ಗ್ರಾಮಸ್ಥರ ಕನಸು ಸಾಕಾರ : ಸಚಿವ ಜೋಶಿಗೆ ಕೃತಜ್ಞತೆ

ಗ್ರಾಮಸ್ಥರ ಕನಸು ಸಾಕಾರ : ಸಚಿವ ಜೋಶಿಗೆ ಕೃತಜ್ಞತೆ Villagers' dreams come true: Gratitude to Minister Joshi

ಗ್ರಾಮಸ್ಥರ ಕನಸು ಸಾಕಾರ : ಸಚಿವ ಜೋಶಿಗೆ ಕೃತಜ್ಞತೆ    

ಶಿಗ್ಗಾವಿ  15: ಯಾವಾಗಲೂ ಹಳ್ಳಿಗಳ ಅಭಿವೃದ್ಧಿಗೆ, ಧಾರ್ಮಿಕ ಕೇಂದ್ರಗಳ ವಿಸ್ತಾರಕ್ಕೆ ಹಾಗೂ ಜನೋಪಯೋಗಿ ಕಾಮಗಾರಿಗಳಿಗೆ ಕೇಂದ್ರ ಸಚಿವ ಜೋಶಿಯವರು ಬದ್ಧರಾಗಿದ್ದಾರೆ ಎಂದು ಭಾಜಪ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.  ತಾಲೂಕಿನ ನೀರಲಗುಡ್ಡ ಗ್ರಾಮದ ಭಕ್ತರ ಆಶಯದಂತೆ ಮರೆಮ್ಮ ದೇವಿ ಸಭಾಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ. ಈ ಸಭಾಭವನದ ನಿರ್ಮಾಣಕ್ಕೆ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಸದಸ್ಯ ಪ್ರಲ್ಹಾದ ಜೋಶಿಯವರು ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ 15 ಲಕ್ಷ ರೂ. ಅನುದಾನ ಮಂಜೂರು ಮಾಡಿ ನಡೆದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರುಸಚಿವರ ಪ್ರಾಮಾಣಿಕ ಪ್ರಯತ್ನದಿಂದ ಶಿಗ್ಗಾವಿ ಕ್ಷೇತ್ರದ ಗ್ರಾಮಗಳಲ್ಲಿ ಅಭಿವೃದ್ಧಿಯ ಅಲೆ ಹರಡಿದೆ ಹಾಗೂ ನೀರಲಗುಡ್ಡ ಗ್ರಾಮದಲ್ಲಿಯೂ ಮರೆಮ್ಮ ದೇವಿ ಸಭಾಭವನ ನಿರ್ಮಾಣದಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಒಂದು ಸ್ಥಿರ ವೇದಿಕೆ ಸಿಗಲಿದೆ. ಗ್ರಾಮಸ್ಥರ ಒಗ್ಗಟ್ಟಿನಿಂದ ಈ ಯೋಜನೆ ಯಶಸ್ವಿಯಾಗಲಿ ಎಂದು ಆಶಿಸಿದರು.  ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಸದಸ್ಯ ಲಕ್ಷ್ಮಣ ಲಮಾಣಿ, ಭೊಜಪ್ಪ ಲಮಾಣಿ , ಜೀರ​‍್ಪ ಲಮಾಣಿ, ಚಂದ್ರು ಲಮಾಣಿ, ಮುಖಂಡರಾದ ಜ್ಞಾನಪ್ಪ ಲಮಾಣಿ, ಚೋಳಪ್ಪ ಲಮಾಣಿ, ಸುರೇಶ ವಾಲ್ಮೀಕಿ, ರಾಜು ಲಮಾಣಿ, ತಾಲೂಕ ಭಾಜಪ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ ಮಡಿವಾಳರ, ಮುಖಂಡ ನರಹರಿ ಕಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು