ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ: ಬಿ ಶ್ರೀರಾಮುಲು

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ: ಬಿ ಶ್ರೀರಾಮುಲು  We have no objection to the unveiling of Maharishi Valmiki's statue: B Sriramulu

                    ಬಳ್ಳಾರಿ  02:  ಸರ್ಕಾರದಿಂದ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ವಾಲ್ಮೀಕಿ ಸರ್ಕಲ್ ನಲ್ಲಿ ( ಎಸ್ಪಿ ಸರ್ಕಲ್ ) ಅನಾವರಣಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಈ ವಿಷಯವನ್ನು ರಾಜಕೀಯಗೊಳಿಸಿ ಶ್ರೀರಾಮುಲು ಜನಾರ್ದನ್ ರೆಡ್ಡಿ ಸೋಮಶೇಖರ್ ರೆಡ್ಡಿ ಸೇರಿದಂತೆ ಬಿಜೆಪಿ ವಿರೋಧಿಸುತ್ತಿದೆ ಎಂದು ನಮ್ಮ ಮೇಲೆ ನಗರ ಶಾಸಕ ಭರತ್ ರೆಡ್ಡಿ ಗೂಬೆ ಕೂರಿಸುತ್ತಿದ್ದಾರೆ, ಫ್ಲೆಕ್ಸ್‌ ಕಟ್ಟುವಂತ ಕ್ಷುಲ್ಲಕ ವಿಷಯಕ್ಕೆ ನಿನ್ನೆ ಸಂಜೆ ಭರತ್ ರೆಡ್ಡಿ ಅವರ ಬೆಂಬಲಿಗರು ಶಾಸಕ ಜನಾರ್ದನ್ ರೆಡ್ಡಿ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಸತೀಶ್ ರೆಡ್ಡಿ ಅವರ ಗನ್ಮಾನ್ ನಿಂದ ಗುಂಡು ಹಾರಿಸಲಾಗಿದೆ

                   ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಅಮಾಯಕ ರಾಜಶೇಖರ್ ಗುಂಡಿಗೆ ಬಲಿಯಾಗಿದ್ದಾರೆ ಇದು ಗುಂಡಾ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಶ್ರೀರಾಮುಲು ಬೇಸರವನ್ನು ವ್ಯಕ್ತಪಡಿಸಿದರು.  ಅವರು ಜನಾರ್ದನ ರೆಡ್ಡಿ ಗೃಹ ಕಚೇರಿಯಲ್ಲಿ ನಿನ್ನೆ ಹೌವಂಬಾವಿ ಪ್ರದೇಶದ ಜನಾರ್ದ ರೆಡ್ಡಿ ಮನೆ ಹತ್ತಿರ ಘಟನೆಯ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ವಾಲ್ಮೀಕಿ ಪುತ್ತಳಿ ಅನಾವರಣದ ಕಾರ್ಯಕ್ರಮಕ್ಕೆ ಬ್ಯಾನರ್ ಗಳನ್ನು ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ಅಡ್ಡಲಾಗಿ ಅಳವಡಿಸಲಾಗಿತ್ತು ಅವುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸತೀಶ್ ರೆಡ್ಡಿ ಮತ್ತು ಅವರ ಬೆಂಬಲಿಗರು ಹಾಗೂ ಗನ್ ಮ್ಯಾನ್ಗಳೊಂದಿಗೆ ಆಗಮಿಸಿ ಸಿನಿಮಾ ಶೈಲಿಯಲ್ಲಿ ಫೈಯರ್ ಮಾಡಿದ್ದಾರೆ  

