ಗಂಡನ ಸಾವಿನ ಸುದ್ದಿ ತಿಳಿದ ಹೆಂಡತಿಯ ಸಾವು: ಸಾವಿನಲ್ಲೂ ಒಂದಾದ ಹಿರಿಯ ದಂಪತಿ
Wife dies after hearing news of husband's death
ಸಂಬರಗಿ 18: ಸಾವಿನಲ್ಲೂ ಒಂದಾದ ಹಿರಿಯ ದಂಪತಿ. ಅಜುರೆ ಗ್ರಾಮದ ಯಲಗೊಂಡ ರಾಮಚಂದ್ರ ಸಾನೆ (67) ಮತ್ತು ಅವರ ಪತ್ನಿ ಮಹಾದೇವಿ ಯಲಗೊಂಡ ಸಾನೆ (57) ಇಬ್ಬರೂ ಒಂದೇ ಸಮಯದಲ್ಲಿ ನಿಧನ ಹೊಂದಿದ್ದಾರೆ ಮತ್ತು ಒಂದೇ ಚಿತೆಯ ಮೇಲೆ ಅಂತ್ಯಕ್ರಿಯೆ ಮಾಡಲಾಯಿತು.
ಈ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಗ್ರಾಮದಲ್ಲಿ ಪತಿ ಮತ್ತು ಪತ್ನಿ ಒಂದೇ ದಿನ ಸಾವನ್ನಪ್ಪಿದ ಮೊದಲ ಘಟನೆ ಇದು.ಕೊಲ್ಹಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲಗೊಂಡ ರಾಮಚಂದ್ರ ಸಾನೆ ತಮ್ಮ ಮಗನ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಅವರು ಆಕಸ್ಮಿಕ ನಿಧನರಾದರು. ಶವವನ್ನು ಅಂತ್ಯಕ್ರಿಯೆಗಾಗಿ ತಮ್ಮ ಸ್ಥಳೀಯ ಗ್ರಾಮವಾದ ಅಜುರೆ ರುದ್ರ ಭೂಮಿಗೆ ಅಂತ್ಯ ಸಂಸ್ಕಾರ ಮಾಡಲು ಹೋದಾಗ ಅವರ ಪತ್ನಿ ಮಹಾದೇವಿ ಸಾನೆ ಆಘಾತಕ್ಕೊಳಗಾಗಿ ಮನೆಯಲ್ಲಿಯೇ ಪ್ರಾಣ ತ್ಯಾಗ ಮಾಡಿದ್ದಾರೆ. ಪತಿ ಮತ್ತು ಪತ್ನಿಯ ಶವಗಳನ್ನು ಒಂದೇ ಚಿತೆಯ ಮೇಲೆ ಅಂತ್ಯಕ್ರಿಯೆ ಮಾಡಲಾಯಿತು.
ಮೃತರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಇಡೀ ಗ್ರಾಮವು ಶೋಕದಲ್ಲಿ ಮುಳುಗಿದ್ದು, ಗ್ರಾಮದಲ್ಲಿನ ಎಲ್ಲಾ ವ್ಯವಹಾರಗಳು ಮುಚ್ಚಲ್ಪಟ್ಟವು. ಗುರುವಾರ ಅಂತ್ಯಕ್ರಿಯೆಯ ನಂತರ, ೋಟೋಎಲ್ಗೊಂಡ ಸಾನೆಪತ್ನಿ ಮಹಾದೇವಿ ಸಾನೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 