ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ಶಿವುಕುಮಾರ ಮಹಾಸ್ವಾಮಿ ಅವರ ಜಯಂತ್ಯೋತ್ಸವ ಆಚರಣೆ
Trividha Dasohi, Karnataka Ratna, Padma Bhushan Dr. Shivukumar Mahaswamy's birth anniversary celebr
ಲೋಕದರ್ಶನ ವರದಿ
ಕಂಪ್ಲಿ 01: ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ದಿವಂಗತ ಸಜ್ಜನ್ ವೀರಭದ್ರ್ಪ ಕುಟುಂಬವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರಮಪೂಜ್ಯ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಸಿದ್ದಗಂಗಾಮಠದ ಡಾ. ಶಿವುಕುಮಾರ ಮಹಾಸ್ವಾಮಿ ಅವರ 119ನೇ ಜಯಂತ್ಯೋತ್ಸವ ಸಂಭ್ರಮದಿಂದ ಬುಧವಾರ ಆಚರಿಸಿದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಮಾತನಾಡಿ, ಶ್ರೀಗಳು ವೈಯಕ್ತಿವಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿ ದುಡಿದರು. ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟರು. ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಸ್ವಾಮೀಜಿ, ಲಕ್ಷಾಂತರ ಮಕ್ಕಳ ಬದುಕು ಹಸನು ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿಯವರ ಕಾಯಕ ಶ್ರದ್ಧೆ ನಮ್ಮ ಬದುಕಿನ ದಾರಿಯಾದಾಗ ಮಾತ್ರ ಅವರ ತತ್ವಗಳ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಪೂಜ್ಯರ ಕಾಲಘಟ್ಟದಲ್ಲಿ ಇದ್ದು, ಅವರ ಸೇವೆ ಮಾಡಿದ ನಾವೆಲ್ಲರೂ ಅವರ ಜೀವನ ಸಂದೇಶಗಳನ್ನು ಜಗತ್ತಿಗೆ ಸಾರುವ ಜವಾಬ್ದಾರಿಯನ್ನೂ ಹೊತ್ತು, ನಿಷ್ಠೆಯಿಂದ ಪೂರೈಸಬೇಕು ಎಂದರು.
ಮೊದಲಿಗೆ ಶಿವುಕುಮಾರ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ಸಲ್ಲಿಸಿದ ನಂತರ ಜಯಂತಿ ಆಚರಿಸಿದರು. ತದನಂತರ ಸಿಹಿ ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರ್ಪ, ಕಂಪ್ಲಿ ಜೆಸಿಐ ಅಧ್ಯಕ್ಷ ಡಾ.ಭರತ್ ಪದ್ಮಸಾಲಿ, ಮುಖಂಡರಾದ ಸಜ್ಜನ್ ಶರಣಪ್ಪ, ಸಜ್ಜನ್ ವಿಶ್ವನಾಥ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿಕೊಟ್ರ್ಪ, ಜಿ.ಚಂದ್ರೇಶಖರಹಗೌಡ, ಬಿ.ವಿ.ಗೌಡ, ಎಸ್.ಎಂ.ಗುರುಪ್ರಸನ್ನ, ಅರವಿ ಅಮರೇಶಗೌಡ, ಗಡಾದ್ ಪ್ರಸಾದ್, ಇಂದ್ರಜಿತ್ ಸಿಂಗ್, ಸಂತೋಷ್, ರಾಕೇಶ ಬಾಗ್ರಾಚಾ ಸೇರಿದಂತೆ ಇತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 