ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಸಾಧನೆಗೆ ಅವಕಾಶ ಅಗತ್ಯ; ಕಾಂಬಳೆ

 ಚಿಕ್ಕೋಡಿ 09: ಮಹಿಳೆಯರ ಅಬಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದರ ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ತಾಲೂಕ ಪಂಚಾಯತ ಐಇಸಿ ಸಂಯೋಜಕ ರಂಜೀತ ಕಾಂಬಳೆ ಹೇಳಿದರು.

 ತಾಲೂಕಿನ ಮುಗಳಿ ಗ್ರಾಮದಲ್ಲಿ ಶನಿವಾರ ಕ್ರಾಸ್ ಹಾಗೂ ಬಿಡಿಎಸ್ ಎಸ್ ಸಂಸ್ಥೆ ಮತ್ತು ಜಾಗೃತಿ ಮಹಿಳಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸರಕಾರ ಸಾಕಷ್ಟು ಕಠಿಣ ಕಾನೂನುಗಳನ್ನು ರೂಪಿಸಿದೆ. ಆದರೂ ಸಹ ಅವರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ನಡೆಯುತ್ತಿರುವದು ವಿಷಾದದ ಸಂಗತಿ ಎಂದರು. ಮಹಿಳೆಯರಿಗೆ ಸರಿಯಾದ ಅವಕಾಶ ನೀಡಿದರೆ ಅವರು ತಮಲ್ಲಿನ ಪ್ರತಿಭೆಯನ್ನು ಗುರುತಿಸಿಕೊಂಡು ಸಾಧನೆ ಮಾಡಲು ಸಹಕಾರಿಯಾಗುತ್ತಿದೆ ಎಂದರು.

ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಸರಕಾರಿ ನೌಕರಿಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡದೆ ಅವರಲ್ಲಿನ ಸೃಜನಶಿಲ ಸದುಪಯೋಗಪಡಿಸಿಕೊಂಡು ತಾವೆ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ  ಇತರರಿಗೆ ಮಾದರಿಯಾಗುವಂತೆ ಅವರು ಕರೆ ನೀಡಿದರು.

ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ಮಹಿಳೆಯರಿಗೆ ಸರಕಾರ ಸಹ ತಮ್ಮ ಊರಿನಲ್ಲೆ ನರೇಗಾದಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ. ಇದರ ಸದುಪಯೋಗ ಪಡಿಸಿಕೊಂಡು ಕುಟಂಬದ  ಆಥರ್ಿಕ ಭದ್ರತೆಯನ್ನು ಸುಧಾರಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಬಿಡಿಎಸ್ ಎಸ್ ಸಂಸ್ಥೆ ಸಂಯೋಜಕಿ ಸಿಸ್ಟರ್ ಮೇರಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 268ಕಿಂತ ಹೆಚ್ಚು ಸಂಘಗಳು ಇವೆ. ಅದರಲ್ಲಿ 16 ಮಹಾಸಂಘಗಳಿವೆ. ಅದರಲ್ಲಿ ಮಹಾ ಒಕ್ಕೂಟ ರಚಿಸುವ ಮೂಲಕ ಮಹಿಳೆಯರಿಗೆ ವಿವಿಧ ಇಲಾಖೆಯಿಂದ ತರಬೇತಿ ನೀಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಪ್ರತಿಯೊಬ್ಬ ಮಹಿಳೆಯರು ನಮ್ಮ ಸಂಸ್ಥೆ ನಡೆಸುವ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆಥರ್ಿಕ ಜೀವನಮಟ್ಟ ಸುಧಾರಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಪ್ರತಿವೊಂದು ರಂಗದಲ್ಲಿ ಪುರಷನಷ್ಟೆ ಸಾಧನೆ ಮಾಡುವ ಮೂಲಕ ತಾನು ಯಾವುದರಲ್ಲಿ ಕಡಿಮೆಯಿಲ್ಲ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ. ಮಹಳೆಯರಿಗೆ ಕನಿಕರ ತೋರಿಸುವ ಬದಲು ಅವರಿಗೆ ಸರಿಯಾದ ಅವಕಾಶ ನೀಡಿದರೆ ಅವರು ಆಥರ್ಿಕವಾಗಿ ಸ್ವಾವಲಂಬನೆ ಬದಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನದ ರುದ್ರಮ್ಮ, ಆಶಾ ಜ್ಯೋತಿ ಸಲಹಾ ಕೇಂದ್ರ ಬಸಮ್ಮ, ಮಾಸ್ ಸಂಸ್ಥೆಯ ರೇಖಾ, ಶೋಭಾ, ರಾಜೇಂದ್ರ, ಸುನೀಲ, ಇತರರು ಉಪಸ್ಥಿತರಿದ್ದರು.

ರೇಖಾ ಮುಗಳಿ ನಿರೂಪಿಸಿದರು. ದ್ರಾಕ್ಷಾಯಣಿ ಮಡಿವಾಳ ಸ್ವಾಗತಿಸಿದರು. ಅನೀತ ವಾಡೇಕರ ವಂದಿಸಿದರು.