ಅಂಬೇಡ್ಕರ್ ಬದುಕಿನ ಆದರ್ಶಗಳು ನಮ್ಮೊಂದಿಗಿವೆ ಅವುಗಳು ಪ್ರಾಮಾಣಿಕ ಅನುಸರಣೆಯ ಅಗತ್ಯ : ಡಾ.ವಿನಯಾ ಹೂಗಾರ

ಅಂಬೇಡ್ಕರ್ ಬದುಕಿನ ಆದರ್ಶಗಳು ನಮ್ಮೊಂದಿಗಿವೆ ಅವುಗಳು ಪ್ರಾಮಾಣಿಕ ಅನುಸರಣೆಯ ಅಗತ್ಯ : ಡಾ.ವಿನಯಾ ಹೂಗಾರ The ideals of Ambedkar's life are with us and they need sincere adherence: Dr. Vinaya Hoogara

ತಾಳಿಕೋಟಿ 06 : ಸಂವಿಧಾನ ಶಿಲ್ಪಿ, ಮಹಾನ್ ಚಿಂತಕರಾದ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಸದಾ ಸ್ಮರಿಸುವಂತಹ ಕಾರ್ಯವನ್ನು ಮಾಡಿ ಹೋಗಿದ್ದಾರೆ. ಅವರು ನಮ್ಮ ಮಧ್ಯೆದಲ್ಲಿ ಇಲ್ಲದಿದ್ದರೂ ಅವರ ಬದುಕಿನ ಆದರ್ಶಗಳು ನಮ್ಮೊಂದಿಗಿವೆ ಅವುಗಳು ಪ್ರಾಮಾಣಿಕ ಅನುಸರಣೆಯ ಅಗತ್ಯ ಇದೆ ಎಂದು ತಹಸಿಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು. ಶನಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕ ಆಡಳಿತದ ವತಿಯಿಂದ ಡಾ.ಬಿ. ಆರ್‌.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲ ದೇಶವಾಸಿಗಳಿಗೂ ಅನ್ವಯವಾಗುವಂತೆಯೇ ಕೂಡಾ ಎಲ್ಲ ಜಾತಿ ವರ್ಗದ ಜನರಿಗೂ ಅನ್ವಯವಾಗುತ್ತಾರೆ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ಆಗಬಾರದು ಎಂದರು. ದಲಿತ ಮುಖಂಡರಾದ ಬಸವರಾಜ ಕಟ್ಟಿಮನಿ, ಜೈ ಭೀಮ ಮುತ್ತಗಿ ಹಾಗೂ ದೇವೇಂದ್ರ ಹಾದಿಮನಿ ಅವರು ಮಾತನಾಡಿ ಡಾ.ಬಾಬಾ ಸಾಹೇಬರು ದೇಶಕ್ಕೆ ಕೊಟ್ಟು ಹೋದಂತಹ ವಿಶ್ವ ಶ್ರೇಷ್ಠ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಅಗತ್ಯವಿದ್ದು ಸಂವಿಧಾನದ ಆಶಯಗಳ ಈಡೇರಿಕೆಯಿಂದ ಮಾತ್ರ ದೇಶದ ಪ್ರಗತಿ ಮತ್ತು ಉನ್ನತಿ ಸಾಧ್ಯವಿದೆ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ ಅವರ ಅನುಯಾಯಿಗಳಾದ ನಾವು ಕೂಡ ಅವರ ಮಾರ್ಗದಲ್ಲಿಯೇ ನಡೆಯುವ ಅಗತ್ಯವಿದೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪುತ್ಥಳಿಗೆ ತಾಲೂಕ ಆಡಳಿತದ ವತಿಯಿಂದ ಹುಮಾಲೆಯನ್ನು ಅರ​‍್ಿಸಿ ನಂತರ ಅವರ ಭಾವಚಿತ್ರವನ್ನಿಟ್ಟು ಬೌದ್ಧ ಧರ್ಮದ ವಿಧಿ ವಿಧಾನದಂತೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್‌. ಬಿ.ಕಟ್ಟಿಮನಿ,ಮುಖಂಡರಾದ ಮುತ್ತಪ್ಪ ಚಮಲಾಪೂರ, ಹಣಮಂತ ಕೊಡಗಾನೂರ, ಶಂಕ್ರ​‍್ಪ ಕಟ್ಟಿಮನಿ (ಮೈಲೇಶ್ವರ), ಶಂಕರ ಪಡಸಾಲಿ,ಎಸ್‌.ಎಲ್‌.ಕೊಡಗಾನೂರ, ಸಂಜೀವಪ್ಪ ಬರದೇನಾಳ, ಗುರುಪ್ರಸಾದ ಗೊಟಖಂಡಕಿ, ಕಾಶಿನಾಥ ಕಾರಗನೂರ, ಜುಮ್ಮಣ್ಣ ನಾಲತವಾಡ,ಅಬೂಬಕರ ಲಾಹೋರಿ, ಲತೀಫ ಬೀಳಗಿ, ಶಿರಸ್ತೆದಾರ ಜೆ.ಆರ್‌.ಜೈನಾಪೂರ,ತಾಪಂ ನ ಮಹಾಂತಗೌಡ ದೊರೆಗೋಳ, ಪುರಸಭೆ ಕಚೇರಿ ವ್ಯವಸ್ಥಾಪಕ ಎಸ್‌.ಎಸ್‌. ಇಂಜಿಗನೇರಿ,ಕ್ಷೇತ್ರ ಸಮನ್ವಯಾಧಿಕಾರಿ ಆರ್‌. ಬಿ.ದಮ್ಮೂರಮಠ, ಕೃಷಿ ಅಧಿಕಾರಿ ಮಹೇಶ ಜೋಶಿ, ಹೆಸ್ಕಾಂ ಎಇ ಶಿವನಗೌಡ ಪಾಟೀಲ,ಸಿಆರ್ಸಿ ರಾಜು ವಿಜಾಪುರ, ಸಮಾಜ ಕಲ್ಯಾಣ ಇಲಾಖೆಯ ಎಸ್‌.ಎನ್‌. ಮಲ್ಲಾಡೆ,ಎನ್‌.ವಿ.ಕೋರಿ,ಎಸ್‌.ಎಂ.ಕಲಬುರ್ಗಿ, ಮಹಾಂತೇಶ ತಾಳಿಕೋಟಿ, ರೇಣುಕಾ ಪಾಟೀಲ ಮತ್ತಿತರರು ಇದ್ದರು.