ಮಹಿಳಾ ಸ್ವಸಹಾಯ ಸಂಘ(ರಿ) ವತಿಯಿಂದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮ
World Environment Day celebration program by Women's Self-Help Association (R)
ಮಹಿಳಾ ಸ್ವಸಹಾಯ ಸಂಘ(ರಿ) ವತಿಯಿಂದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮ
ಹಾವೇರಿ 06 :ಉತ್ತಮ ಪರಿಸರಕ್ಕಾಗಿ ಸಂಘದ ಪ್ರತಿಯೊಬ್ಬರು ಮನೆಗೊಂದು ಮರ ಎಂಬಂತೆ ಸಸಿ ನೆಡೋಣ ಎಂದು ಛತ್ರಪತಿ ಶಿವಾಜಿ ಮಹಿಳಾ ಸ್ವ-ಸಹಾಯ ಸಂಘ(ರಿ)ದ ಅಧ್ಯಕ್ಷರಾದ ಶಶಿರೇಖಾ ರಮೇಶ ಮುಂಜೋಜಿ ಹೇಳಿದರು.
ಇಲ್ಲಿನ ಮಂಜುನಾಥ ನಗರದಲ್ಲಿನ ಸಂಘದ ಸದಸ್ಯರಾದ ಶ್ರೀಮತಿ ಸಂಜನಾ ಮೋರೆ ಅವರ ಮನೆಯಲ್ಲಿ ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘ(ರಿ)ಹಾವೇರಿ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಾತಾವರಣದಲ್ಲಿ ತಾಪಮಾನ ಏರುಪೇರು ಆಗುತ್ತಿರುವ ಸನ್ನಿವೇಶ ನಾವೆಲ್ಲರೂ ನೋಡುತ್ತಿದ್ದೇವೆ.ಪರಿಸರ ಸಮತೋಲನ ಕಾಪಾಡುವ ಕೆಲಸ ಮಾಡಬೇಕಿದೆ.ಅದಕ್ಕಾಗಿ ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಜೂನ್ ತಿಂಗಳ ವಿಶ್ವ ಪರಿಸರ ದಿನ ಆಚರಣೆ ಮಾಡುತ್ತಿದ್ದು,ನಮ್ಮ ಸಂಘದ ಪ್ರತಿಯೊಬ್ಬರು ಪರಿಸರ ಕಾಳಜಿಗಾಗಿ ಮನೆಗೊಂದು ಮರ ಬೆಳೆಸುವ ಪ್ರಯತ್ನ ಮಾಡುವ ಸಂಕಲ್ಪ ಮಾಡಿದ್ದೇವೆ.ಸಂಘದಿಂದ ಪರಿಸರ ಸಂರಕ್ಷಣೆ ಮಾಡಲು ಎಲ್ಲರ ಸಹಕಾರ ನೀಡೋಣ ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಅಶ್ವಿನಿ ಬೋಸ್ಲೆ, ಗಾಯತ್ರಿ ಜಾಧವ, ಅನಿತಾ ಜಾಧವ, ಸುಧಾಬಾಯಿ ತಿಳವಳ್ಳಿ, ಯಲ್ಲಮ್ಮ ತಿಳವಳ್ಳಿ,ಶ್ರೀಮತಿ ರೇಣುಕಾ ಸಾವಂತ, ಸುಧಾ ಕಲಾಟೆ ಸುನಿತಾ ಮೋರೆ,ಶ್ರೀಮತಿ ಸಂಜನಾ ಮೋರೆ, ಕೀರ್ತಿ ತಿಳವಳ್ಳಿ, ಸುಮಿತ್ರಾ ಬೋಸ್ಲೆ ಹಾಗೂ ಶ್ರೀಮತಿ ಗೀತಾಬಾಯಿ ಜೋಡಿಗೆ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 