                   ಈ ರೀತಿಯಾಗಿ ಫೈರ್ ಮಾಡಲು ಖಾಸಗಿ ಘನ್ಮಾನಿಗಳಿಗೆ ಸರ್ಕಾರದ ಆದೇಶ ಇರುವುದಿಲ್ಲ ಇದು ಖಾಸಗಿ ಪಿಸ್ತೂಲಿನಿಂದ ಹಾರಿದ ಗುಂಡಾಗಿದ್ದು ಇದು. 76 ಟಟ ಗುಂಡು ಆಗಿದೆ ಜೊತೆಗೆ ರೆಡ್ಡಿ ಮನೆ ಮೇಲೆ ಕಲ್ಲುಗಳನ್ನು ತೂರಲಾಗಿದೆ ಇದರಿಂದ ವೆಂಕಟರಮಣ ಕವಿತಾ ಹನುಮಂತ ಸೇರಿದಂತೆ ಹಲವು ಕಾರ್ಯಕರ್ತರಿಗೆ ಗಾಯಗಳಾಗಿವೆ. ಯಾವುದೇ ಜನಪ್ರತಿನಿಧಿ ಅಲ್ಲದ ಸತೀಶ್ ರೆಡ್ಡಿಗೆ ಸರ್ಕಾರ ಸೆಕ್ಯೂರಿಟಿ ನೀಡಿದೆ ಇದು ಕಾನೂನುಬಾಹಿರವಾದದ್ದು ಎಂದ ಶ್ರೀರಾಮುಲು ನಮ್ಮ ಹತ್ತಿರ ಯಾವುದೇ ಖಾಸಗಿ ಗನ್ ಮ್ಯಾನ್ ಗಳಿಲ್ಲ ಜನಾರ್ದ ರೆಡ್ಡಿ ಸೋಮಶೇಖರ ರೆಡ್ಡಿ ಸೇರಿದಂತೆ ನಮಗೆ ಏಳು ಜನ ಸರ್ಕಾರಿ ಗನ್ ಮ್ಯಾನ್ ಗಳು ಇದ್ದಾರೆ , ಅವರೆಲ್ಲರೂ ಅಧಿಕೃತ ಗನ್ ಮ್ಯಾನ್ ಗಳು ಆಗಿದ್ದಾರೆ ಖಾಸಗಿ ಪಿಸ್ತೂಲಿನಿಂದ ಗುಂಡು ಹಾರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 

                    ಯುವಕ ಭರತ್ ರೆಡ್ಡಿ ನಮ್ಮ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ ಸಂಸ್ಕೃತಿ ಇಲ್ಲದ ಶಿಕ್ಷಣ ಏನು ಮಾಡಲು ಸಾಧ್ಯ ಮನುಷ್ಯ ಏನಾದರೂ ಮಾನವೀಯತೆ ಮತ್ತು ಸಂಸ್ಕೃತಿಯನ್ನು ಹೊಂದಬೇಕಾಗಿರುತ್ತದೆ. ಈ ಎಲ್ಲಾ ಘಟನೆಯನ್ನು ಸರ್ಕಾರ ಹಾಲಿ ನ್ಯಾಯಾಧೀಶರಿಂದ ತನಿಖೆ ಒಳಪಡಿಸಲಿ ಇಲ್ಲವೇ ಸಿಬಿಐಗೆ ನೀಡಲಿ ಎಂದು ಒತ್ತಾಯಿಸಿದರು. ಚುನಾವಣೆ ನಡೆದಾಗಿನಿಂದಲೂ ಜನಾರ್ದನ ರೆಡ್ಡಿಯ ಮೇಲೆ ಭರತ್ ರೆಡ್ಡಿ ಮತ್ತು ಬೆಂಬಲಿಗರು ಆರೋಪ ಮಾಡುವುದು ತೊಂದರೆ ನೀಡುವುದು ಮಾಡುತ್ತಿದ್ದಾರೆ ಜನಾರ್ದನ ರೆಡ್ಡಿ ನಮ್ಮ ಪಕ್ಷದ ಶಾಸಕರಾಗಿದ್ದಾರೆ ಅವರ ಬೆಂಬಲಕ್ಕೆ ನಾನು ಮತ್ತು ನಮ್ಮ ಪಕ್ಷ ನಿಲ್ಲುವುದು ಅನಿವಾರ್ಯ, ನಗರ ಯುವ ಶಾಸಕ ಭರತ್ ರೆಡ್ಡಿ ತನ್ನ ವೇಗವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲಿ ಇಲ್ಲವಾದರೆ ಅಪಘಾತಗಳಾಗುವ ಸಂಭವವಿರುತ್ತದೆ ಎಂದು ಕಿವಿಮಾತು ಹೇಳಿದರು.