ಧಾರವಾಡ 09: ಮಕ್ಕಳು ತಮ್ಮ ಆರೋಗ್ಯದ ಜೊತೆಗೆ ಶಿಕ್ಷಣವನ್ನು ಪಡೆದು, ಮುಂದಿನ ನಾಯಕರಾಗಬೇಕು ಹಾಗೂ ತಮ್ಮ ಶಾಲಾ ಶೈಕ್ಷಣಿಕ ದಿನವನ್ನು ನೆನೆದು 25 ವರ್ಷಗಳ ಸುದೀರ್ಘ ಸೇವೆಯೊಂದಿಗೆ ನಿರ್ದೇ ಶಕರಾಗಿ ಬಡ್ತಿ ಹೊಂದಿರುವದನ್ನು ನೆನೆದು ಅಪರ ಆಯುಕ್ತರ ಕಾರ್ಯಾ ಲಯದ ನಿರ್ದೇ ಶಕ ಡಾ.ಬಿ.ಕೆ.ಎಸ್.ವರ್ಧನ ಸಂತೋಷ ವ್ಯಕ್ತಪಡಿಸಿದರು.
ನಗರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾ ಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಶಹರ ವಲಯ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ, ಸಪ್ತಾಪೂರ, ಭಾರತಜ್ಞಾನ, ವಿಜ್ಞಾನ ಸಮಿತಿ ಧಾರವಾಡ ಇವರ ಆಶ್ರಯದಲ್ಲಿ "ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಳ ಬಿದ್ದಿರುವ ವ್ಯಕ್ತಿಗಳನ್ನು ಮೇಲೆತ್ತುವ ಕೆಲಸ ಮಾಡಬೇಕೆಂದು ಕರೆ ನೀಡಿದ ವರ್ಧನ ಅವರು ಸನ್ಮಾನಕ್ಕೆ ವೆಚ್ಚ ಮಾಡುವ ಹಣವನ್ನು ಬಡ ಮಕ್ಕಳ ಕಲಿಕಾ ಸಾಮಗ್ರಿಗಳಿಗಾಗಿ ಬಳಸಿ ಎನ್ನುವ ಉತ್ತಮ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಸ್ವಾಗತಿಸಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಅಡಿವೇರ ಕ್ಷೇತ್ರ ಸಮನ್ವಯಾಧಿಕಾರಿ ಮೂಢನಂಬಿಕೆ ಬಿಟ್ಟು, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಸಪ್ತಾಪೂರ ವಲಯದ ಮಹಾನಗರ ಪಾಲಿಕೆಯ ಸದಸ್ಯ ವಿಜಯಾನಂದ ಶೆಟ್ಟಿ. ಡೈಟನ ಪ್ರಾಂಶುಪಾಲ ಅಬ್ದುಲ್ಖಾಜಿ, ಶಿವಲೀಲಾ ಕಳಸಣ್ಣವರ, ಭೂತಾಳೆ, ದುಬ್ಬನಮರಡಿ ವಿಷಯ ಪರೀವಿಕ್ಷಕರು, ಹಾಗೂ ಕ್ಲಸ್ಟರಿನ ಪ್ರಧಾನ ಗುರುಗಳು ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಎಮ್.ಪಿ ದೊಡ್ಡಮನಿ, ವಾಯ್. ಎಮ್ದೊಡಮನಿ, ಜಿ.ಬಿ ಶೆಟ್ಟರ ಉಪಸ್ಥಿತರಿದ್ದರು. ಸುಮಿತಾ ಹಿರೇಮಠ, ಎಸ್.ಪಿ.ಕೇಸರಿ ನಿರೂಪಣೆ, ಎಸ್.ಎಸ್. ಜೋಶಿ, ಆರ್.ಎಸ್. ಹಿರೇಗೌಡರ ಹಾಗೂ ಎಸ್.ಎನ್ಇದಿಯಮ್ಮನವರ ವಂದನಾರ್ಪಣೆ ಮಾಡಿದರು.