿಕ ಪದ್ದತಿಗಳ ಮೂಲಕ ಹೆಚ್ಚೆಚ್ಚು ಹಾಲು ಉತ್ಪಾದನೆಗೆ ಒತ್ತು ನೀಡಬೇಕು. ಸಹಕಾರ ಕ್ಷೇತ್ರದಲ್ಲಿ ರಾಜಕಿಯ ಹಸ್ತ ಕ್ಷೇಪ ಆಗಬಾರದೆಂದು ಅಭಿಪ್ರಾಯ ಪಟ್ಟರು.
ಹಾಲು ಒಕ್ಕೂಟ ನಿದರ್ೇಶಕ ಬಿ.ಎಂ.ಪರವಣ್ಣವರ ಮಾತನಾಡಿ, ಯೂನಿಯನ್ನಿನಿಂದ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಅದನ್ನು ಸಂಘದಲ್ಲಿ ಅಳವಡಿಸಿದಾಗ ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘಗಳು ಆಥರ್ಿಕವಾಗಿ ಸಧೃಡವಾಗಬಲ್ಲರು. ಪ್ರತಿಯೊಬ್ಬ ಕಾರ್ಯದಶರ್ಿ ದಿನನಿತ್ಯದ ಕೆಲಸದಲ್ಲಿ ಹಾಲು ಉತ್ಪಾದಕರ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡು ಸಂಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಸಂಘಗಳ ಮುಖ್ಯಕಾರ್ಯನಿವರ್ಾಹಕರ ಪಾತ್ರ ಪ್ರಮುಖವಾಗಿದೆ ಎಂದರು.
ನಿದರ್ೇಶಕರಾದ ಐ.ಬಿ.ಇಂಗಳಗಿ, ಮಲ್ಲನಗೌಡ ಗೌಡತಿ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಬಸಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಉಪ ವ್ಯವಸ್ಥಾಪಕ ವಿ.ಕೆ.ಜೋಷಿ, ನಿರಿಕ್ಷಕ ಶಂಕರ ಕರಿಬಸಣ್ಣವರ, ಉಪಾಧಕ್ಷ ಬಸವಂತರಾಯ ಉಳ್ಳೇಗಡ್ಡಿ, ಸಹಕಾರ ಸಂಘಗಳ ಸಹಾಯಕ ನಿದರ್ೇಶಕರಾದ ಎಸ್.ಐ.ಕೊಪ್ಪಳ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಜೆ.ಆರ್.ಮಣ್ಣೇರಿ, ವೇದಿಕೆಯಲ್ಲಿ ಇದ್ದರು. ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾದಿ ಎಸ್.ವಿ.ಹಿರೇಮಠ ಸ್ವಾಗತಿಸಿದರು. ಜಿಲ್ಲಾ ಸಹಕಾರ ಶಿಕ್ಷಕ ಎಸ್.ಎಚ್.ಗೊಲ್ಲರ ನಿರೂಪಿಸಿದರು. ಬೈಲಹೊಂಗಲ, ಚನ್ನಮ್ಮನ ಕಿತ್ತೂರ, ಸವದತ್ತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಹಷರ್ಾ ಪಾಟೀಲ, ರಾಜು ಪಾಟೀಲ, ಡಾ.ಪ್ರವೀಣ ಪೂಜೇರಿ ಇದ್ದರು.