ಇಂದು ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಲು ಶ್ರೀಗಳ ಕರೆ

ಇಂದು ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಲು ಶ್ರೀಗಳ ಕರೆ Today, the Lord's call to make the Basava Culture Campaign a success

ಇಂದು ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಲು ಶ್ರೀಗಳ ಕರೆ 

ಹಾವೇರಿ 13: ರಜನಿ ಸಭಾಂಗಣದಲ್ಲಿ ದಿ,14 ರಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ,ಬಸವ ಸಂಸ್ಕೃತಿಅಭಿಯಾನ ಸಮಿತಿ-ಹಾವೇರಿ ಸಹಯೋಗದೊಂದಿಗೆರಾಜ್ಯ ಸರ್ಕಾರ ಬಸವಣ್ಣನವರನ್ನುಕರ್ನಾಟಕ ಸಂಸ್ಕೃತಿಕ ನಾಯಕಎಂದುಘೋಷಣೆ ಮಾಡಿದ್ದು, ಬಸವಣ್ಣನವರತತ್ವ ಸಿದ್ದಾಂತಗಳನ್ನು ಹಾಗೂ ವಚನಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಬಸವ ಸಂಸ್ಕೃತಿಅಭಿಯಾನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಅಭಿಯಾನ ಯಶಸ್ವಿಗೊಳಿಸಲು ಸಹಕಾರ ನೀಡಿರಿಎಂದು ನಗರದ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿಗಳು ಹೇಳಿದರು. 

ಇಲ್ಲಿನ ಪತ್ರಿಕಾ ಭವನದಲ್ಲಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ದಿ, 14 ರಂದುರಜನಿ ಸಭಾಂಗಣದಲ್ಲಿಅಂದುಬೆಳಿಗ್ಗೆ 10ಘಂಟೆಗೆಅಭಿಯಾನ ಸ್ವಾಗತಿಸಲಾಗುವುದು.10-30 ಘಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಶರಣಗುರುಬಸಪ್ಪ(ಅಜಿತ್)ಸಿದ್ಧೇಶ್ವರ ಮಾಗಾವಿ ಅವರು ನೆರವೇರಿಸುವರು.11 ಘಂಟೆಗೆ ಹಾವೇರಿಎಸ್‌.ಪಿ ಗಳಾದ ಶ್ರೀಮತಿ ಯಶೋಧಾ ವಂಟಗೋಡಿಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವಚನ ಸಂವಾದಕಾರ್ಯಕ್ರಮವನ್ನುಉದ್ಘಾಟಿಸಲಿದ್ದಾರೆ.ಮಧ್ಯಾಹ್ನ 3-30 ಘಂಟೆಗೆ ನಗರಶ್ರೀ ಹುಕ್ಕೇರಿಮಠದಿಂದಗಾಂಧಿರಸ್ತೆಯ ಮೂಲಕ ರಜನಿ ಸಭಾಂಗಣದವರಿಗೆ ಸಾಮರಸ್ಯ ನಡಿಗೆಇರಲಿದೆ.ಸಂಜೆ6ಘಂಟೆಗೆ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಜನಪ್ರತಿನಿಧಿಗಳು,ಸಾಹಿತಿಗಳು,ಗಣ್ಯರು ಭಾಗವಹಿಸುವರು.ರಾತ್ರಿ 8-30 ಘಂಟೆಗೆಜಂಗಮದಡೆಗೆನಾಟಕ ಪ್ರದರ್ಶನಗೊಳ್ಳಲಿದೆ.ಹೀಗೆ ಅನೇಕ ಕಾರ್ಯಕ್ರಮಗಳು ಜರುಗಲಿದ್ದು,ಬಸವಣ್ಣನವರ ಅನುಯಾಯಿಗಳು,ಎಲ್ಲಾ ಸಂಘ-ಸಂಘಟನೆಗಳ ಮುಖಂಡರು,ಕಾರ್ಯಕರ್ತರು ಹಾಗೂ ಸಾರ್ವಜನಿಕರುಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವಂತಾಲಿಎಂದು ಶ್ರೀಗಳು ಹೇಳಿದರು. 

 ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಿವಯೋಗಿ ಮಾಮಲೆಪಟ್ಟಣಶೆಟ್ಟಿ,ಎಸ್‌.ಎನ್‌. ಕೆಂಪಗೌಡ್ರಕಿರಣ ಕೊಳ್ಳಿ, ಅಶೋಕ ಮಾಗನೂರ, ಆನಂದ ಅಠವಾಳಗಿ, ವಿ.ಜಿ ಯಳಗೇರಿ,ಪರಮೇಶಪ್ಪ ಮೇಗಳಮನಿ,ಶಿವಬಸಪ್ಪ ಮುದ್ದಿ,ಮಲ್ಲಿಕಾರ್ಜುನ ಹಿಂಚಿಗೇರಿ, ಗಂಗಾಧರ ಮಾಸೂರ,ಮುರಿಗೆಪ್ಪಕಡೆಕೊಪ್ಪ, ಶಿವಬಸಪ್ಪ ಅರಳೇಶ್ವರ, ಮೃತ್ಯುಂಜಯ ಮಹಾರಾಜಪೇಟೆ, ಬಸವರಾಜ ಮುಳುಗುಂದ ಇದ್ದರು.