ನಾಡಿನ ಇತಿಹಾಸ, ಶಿಲ್ಪಕಲೆ ಶ್ರೇಷ್ಠವಾದದ್ದು- ಪ್ರೊ.ಬಿ.ಕೆ ರವಿ
The country's history and architecture are great - Prof. B.K. Ravi
ಕೊಪ್ಪಳ 15: ನಾಡಿನ ಹಂಪೆ, ಬೇಲೂರು, ಹಳೆಬೀಡು, ಚಿತ್ರದುರ್ಗ, ಕಿತ್ತೂರು, ಕೊಪ್ಪಳದ ಇತಿಹಾಸ, ಶಿಲ್ಪ ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಶ್ರೇಷ್ಠವಾದದ್ದು, ಇತಿಹಾಸ ಪ್ರಸಿದ್ದವಾದದ್ದು, ಇತಿಹಾಸದ ವಿದ್ಯಾರ್ಥಿಗಳು ಇಂತಹ ಇತಿಹಾಸವನ್ನು ಚನ್ನಾಗಿ ಅಧ್ಯಯನ ಮಾಡಿದರೆ, ಒಳ್ಳೆಯ ಅವಕಾಶಗಳು ಕೈ ಬೀಸಿ ಕರೆಯಲಿವೆ. ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ.ರವಿಯವರು ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯ ಬಾನಾಪುರ ಬಳಿಯ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತಕ್ಕಾಗಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲು ಗೀಳು ತ್ಯಜಿಸಿ ನಾಡಿನ ಇತಿಹಾಸ, ನಾಡಿನ ಸಮಾಜ ಸುಧಾರಕರು, ಶರಣರು,ದಾಸರು, ದಾರ್ಶನಿಕರು ಸ್ವಾತಂತ್ರ್ಯ ಯೋಧರ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿ, ಜನರಿಗೆ ತಿಳಿಸಬೇಕಾದ ಮಹತ್ವದ ಜವಾಬ್ದಾರಿಯನ್ನು ಸಮರ್ಕವಾಗಿ ನಿರ್ವಹಿಸಬೇಕು ಎಂದರು.
ಇತಿಹಾಸದಲ್ಲಿ ಕೊಪ್ಪಳ ಭಾಗಕ್ಕೆ ತಿರುಳ್ಗನ್ನಡ ನಾಡೆಂಬ ಹೆಸರಿದೆ. ಕವಿರಾಜ ಮಾರ್ಗ ಕೃತಿಯಲ್ಲಿ ’ಕುರಿತೋದೆಯಂ ಕಾವ್ಯ ಪರಿಣಿತ ಮತಿಗಳ್ ಪ್ರದೇಶಂ ಕೊಪಣಾಚಲ ಪ್ರದೇಶಂ’ ಎಂಬ ಉಲ್ಲೇಖವಿದೆ. ಈ ಭಾಗಕ್ಕೆ ಒಳ್ಳೆಯ ಇತಿಹಾಸ ಇದೆ, ಇದನ್ನು ಸಮರ್ಕವಾಗಿ ಅಧ್ಯಯನ ಮಾಡಿ ನಾಡಿಗೆ ತಿಳಿಸಿಕೊಡಿ ಎಂದರು. ನಾಡಿನ ದಾಸ ಸಾಹಿತ್ಯ, ಚಚನ ಸಾಹಿತ್ಯ, ಇತರ ಕೊಡುಗೆಗಳ ಬಗ್ಗೆ ಈ ವೇಳೆ ತಿಳಿಸಿದರು.ಇದೇ ವೇಳೆ ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಕುಲ ಸಚಿವರಾದ ಪ್ರೊ. ಎಸ್.ವಿ. ಡಾಣಿಯವರು ಮಾತನಾಡಿ,ಕನ್ನಡ ನಾಡು ಶ್ರೀಮಂತ ಇತಿಹಾಸವನ್ನು ಹೊಂದಿದೆ,
ನಾಡಿಗೆ ಸಿಡಿಲ ಮರಿಗಳನ್ನು ನೀಡಿದೆ ಎಂದರಲ್ಲದೇ ಇತಿಹಾಸದಲ್ಲಿನ ಶ್ರೇಷ್ಠ ಅಂಶಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇತಿಹಾಸ ಅರಿತವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ ಎಂದು ಹೇಳಿದರು. ಈ ವೇಳೆ ಮಾತನಾಡಿದ ಆಡಳಿತಾಧಿಕಾರಿಗಳಾದ ಪ್ರೊ.ತಿಮ್ಮಾರೆಡ್ಡಿ ಮೇಟಿಯವರು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮವಹಿಸಿ ಅಧ್ಯಯನ ಮಾಡಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಕೆ.ಸೆಟ್ ಪರೀಕ್ಷೆಯಲ್ಲಿ ಈ ಬಾರಿ ವಿಜೇತರಾದ ಪ್ರಕಾಶ, ಬಸವರಾಜ ಜಾಲಿಹಾಳ ಹಾಗೂ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಈ ವೇಳೆ ಸನ್ಮಾನಿಸಲಾಯಿತು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಗೀತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಲವು ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದಯಾರ್ಥಿಗಳಾದ ಸೌಜನ್ಯ ಸ್ವಾಗತಿಸಿದರು, ಬಸವರಾಜ ಹಾರ್ನಳ್ಳಿ ನಿರೂಪಿಸಿದರು, ಹನುಮಂತ ಯಾದವ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 