ಹೃದಯದಲ್ಲಿನ ಗಡ್ಡೆ: ಡಾ. ರವಿ ಘಟ್ನಟ್ಟಿ ತಂಡದಿಂದ ಕೀಹೋಲ್ ಯಶಸ್ವಿ ಶಸ್ತ್ರ ಚಿಕಿತ್ಸೆ
Tumor in the heart: Successful keyhole surgery by Dr. Ravi Ghatnatti's team
ವಿಜಯಪುರ 26: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಎಂಡೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ರವಿ ಘಟ್ನಟ್ಟಿ ಅವರ ನೇತೃತ್ವದ ತಂಡ ಹೃದಯದಲ್ಲಿನ ಗಡ್ಡೆಯನ್ನು ಕೀಹೋಲ್ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ
ಈ ಸಂದರ್ಭದಲ್ಲಿ ಅರವಳಿಕೆ ತಜ್ಞ ಡಾ. ಪ್ರಶಾಂತ ಬಿರಾದಾರ, ಸಿಟಿವಿಎಸ್ ನರ್ಸಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು. ಈ ಕುರಿತು ಡಾ. ರವಿ ಘಟ್ನಟ್ಟಿ ಅವರು ಪ್ರತಿಕ್ರಿಯೆ ನೀಡಿ ಎಂಡೋಸ್ಕೋಪಿಕ್ ಹೃದಯ ಶಸ್ತ್ರಚಿಕಿತ್ಸೆ ತಂಡವು 48 ವರ್ಷದ ಮಹಿಳೆಯ ಹೃದಯದಲ್ಲಿ ಕಂಡುಬಂದ ಕ್ಯಾನ್ಸರ್‌ರಹಿತ ಗಡ್ಡೆಯನ್ನು (ಲೆಫ್ಟ್ ಏಟ್ರಿಯಲ್ ಮಿಕ್ಸೋಮ) ಸಂಪೂರ್ಣ ಎಂಡೋಸ್ಕೋಪಿಕ್ (ಕೀಹೋಲ್) ತಂತ್ರದ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ ಎಂದು ತಿಳಿಸಿದರು.
ಕಾರ್ಡಿಯಾಕ್ ಮಿಕ್ಸೋಮ ಎಂಬುದು ಹೃದಯದ ಒಳಭಾಗದಲ್ಲಿ ಬೆಳೆಯುವ ಸೌಮ್ಯ(ಬಿನೈನ್) ಗಡ್ಡೆಯಾಗಿದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ರೋಗಿಯು ಉಸಿರಾಟದ ತೊಂದರೆ, ಜ್ವರ, ದೌರ್ಬಲ್ಯ ಮುಂತಾದ ಲಕ್ಷಣಗಳನ್ನು ಎದುರಿಸುತ್ತಾರೆ. ಕಠಿಣ ಪರಿಸ್ಥಿತಿಯಲ್ಲಿ, ರಕ್ತಪ್ರವಾಹದ ಅಡ್ಡ ಪರಿಣಾಮದಿಂದ ಸ್ಟ್ರೋಕ್‌ಗಳಂತಹ ಜೀವಕ್ಕೆ ಅಪಾಯಕಾರ ಸಮಸ್ಯೆಗಳಿಗೂ ಕಾರಣವಾಗಬಹುದು. ಬೇರೆ ಕಡೆ ಸಾಮಾನ್ಯವಾಗಿ ಇಂಥ ಶಸ್ತ್ರಕ್ರಿಯೆಯನ್ನು, ಎದೆಮೂಳೆ (ಸ್ಟರ್ನೋಟೋಮಿ) ಕತ್ತರಿಸುವ ವಿಧಾನ ಬಳಸುತ್ತಾರೆ.
ಆದರೆ, ಇಲ್ಲಿನ ಶಸ್ತ್ರಚಿಕಿತ್ಸೆ ತಂಡವು ಬಲ ಸ್ತನದ ಮೇಲ್ಭಾಗದ ಸುತ್ತ ಸಣ್ಣ ರಂಧ್ರವನ್ನು ಮಾಡಿ, ’ಪೆರಿ-ಏರಿಯೋಲರ್ ಅಪ್ರೋಚ್’ ವಿಧಾನವನ್ನು ಅನುಸರಿಸಿ ಶಸ್ತ್ರಚಿಕಿತ್ಸೆ ನಡೆಸಿದೆ. ಕೀಹೋಲ್ ವಿಧಾನ ಬಳಕೆಯಿಂದ ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ನೋವು ಕಡಿಮೆ ಇರುತ್ತದೆ. ಅಲ್ಲದೇ, ಚಿಕ್ಕರಂಧ್ರ ಮಾಡುವುದರಿಂದ ಗಾಯದ ಗುರುತು ಕೂಡ ಕಡಿಮೆ ಇರುತ್ತದೆ. ರೋಗಿ ಆಸ್ಪತ್ರೆಯಲ್ಲಿ ಕಡಿಮೆ ಅವಧಿಯಲ್ಲಿ ಶೀಘ್ರ ಚೇತರಿಕೆಯಾಗುತ್ತಾರೆ. ಅಷ್ಟೇ ಅಲ್ಲ, ರೋಗಿಗಳು ಗುಣಮುಖರಾಗಿ ಬೇಗ ಸಾಮಾನ್ಯ ಚಟುವಟಿಕೆಗಳಿಗೆ ಮರಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಆಸ್ಪತ್ರೆಯ ವೈದ್ಯರ ಈ ಯಶಸ್ವಿ ಶಸ್ತ್ರಚಿಕಿತ್ಸೆ ಕಾರ್ಯಕ್ಕೆ ಡೀಮ್ಡ್ ವಿವಿ ಕುಲಾಧಿಪತಿ ಬಿ. ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ವೈದ್ಶಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 