ಇಂದಿನ ಕೊಪ್ಪಳ-ಭಾಗ್ಯನಗರ ಬಂದ್ ಗೆ : ಜೆಡಿಎಸ್ ಬೆಂಬಲ ಸದನದಲ್ಲಿ ವಿಷಯ ಪ್ರಸ್ತಾಪಿಸದ ಸಂಸದ ಶಾಸಕ : ಸಿವಿಸಿ ಆರೋಪ

ಇಂದಿನ ಕೊಪ್ಪಳ-ಭಾಗ್ಯನಗರ ಬಂದ್ ಗೆ : ಜೆಡಿಎಸ್ ಬೆಂಬಲ ಸದನದಲ್ಲಿ ವಿಷಯ ಪ್ರಸ್ತಾಪಿಸದ ಸಂಸದ ಶಾಸಕ : ಸಿವಿಸಿ ಆರೋಪ Today's Koppal-Bhagyanagar bandh: JDS supports MP, MLA who did not raise the issue in the House: CV

ಕೊಪ್ಪಳ 23:  ಕಾರ್ಖಾನೆಗಳ ವಿಸ್ತರಣೆಯನ್ನು ವಿರೋಧಿಸಿ ಇಂದು ದಿನಾಂಕ 24 ರಂದು ನಡೆಯುವ ಕೊಪ್ಪಳ- ಭಾಗ್ಯನಗರ ಬಂದ್ ಗೆ ಜೆಡಿಎಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.ಅವರು ಸೋಮವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕೊಪ್ಪಳ ಬಳಿಯ ಕಾರ್ಖಾನೆಗಳ ವಿಸ್ತರಣೆಯಿಂದ ಪರಿಸರ ಮಾಲಿನ್ಯ ಉಂಟಾಗಿ ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಅರಿತು ನಗರಸಭೆ ಬಳಿ ಅನಿರ್ದಿಷ್ಟಾವಧಿ ಮುಷ್ಕರ ನಡೆದಿದ್ದು ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಈ ಕುರಿತು ಒಂದು ದಿನ ಸಹ ಈ ವಿಷಯ ಕುರಿತು ಪ್ರಸ್ತಾಪ ಮಾಡಲೇ ಇಲ್ಲ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರ ಸದನದಲ್ಲಿ ಕೊಪ್ಪಳದ ಬಳಿಯ ಕಾರ್ಖಾನೆ ಸ್ಥಾಪನೆಯಿಂದ ಉಂಟಾಗುವ ದುಷ್ಪರಿಣಾಮಗಳು ಕುರಿತು ಸಾಕಷ್ಟು ವಿಷಯ ಪ್ರಸ್ತಾಪ ಮಾಡಿ ಮಾತನಾಡಿದರು ಆದರೆ  ಸಂಸದ ಶಾಸಕರು ಸದನದಲ್ಲಿ ಮಾತನಾಡಲೇ ಇಲ್ಲ ಅವರಿಗೆ ಜನರ ಆರೋಗ್ಯ ಬೇಕಾಗಿಲ್ಲ ಇದಕ್ಕೆ ಕಾಲವೇ ಉತ್ತರ ನೀಡುವುದು

 ಕರ್ನಾಟಕದ ಜೆಮಶೆಡ್ಪುರ ಎಂದೇ ಹೆಸರು ಪಡೆದಿರುವ  ಕೊಪ್ಪಳ ಜಿಲ್ಲೆಯಲ್ಲಿ 17 ಮಧ್ಯಮ ಪ್ರಮಾಣದ ಕೈಗಾರಿಕೆಗಳು, 13 ಬೃಹತ್ ಕೈಗಾರಿಕೆಗಳು ಸೇರಿದಂತೆ ಸುಮಾರು 200 ಕೈಗಾರಿಕಾ ಘಟಕಗಳು ಇವೆ ಎಂದು ಕಳೆದ ಎರಡು ವರ್ಷದ ದಾಖಲೆಗಳು ಹೇಳುತ್ತವೆ,ಕಬ್ಬಿಣ, ಉಕ್ಕು, ಸಿಮೆಂಟ್ ಹಾಗೂ ರಸಗೊಬ್ಬರ ಉತ್ಪನ್ನಗಳಲ್ಲಿ ತೊಡಗಿಕೊಂಡಿರುವ ಘಟಕಗಳ ಸಂಖ್ಯೆ 20ಕ್ಕೂ ಅಧಿಕ. ಕೊಪ್ಪಳ ನಗರದ ಸುಮಾರು ಹತ್ತು ಕಿಲೊಮೀಟರ್ ವ್ಯಾಪ್ತಿಯಲ್ಲಿ ಎರಡು ಡಜನ್ಗಳಷ್ಟು ಸಂಖ್ಯೆಯಲ್ಲಿರುವ ಉತ್ಪಾದನಾ ಘಟಕಗಳು ಗಿಣಿಗೇರಾ, ಹಿರೆಬಗನಾಳ, ಚಿಕ್ಕ ಬಗನಾಳ, ಕಾಸನಕಿಂಡಿ, ಹಾಲವರ್ತಿ, ಕುಣಿಕೇರಿ, ಅಲ್ಲಾ ನಗರ, ಹಿಟ್ನಾಳ್, ಮುನಿರಾಬಾದ ಹಾಗೂ ಕರ್ಕಿಹಳ್ಳಿಯಲ್ಲಿ ನೆಲೆಗೊಂಡಿರುವುದರಿಂದ ಈ ಮಾರ್ಗವನ್ನು ಜಿಲ್ಲೆಯ ಇಂಡಸ್ಟಿಯಲ್ ಕಾರಿಡಾರ್ ಎಂದು ಗುರುತಿಸಲಾಗುತ್ತಿದೆ. ಯಾವ ಕೈಗಾರಿಕೆಗಳು ಜನರ ಬದುಕನ್ನು ಸುಧಾರಿಸಬೇಕಿತ್ತೋ ಅಂತಹ ಕೈಗಾರಿಕೆಗಳು ಜನರ ಬದುಕಿಗೆ ಶಾಪವಾಗಿ ಪರಿಣಮಿಸಿರುವುದು ದುರಂತ ಇಂದು ಭಾಗ್ಯನಗರ ಕೊಪ್ಪಳ ಬಂದ್ ಕಾರ್ಯಕ್ರಮಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಳ್ಳುವರು ಎಂದರು.  ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಮೂರ್ತ್ಯೆಪ್ಪ ಗಿಣಿಗೇರಾ, ಸೋಮನಗೌಡ ಹೊಗರನಾಳ, ರಮೇಶ್ ಕುಣಿಕೇರಾ, ಸುರೇಶ್ ದದೇಗಲ್, ಮೌನೇಶ್ ಕಿನ್ನಾಳ ಉಪಸ್ಥಿತರಿದ್ದರು.