ಮಕ್ಕಳ ಕಲಿಕಾ ವೃದ್ಧಿಗೆ ಶಿಕ್ಷಕರು ಮಾನಸಿಕವಾಗಿ ಸದೃಢರಾಗಿರಬೇಕು: ಡಾ. ಮಹೇಶ ದೇಸಾಯಿ
Teachers should be mentally strong for children's learning development: Dr. Mahesh Desai
ಧಾರವಾಡ 14: ವರ್ಗಕೋಣೆಯಲ್ಲಿ ಕಲಿಕೆಯ ಸಾಮರ್ಥ್ಯ ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ಬೋಧಿಸಬೇಕಾಗುತ್ತದೆ. ಕಲಿಕಾ ಅಸಮರ್ಥತೆಗಳಿಗೆ ಸಂಬಂಧಿಸಿದಂತೆ ಓದು, ಬರಹ, ಗಣಿತ ಮತ್ತು ಭಾಷಾ ಕಲಿಕೆಯಲ್ಲಿ ಮಕ್ಕಳು ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಮೂಲಕ ಮಕ್ಕಳ ಕಲಿಕಾ ವೃದ್ಧಿಗೆ ಶಿಕ್ಷಕರು ಮಾನಸಿಕವಾಗಿ ಸದೃಢರಾಗಿರಬೇಕೆಂದು ಹುಬ್ಬಳ್ಳಿಯ ಕಿಮ್ಸ ಮಾನಸಿಕ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ ದೇಸಾಯಿ ಹೇಳಿದರು. ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾದ ಕಲಿಕೆಯ ಅಸಮರ್ಥತೆಗಳ ಎಂಬ ವಿಷಯದ ಮೇಲಿನ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆಗಳಲ್ಲಿ ಕಲಿಕಾ ಅಸಮರ್ಥತೆಯನ್ನು ಎದುರಿಸುತ್ತಿರುವ ಮಕ್ಕಳಿಗೆ ಒದಗಿಸಬೇಕಾದ ಆಂತರಿಕ ಬೆಂಬಲ, ಬಲವರ್ಧನೆ ಮತ್ತು ಪ್ರಾಯೋಗಿಕ ಸಹಾಯದ ಕುರಿತು ಮಾಹಿತಿ ನೀಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಹಾನುಭೂತಿ ಹಾಗೂ ಧೈರ್ಯ ತುಂಬುವ ವಾತಾವರಣ ನಿರ್ಮಾಣವಾಗಬೇಕು. ಮಕ್ಕಳು ಮೂಲತಃ ಕುತೂಹಲಿಗಳು. ಅವರಿಗೆ ಪ್ರೋತ್ಸಾಹದಾಯಕ ಪರಿಸರ ಮತ್ತು ಸಮಯ ನೀಡಿದರೆ ಆಸಕ್ತಿ ತಾನಾಗಿಯೇ ಬೆಳೆಯುತ್ತದೆ.
ಇ-ಗ್ಯಾಜೆಟ್‌ಗಳ ಬಳಕೆಯನ್ನು ಸಮಯೋಚಿತವಾಗಿ ನಿಬಂರ್ಧಿಸುವುದು ಅವಶ್ಯಕ. ಎಡಿಹೆಚ್ ಇದು ಒಂದು ನ್ಯೂರೋ ವಿಕಾಸಾತ್ಮಕ ಸ್ಥಿತಿಯಾಗಿದ್ದು, ಇದರ ಪ್ರಮುಖ ಲಕ್ಷಣಗಳೆಂದರೆ ಗಮನ ಕೇಂದ್ರೀಕರಿಸಲು ಕಷ್ಟ, ಅತಿಯಾದ ಚಂಚಲತೆ, ಬೇಗ ಬೇಸರವಾಗುವುದು ಮತ್ತು ಯೋಚಿಸದೆ ವರ್ತಿಸುವುದು. ಇದಕ್ಕೆ ಪರಿಹಾರಗಳೆಂದರೆ ಸರಿಯಾದ ಓಷಧೋಪಚಾರ, ಸಮಯ ನಿರ್ವಹಣೆ ಮತ್ತು ಪಾಲಕರಿಗೆ ನೀಡುವ ತರಬೇತಿಯಿಂದ ಇದನ್ನು ನಿಯಂತ್ರಿಸಬಹುದು ಎಂದರು. ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಲು ಯೋಗ, ಧ್ಯಾನ, ಪೌಷ್ಟಿಕ ಆಹಾರ ಮತ್ತು ಉತ್ತಮ ಜೀವನಶೈಲಿ ಅಗತ್ಯ. ಮಕ್ಕಳನ್ನು ಹೋಲಿಕೆ ಮಾಡುವುದನ್ನು ಬಿಟ್ಟು, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂದರು.
ಉಪನಿರ್ದೇಶಕರು(ಅ) ಹಾಗೂ ಪ್ರಾಚಾರ್ಯರು ಡಯಟ್ ಬಸವರಾಜ ನಾಲವತವಾಡ ಅವರು ಮಾತನಾಡುತ್ತಾ, ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು. ಡಾ. ನಿಹಾರಿಕಾ ಅವರು 'ಒತ್ತಡ ನಿರ್ವಹಣೆ' ಮತ್ತು ಡಾ. ಅಮೂಲ್ಯ ಅವರು 'ಸಮಯ ನಿರ್ವಹಣೆ' ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಈ ಕಾರ್ಯಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಸಂಜೀವಕುಮಾರ ಭೂಶೆಟ್ಟಿ, ಸುರೇಶ ಮುಗಳಿ, ಸಂಜೀವ ಕುಂದಗೋಳ, ರವಿ ಕುಲಕರ್ಣಿ ಹಾಗೂ ಅನ್ವರ ಸನದಿ, ಡಯಟ್‌ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಸಿಬ್ಬಂದಿಯವರು ಹಾಜರಿದ್ದರು. ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 