ಮಹಿಳಾ ದಿನಾಚಾರಣೆ: ಸರ್ಕಾರ ಕಲಾವಿದರ ನೆರವಿಗೆ ಬರಬೇಕು
Women's Day: Government should come to the aid of artists
ಮಹಿಳಾ ದಿನಾಚಾರಣೆ: ಸರ್ಕಾರ ಕಲಾವಿದರ ನೆರವಿಗೆ ಬರಬೇಕು
ಹಾವೇರಿ 08: ಗೆಳೆಯರ ಬಳಗ ಜೆ.ಎಚ್.ಪಟೇಲ ಸರ್ಕಲ್ ಹಾವೇರಿಯಲ್ಲಿ ಜಿಲ್ಲಾ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ ಇಲ್ಲಿ ಜಿಲ್ಲಾ ಕಲಾವಿದರ 8ನೇ ವಾರ್ಷಿಕೋತ್ಸವ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆ ಉದ್ಘಾಟಿಸಿ ಡಾ. ಗುಹೇಶ್ವರ ಪಾಟೀಲ, ಆಯುರ್ವೇಧ, ಮಧುಮೇಹತಜ್ಞರು ಮಾತನಾಡುತ್ತಾ ನಮ್ಮ ಜಿಲ್ಲೆಯಾಧ್ಯಾಂತ ಅನೇಕ ಬಡ ಕಲಾವಿದರಿದ್ದು, ಅವರ ಯೋಗಕ್ಷೇಮದ ವಿಚಾರವನ್ನು ಯಾವವೊಬ್ಬ ಜನಪ್ರತಿ ನಿಧಿಯೂ ಮಾಡುತ್ತಿಲ್ಲ, ಅನೇಕ ಕಲಾವಿಧರ ಬದುಕು ತೊಂದರೆಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ, ಸರ್ಕಾರ ಅಂತಹವರ ನೆರವಿಗೆ ಧಾವಿಸಬೇಕೆಂದು ಅಭಿಪ್ರಾಯಪಟ್ಟರು.
ಕಲಾವಿದರಾದ ವೀರಭದ್ರಗೌಡ ಹೊಮ್ಮರಡಿಯವರು ತಿಂಗಳು ಅಲ್ಪ ಮಾಶಾಸನ ಸಕಾಲಕ್ಕೆ ಕಲಾವಿದರಿಗೆ ದೊರೆಯುವ ವ್ಯವಸ್ಥೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಅಧ್ಯಕ್ಷತೆಯನ್ನು ಡಾ. ತಿಪ್ಪೇಸ್ವಾಮಿ ಹೊಸಮನಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಬಡಿವೆಪ್ಪ ಆನವಟ್ಟಿ, ವಿರೇಶ ಶಂಕಿನಮಠ, ಬಸವರಾಜ ಸಾವಕ್ಕಳವರ, ಚೌಡಪ್ಪ ಮಾದರ, ಇನ್ನೂ ಮುಂತಾದವರು ಇದ್ದರು. ಸ್ವಾಗತವನ್ನುಡಾ. ಕರಬಸಪ್ಪ ಪೂಜಾರ, ವಂದನಾರೆ್ಣಯನ್ನು ಬಸವರಾಜ ಹರಿಹರ ನಡೆಸಿಕೊಟ್ಟರು. ಅನೇಕ ಕಲಾವಿದರು ಭಾಗವಹಿಸಿದರು. ನಂತರ ಜಾನಪದ ಸಂಗೀತವನ್ನು ಶಿವಾಜಿ ಬಾರ್ಕಿತಂಡದವರು ಹಾಗೂ ಗೌಡ್ರಗದ್ದಲ ನಾಟಕವನ್ನು ಚನ್ನಬಸಪ್ಪ ಯಲದಳ್ಳಿ ಸಾ. ಬೆನಕನ ಕೊಂಡ ತಂಡದವರು ಮನೋಜ್ಞವಾಗಿ ಅಭಿನಯಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 