ಮೋದಿ ನಾಯಕತ್ವಕ್ಕೆ ರಾಜ್ಯದ ಜನತೆ ಸ್ವಯಂಪ್ರೇರಿತ ಬೆಂಬಲವಾಗಿ; ಜಗದೀಶ ಶೆಟ್ಟರ

ರಾಮದುರ್ಗ 21: ಮೋದಿ ನಾಯಕತ್ವ ಬೆಂಬಲಿಸಿ ರಾಜ್ಯದ ಜನತೆ ಮತ್ತೊಮ್ಮೆ ಅವರು ಪ್ರಧಾನಿಯನ್ನಾಗಿಸಲು ಸ್ವಯಂಪ್ರೇರಿತವಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದು, ರಾಜ್ಯದಲ್ಲಿ 22 ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯಥರ್ಿಗಳ ಗೆಲವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರವಾಸ ಗೈಗೊಂಡಿದ್ದು, ಮೋದಿ ನಾಯಕತ್ವದಿಂದ ಜನತೆ ಹುಮ್ಮಸ್ಸಿನಿಂದ ಬಿಜೆಪಿಗೆ ಮತ ನೀಡಲು ಮುಂದಾಗಿದ್ದಾರೆ. ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ಎರಡೂ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯಥರ್ಿಗಳು ಲಕ್ಷಕ್ಕಿಂತ ಅಧಿಕ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯವರ ವಿರುದ್ಧ ಮಹಾಘಟ್ಬಂಧನ ಎಂದು ಹೇಳಿಕೊಂಡು ತಿರುಗುತ್ತಿರುವ ಇತರ ಪಕ್ಷಗಳಲ್ಲಿ ಪ್ರಧಾನಮಂತ್ರಿ ಅಭ್ಯಥರ್ಿ ಯಾರೆಂಬುವುದೇ ಗೊತ್ತಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ನ ಕುಟುಂಬ ರಾಜಕಾರಣದಿಂದ ಜನತೆ ಬೇಸತ್ತು ಹೋಗಿದ್ದಾರೆ. ಈ ಬಾರಿ ದೇಶದಲ್ಲಿ 300 ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡು ಮೋದಿಯವರು ಮತ್ತೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಜನತೆಯ ಸೇವೆ ಮಾಡಲಿದ್ದಾರೆ. ದೇಶದ ಹಿತದೃಷ್ಠಿಯಿಂದ ದೇಶಕ್ಕಾಗಿ ಮೋದಿ ನಾಯಕತ್ವ ಅವಶ್ಯಕವೆಂದರು.

60 ವರ್ಷಗಳ ಆಡಳಿತದ ಅವಧಿಯಲ್ಲಿ ಕೇವಲ 12 ಲಕ್ಷ ಬಡ ಮಹಿಳೆಯರಿಗೆ ಮಾತ್ರ ಕಾಂಗ್ರೆಸ್ ಉಚಿತ ಎಲ್ಪಿಜಿ ಗ್ಯಾಸ ನೀಡಿದೆ. ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ಉಜ್ವಲಾ ಯೋಜನೆಯಡಿಯಲ್ಲಿ 5 ವರ್ಷಗಳಲ್ಲಿ 13 ಕೋಟಿ ಉಚಿತ ಗ್ಯಾಸ ವಿತರಿಸಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಲ್ಲಿ 10 ಲಕ್ಷ ಬಡ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಿದ್ದಾರೆ. ಪ್ರತಿ ರೈತರಿಗೆ 6000 ರೂಗಳನ್ನು ನೀಡಲು ಯೋಜನೆ ರೂಪಿಸಿದ್ದಾರೆ. ಜೊತೆಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ ನಂತರ ಮುಪ್ಪಾವಸ್ಥೆಯ ನಿವೃತ್ತಿ ರೈತರಿಗೆ ತಿಂಗಳಿಗೆ 5000 ಸಾವಿರ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಕಾರಣ ಈ ಬಾರಿ ಪತ್ರಿಯೊಬ್ಬ ಮತದಾರರು ದೇಶಕ್ಕೆ ಸುಭದ್ರ ಆಡಳಿತ ದೊರೆಯಲು ಬಿಜೆಪಿ ಅಭ್ಯಥರ್ಿಗಳಿಗೆ ಮತ ನೀಡಿ, ನರೇಂದ್ರಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ, ಡಾ. ಕೆ.ವ್ಹಿ. ಪಾಟೀಲ, ರಾಜೇಶ ಬೀಳಗಿ, ಬಿಜೆಪಿ ತಾಲೂಕಾ ಘಟಕದ ಅಧ್ಯಕ್ಷ ಜಿ.ಜಿ. ಪಾಟೀಲ, ಮಲ್ಲಣ್ಣ ಯಾದವಾಡ, ಭಾರತಿ ಮಗದುಮ್, ಜಿ.ಪಂ ಸದಸ್ಯರಾದ ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ ಸೇರಿದಂತೆ ಇತರರಿದ್ದರು.