ವಿಜಯಪುರದ ಹೆಮ್ಮೆಯ ಕ್ರಿಕೇಟಿಗ ಪವನದೀಪ ಭಾರದ ಖಾನೆಗೆ ಗೌರವ ಸನ್ಮಾನ
Tribute to Vijayapura's proud cricketer Pawandeep Bharadakhane
ವಿಜಯಪುರ 23 : ಇತ್ತೀಚೆಗೆ ಆಂಧ್ರ್ರದೇಶದಲ್ಲಿ ನಡೆದ ದಕ್ಷಿಣ ಭಾರತ ಅಂತರ ರಾಜ್ಯ 14 ವರ್ಷದೊಳಗಿನ ಕ್ರಿಕೇಟ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 3 ಶತಕ ಮತ್ತು ಒಂದು ದ್ವಿಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಸರ್ವಾಧಿಕ ಓಟಗಳನ್ನು ದಾಖಲಿಸಿ ದಕ್ಷಿಣ ಭಾರತ ತಂಡಕ್ಕೆ ಆಯ್ಕೆಯಾಗಿರುವ ವಿಜಯಪುರದ ಹೆಮ್ಮೆಯ ಕ್ರಿಕೇಟಿಗ ಪವನದೀಪ ಭಾರದ ಖಾನೆಯವರಿಗೆ ಲಯನ್ಸ ಕ್ಲಬ ಆಫ್ ಬಿಜಾಪುರ ಪರಿವಾರದ ವತಿಯಿಂದ ಏರಿ್ಡಸಲಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಹಿಳಾ ಕ್ರಿಕೇಟ ತರಬೇತುದಾರರಾದ ಡಾ. ಅಶೋಕಕುಮಾರ ಜಾಧವ ಇವರು ಮಾತನಾಡುತ್ತ, ಯಶಸ್ಸು ನೇತ್ತಿಗೆರಬಾರದು.
ಯಾರು ತಮ್ಮ ಯಶಸ್ಸನ್ನು ಅತೀ ಬೇಗ ವಿಜೃಂಭಿಸುತ್ತಾರೋ, ಅಂದಿನಿಂದ ಅವರ ಆ ಸಾಧನೆಯ ಅಧೋಗತಿ ಪ್ರಾರಂಭ. ಆದುದರಿಂದ ಚಿಕ್ಕ ವಯಸ್ಸಿನಲ್ಲಿ ಸಿಕ್ಕಿರುವ ಈ ಯಶಸ್ಸು ಅಕಸ್ಮಿಕ.. ಅದು ಶಾಶ್ವತ ಇರಬೇಕಾದರೇ ಪ್ರಯತ್ನ ಮತ್ತು ಸಾಧನೆ ನಿರಂತರ ಆಗಿರಬೇಕು ಎಂದು ಹೇಳಿದರು. ಮತ್ತೊರ್ವ ಅತಥಿಗಳಾಗಿ ಆಗಮಿಸಿದ ಲಯನ್ಸ ಪರಿವಾರದ ಮಾಜಿ ಅಧ್ಯಕ್ಷರಾದ ಫಯಾಜ ಕಲಾದಗಿಯವರು ಮಾತನಾಡುತ್ತ, ಪವನದೀಪ ಅವರು ಭವಿಷ್ಯದಲ್ಲಿ ಭಾರತ ದೇಶದ ಕ್ರಿಕೇಟ ಧೃವತಾರೆ ಆಗಬೇಕು. ಐ.ಪಿ.ಎಲ. ಪಂದ್ಯಾವಳಿಯಲ್ಲಿ ಮಿಂಚಿ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು. ಆ ನಿಟ್ಟಿನಲ್ಲಿ ಕನಸನ್ನು ಹೊಂದಿರಬೇಕು ಎಂದರಲ್ಲದೇ, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಸಹಾಯ ಮಾಡವೇವು ಎಂದು ಹೇಳಿದರು.
ಪರಿವಾರದ ಕಾರ್ಯದರ್ಶಿಗಳಾದ ವಿದ್ಯಾ ಕೊಟೆನ್ನವರ ಇವರು ಮಾತನಾಡುತ್ತ, ಯಾವ ಮಕ್ಕಳು ಪಾಲಕರಿಗೆ, ಶಿಕ್ಷಕರಿಗೆ ಮತ್ತು ಹಿರಿಯರಿಗೆ ಗೌರವ ಕೊಟ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೋ, ಅವರು ಮಾತ್ರ ಸಾಧಕರಾಗುತ್ತಾರೆ. ಪವನದೀಪ ಇವತ್ತು ಅಂತಹ ಸಂಸ್ಕೃತಿಯನ್ನು ಹೊಂದಿದ್ದರಿಂದಲೇ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯವು ಕೂಡ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಈ ಸಾಧನೆಯ ಜೋತೆಗೆ ಒಳ್ಳೆಯ ಸಂಸ್ಕೃತಿಯೂ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪವನದೀಪ, ತಮ್ಮ ಕ್ರಿಕೇಟ ಬೆಳವಣಿಗೆಗೆ ತಮ್ಮ ತಂದೆಯವರ ಪಾತ್ರ ಬಹಳ ಮಹತ್ತರದಾಗಿದ್ದು, ತಾನು 5-6 ವರ್ಷದವನಿದ್ದಾಗಲೇ ದೇಶಕ್ಕಾಗಿ ಆಡುವ ಕನಸನ್ನು ಕಂಡಿದ್ದು, ಅದನ್ನು ಇಡೇರಿಸಲು ಸದಾ ಪ್ರಯತ್ನಶೀಲನಾಗಿರುವೆ.
ಅದಕ್ಕೆ ಗುರುಗಳ ಮತ್ತು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದ ಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷಸ್ಥಾನ ವಹಿಸಿದ್ದ ಲಯನ್ಸ ಪರಿವಾರದ ಅಧ್ಯಕ್ಷರಾದ ಚಿದಾನಂದ ನಿಂಬಾಳ ಅಧ್ಯಕ್ಷೀಯ ಮಾತನಾಡುತ್ತ ಪವನದೀಪನ ಸಾಧನೆಗೆ ಅಭಿನಂದನೆ ಸಲ್ಲಿಸುತ್ತ ಅವರು ಕಾಣುತ್ತಿರುವ ಕನಸು ಶೀಘ್ರದಲ್ಲೇ ಇಡೇರಲಿ ಎಂದು ಹಾರೈಸಿದರು. ಬುಲ್ಸ ರಿಂಗ ಅಕಾಡೆಮಿಯ ಮುಖ್ಯಸ್ಥರು ಹಾಗೂ ಪವನದೀಪ ಅವರ ತರಬೇತುದಾರರು ಆಗಿರುವ ರವಿ ಭಾರದಖಾನೆ, ಲಯನ್ಸ ಪರಿವಾರದ ಸದಸ್ಯರಾದ ಡಾ. ರಶ್ಮೀ ಚಿತ್ತವಾಡಗಿ, ಶೈಲಾ ಬಸವಪ್ರಭು ಮಾತನಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ ಪರಿವಾರದ ಪದಾಧಿಕಾರಿಗಳಾದ ಇಂದುಮತಿ ಕನ್ನೂರ, ಅನೀತಾ ಕುಮಸಿ, ಶಾಂತಾ ಉತ್ಲಾಸರ, ರಜನಿ ಸಂಬಣ್ಣಿ, ಮಾಯಾ ಚೌಧರಿ, ಧನರಾಜ, ಹಿಪ್ಪರಗಿ ಇವರಲ್ಲದೇ ತರಬೇತಿ ಶಿಬಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 